ಸೆ.30ರವರೆಗೆ ಭಾರತದಲ್ಲಿರುವ ವಿದೇಶಿಗರ ವೀಸಾ ವಿಸ್ತರಣೆ

ನವದೆಹಲಿ: ಕೋವಿಡ್-19ನಿಂದಾಗಿ ಭಾರತದಲ್ಲಿ ಸಿಲುಕಿರುವ ಎಲ್ಲಾ ವಿದೇಶಿಗರ ವೀಸಾವನ್ನು ಸೆಪ್ಟೆಂಬರ್ 30ರವರೆಗೂ ವಿಸ್ತರಿಸಲಾಗಿದೆ ಎಂದು ಕೇಂದ್ರ ಸರ್ಕಾರ ಗುರುವಾರ ಘೋಷಿಸಿದೆ.

ಮಾರ್ಚ್ 2020ರಲ್ಲಿ ವಿವಿಧ ರೀತಿಯ ವೀಸಾ ಮೂಲಕ ಭಾರತಕ್ಕೆ ಬಂದ ಹಲವಾರು ವಿದೇಶಿಗರು ಕೊರೊನಾ ವೈರಸ್‍ನಿಂದಾಗಿ ತಮ್ಮ ದೇಶಗಳಿಗೆ ತಲುಪಲು ವಿಮಾನಗಳ ಅನುಪಸ್ಥಿತಿ ಕಾರಣ ಭಾರತದಲ್ಲಿಯೇ ಸಿಲುಕಿಕೊಂಡಿದ್ದರಿಂದ ವೀಸಾವನ್ನು ವಿಸ್ತರಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:ಬೆಂಗಳೂರಿನಲ್ಲಿ ತಲೆ ಎತ್ತಿರುವ ಅಕ್ರಮ ಕ್ಯಾಸಿನೋ ಅಡ್ಡೆಗಳನ್ನು ಕೂಡಲೇ ನಿಲ್ಲಿಸಿ – ಕೆಜೆ ಜಾರ್ಜ್ ಪತ್ರ

 

ಸೆಪ್ಟೆಂಬರ್ 30ರವರೆಗೂ ವೀಸಾ ವಿಸ್ತರಣೆಗಾಗಿ ಸಂಬಂಧಿಸಿದ ಎಫ್‌ಆರ್‌ಆರ್‌ಒ / ಎಫ್‌ಆರ್‌ಒ ಅರ್ಜಿಯನ್ನು ವಿದೇಶಿಗರು ಸಲ್ಲಿಸುವ ಅಗತ್ಯವಿಲ್ಲ. ಆದರೆ ನಿರ್ಗಮಿಸುವ ಮೊದಲು ಇ-ಎಫ್‌ಆರ್‌ಆರ್‌ಒ ಪೋರ್ಟಲ್‍ನಲ್ಲಿ ನಿರ್ಗಮನ ಅನುಮತಿಗಾಗಿ ಆನ್‍ಲೈನ್‍ನಲ್ಲಿ ಅರ್ಜಿಸಲ್ಲಿಸಬೇಕಾಗುತ್ತದೆ. ಇದಕ್ಕೆ ಹೆಚ್ಚು ಶುಲ್ಕವನ್ನು ವಿಧಿಸದೇ ಉಚಿತವಾಗಿ ಆಧಾರದ ಮೇಲೆ ಸಂಬಂಧಿಸಿದ ಎಫ್‌ಆರ್‌ಆರ್‌ಒ / ಎಫ್‌ಆರ್‌ಒ ಅರ್ಜಿಯನ್ನು ನೀಡಲಾಗುವುದು ಮತ್ತು ಸೆಪ್ಟೆಂಬರ್ 30ರ ನಂತರ ವೀಸಾ ವಿಸ್ತರಣೆಯ ಅಗತ್ಯವಿದ್ದಲ್ಲಿ, ವಿದೇಶಿಗರು ಆನ್‍ಲೈನ್ ಇ-ಎಫ್‌ಆರ್‌ಆರ್‌ಒ ಪೋರ್ಟಲ್‍ನಲ್ಲಿ ವೀಸಾ ವಿಸ್ತರಣೆಗೆ ಪಾವತಿ ಆಧಾರದ ಮೇಲೆ ಅರ್ಜಿ ಸಲ್ಲಿಸಬಹುದು. ಇದನ್ನು ಎಫ್‌ಆರ್‌ಆರ್‌ಒ / ಎಫ್‌ಆರ್‌ಒ ಪರಿಗಣಿಸುತ್ತದೆ.

blank

ಈಗಾಗಲೇ ಭಾರತದಲ್ಲಿರುವ ಅಫ್ಘಾನಿಸ್ತಾನ ಪ್ರಜೆಗಳಿಗೆ ಪ್ರತ್ಯೇಕವಾಗಿ ನೀಡಲಾಗಿರುವ ಮಾರ್ಗ ಸೂಚಿಗಳ ಅಡಿಯಲ್ಲಿ ವೀಸಾ ವಿಸ್ತರಣೆಯನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹೆಂಡತಿಯೊಂದಿಗೆ ಜಗಳ ವಿಷ ಕುಡಿದೆ ಎಂದು ಪೊಲೀಸರಿಗೆ ಪತಿರಾಯನ ಕರೆ

Source: publictv.in Source link