ಕೇವಲ 40 ವರ್ಷಕ್ಕೆ ಬಿಟ್ಟು ಹೋದರು.. ಹುಡುಗಿಯರ ಹೃದಯದಲ್ಲಿದ್ದ ರಾಜಕುಮಾರ ಸಿದ್ಧಾರ್ಥ್​​ ಬದುಕಿನ ಜರ್ನಿ

ಕೇವಲ 40 ವರ್ಷಕ್ಕೆ ಬಿಟ್ಟು ಹೋದರು.. ಹುಡುಗಿಯರ ಹೃದಯದಲ್ಲಿದ್ದ ರಾಜಕುಮಾರ ಸಿದ್ಧಾರ್ಥ್​​ ಬದುಕಿನ ಜರ್ನಿ

ಹಿಂದಿ ಧಾರಾವಾಹಿಯಲ್ಲಿ ನಟಿಸಿ ಅದೆಷ್ಟೋ ಹುಡುಗಿಯರ ಕನಸಿನ ರಾಜಕುಮಾರನಾಗಿದ್ದ ಸಿದ್ದಾರ್ಥ್ ಇಂದು ನಮ್ಮನ್ನೆಲ್ಲ ಅಗಲಿದ್ದಾರೆ. ಅವರ ಫಿಟ್​​ನೆಸ್​​​, ಅವರ ಆಟಿಟ್ಯೂಡ್​​​ನಿಂದಲೇ ಭಾರತದಲ್ಲಿ ಅದೆಷ್ಟೋ ಅಭಿಮಾನಿಗಳ ಮನ ಗೆದ್ದಿದ್ದ ಸಿದ್ದಾರ್ಥ್​ ಇಂದು ಎಲ್ಲರಿಗು ಬಿಗ್ ಶಾಕ್ ಕೊಟ್ಟಿದ್ದಾರೆ. ಹಾಗಾದ್ರೆ ಅವರ ಇಷ್ಟು ವರ್ಷದ ಸಿನಿ ಜರ್ನಿ ಕುರಿತ ಮಾಹಿತಿ ಇಲ್ಲಿದೆ.

ಸಿದ್ದಾರ್ಥ್ ಸಲುವಾಗಿ ಅದೆಷ್ಟೋ ಅಭಿಮಾನಿಗಳು ಕಣ್ಣೀರು ಹಾಕುತ್ತಿದ್ದಾರೆ. ಯಾಕಂದ್ರೆ ಒಂದು ದಿನವೂ ಬಿಡುವಿಲ್ಲದೆ, ರಾಶಿ ರಾಶಿ ಕನಸುಗಳನ್ನು ಹೋತ್ತು, ಕಿರುತೆರೆ, ಹಿರಿ ತೆರೆ ಹೀಗೆ ಎಲ್ಲ ವರ್ಗದ ಜನರನ್ನು ರಂಜಿಸಿ, ಲಕ್ಷ ಲಕ್ಷ ಅಭಿಮಾನಿ ಬಳಗವನ್ನು ತನ್ನಾದಾಗಿಸಿಕೊಂಡು ತನ್ನದೆ ಪ್ರಪಂಚದಲ್ಲಿ ರಾಜನಂತೆ ರಾರಾಜಿಸುತ್ತಿದ್ದ ಈ ನಟ ನಮ್ಮ ನಡುವೆ ಇಲ್ಲವಾಗಿದ್ದಾನೆ. ಕಣ್ಣಿನಲ್ಲಿ ಸಧಾ ಕಿಚ್ಚು ಹೊತ್ತು, ತನ್ನ ನಿಲುವನ್ನು ಸಾಧಿಸಲು ಧ್ವನಿ ಎತ್ತುತ್ತಿದ್ದವನು, ಮೌನವಾಗಿ ಕಣ್ಮರೆಯಾಗಿ ಬಿಟ್ಟಿದ್ದಾನೆ. ಪ್ರತಿ ಭಾರಿ ದಿಟ್ಟ ಹೆಜ್ಜೆಯನ್ನು ಇಡುತ್ತಿದ್ದವನು, ಹೆಜ್ಜೆ ಗುರುತುಗಳನ್ನು ಉಳಿಸಿ ನಮ್ಮೆಲ್ಲರಿಂದ ದೂರವಾಗಿದ್ದಾರೆ.

blank

ಇವರ ಜೀವನ, ಜೀವನ ಶೈಲಿ.. ಎಲ್ಲವೂ ಸ್ಫೂರ್ತಿದಾಯಕವೇ, ನೋಡಲು ಕಟ್ಟು ಮಸ್ತು ದೇಹ ಉಳ್ಳ ಸಿದ್ದಾರ್ಥ್, ಕಿರುತೆರೆಯಲ್ಲಿ ಎಲ್ಲ ವರ್ಗದ ಜನರ ಮನಸ್ಸಲ್ಲಿ ಮನೆ ಮಾಡಿದವನು. ಮಾಡಲಿಂಗ್ ನಿಂದ ಶುರುವಾದ ಈತನ ಜರ್ನಿ, ಜಾಹಿರಾತುಗಳು, ಹಿಟ್ ಧಾರವಾಹಿಗಳು, ಸಿನಿಮಾ, ಬಿಗ್ ಬಾಸ್, ಮ್ಯೂಸಿಕ್ ಆಲ್ಬಂ ಹೀಗೆ ಒಂದೆರೆಡಲ್ಲ ಇವನ ಸಾಧನೆ. ಎಲ್ಲ ಶೋಗಳು ಇವನ ಪ್ರದರ್ಶನಕ್ಕೆ ಸಾಕಷ್ಟು ಹೆಸರು ತಂದು ಕೊಟ್ಟಿತ್ತು. ಆದರೆ ಅಷ್ಟು ಹೆಸರುಗಳು ಮಣ್ಣುಪಾಲಾದಂತೆ, ಕೇವಲ 40ನೇ ವಯಸ್ಸಿಗೆ ಸಿದ್ದಾರ್ಥ್ ಶುಕ್ಲಾ ಹೃದಯಾಘಾತದಿಂದ ನಿನ್ನೆ ಸಾವನ್ನಪ್ಪಿದ್ದಾರೆ. ಇವರ ಈ ಅಕಾಲಿಕ ನಿಧನದಿಂದ ಹಿಂದಿ ಕಿರುತೆರೆ ತಾರೆಯರು ಮತ್ತು ಅಭಿಮಾನಿಗಳು ದಿಗ್ಭ್ರಮೆಗೊಂಡಿದ್ದಾರೆ.

ಅವರ ನೆನಪುಗಳು ನಮ್ಮಲ್ಲೆ ಉಳಿಯುವ ಹಾಗೆ ಮಾಡಿದವರು. ಸ್ವತಃ ತಾನೇ, ಯಾರ ಬೆಂಬಲಕ್ಕೂ ಕಾಯದೆ ತನ್ನದೇ ಆದ ಅಭಿಮಾನಿ ಸಾಮ್ರಾಜ್ಯವನ್ನು ಕಟ್ಟಿ, ಹಿಂದಿ ಕಿರುತೆರೆಯ ಪ್ರಖ್ಯಾತ ನಟ ಎನಿಸಿಕೊಂಡು, ಎಲ್ಲರ ಮನದಲ್ಲಿ ಚಿರವಾಗಿ ನೆಲೆಸಿದ್ದಾರೆ.

ಸಿದ್ದಾರ್ಥ್​ ಕನಸು ಹೇಗಿತ್ತು..?
ಸಿದ್ದಾರ್ಥ, ಡಿಸೆಂಬರ್ 12, 1980 ರಂದು ಮುಂಬೈನಲ್ಲಿ ಜನಿಸಿದವರು. ಅಶೋಕ್ ಶುಕ್ಲಾ-ರಿತಾ ಶುಕ್ಲಾ ದಂಪತಿಯ ಮಗನಾಗಿ ಜನಿಸಿದ ಸಿದ್ದಾರ್ಥ್ ಶುಕ್ಲಾ ಮೂಲತಃ ಇಂಟೀರಿಯರ್ ಡಿಸೈನಿಂಗ್‌ನಲ್ಲಿ ಪದವಿ ಪಡೆದಿದ್ದರು. ಇಂಟೀರಿಯರ್ ಡಿಸೈನರ್ ಆಗಿ ಕೆಲ ವರ್ಷ ಕೆಲಸ ಮಾಡಿದ ಸಿದ್ದಾರ್ಥ್ ಶುಕ್ಲಾಗೆ, ತನ್ನ ಲುಕ್ಸ್ ಹಾಗೂ ಆ್ಯಟಿಟ್ಯೂಡ್ ನಟನಾಗಲೂ ಹಾಗೂ ಮಾಡೆಲಿಂಗ್ ಲೋಕಕ್ಕೆ ಕಾಲಿಡುಲು ಸ್ಪೂರ್ತಿ ತುಂಬಿತ್ತು. ಸಣ್ಣ ವಯಸ್ಸಿನಲ್ಲೆ ತನ್ನ ತಂದೆಯನ್ನು ಕಳೆದುಕೊಂಡಿದ್ದರಿಂದ, ಮನೆಯ ಸಂಪೂರ್ಣ ಜವಾಬ್ದಾರಿ ಶುಕ್ಲಾ ಮೇಲಿತ್ತು. ಇದೆ ಕಾರಣಕ್ಕೆ ತನ್ನ ಕನಸಿನ ಮಾಡೆಲಿಂಗ್ ಜಗತ್ತಿನಿಂದ ಹಲವು ವರ್ಷ ದೂರವೇ ಉಳಿದಿದ್ದರು. ಆದರೆ 2005 ರಲ್ಲಿ ಟರ್ಕಿಯಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಲೇ ಬೇಕು ಅನ್ನುವ ಹುಮ್ಮಸ್ಸು ಅವರಲ್ಲಿ ಕಿಚ್ಚೆಬ್ಬಿಸಿತ್ತು.

blank

ಪರ್ಫೇಕ್ಟ್ ಬಾಡಿ ಪೋಸ್ಚರ್, ಮಸ್ಕ್ಯೂಲಾರ್ ಆರ್ಕ್ ಬಾಡಿ, ಸ್ಟೈಲಿಷ್ ಲುಕ್, ಪಂಚ್ ಆಟಿಟ್ಯೂಡ್ ಇನ್ನೇನು ಬೇಕು, ಒಬ್ಬ ಮಾಡಲ್ ಯಶಸ್ವಿಯಾಗಲೂ. ಟರ್ಕಿಯಲ್ಲಿ ನಡೆದ ವರ್ಲ್ಡ್ಸ್ ಬೆಸ್ಟ್ ಮಾಡೆಲ್ ಸ್ಪರ್ದೇಯಲ್ಲಿ ಭಾಗವಹಿಸಿ, ಅಂದೆ ಗೆಲುವಿನ ನಗೆ ಬೀರಿದ್ದರು ಸಿದ್ದಾರ್ಥ್. ಅಲ್ಲಿಂದ ಇವರಿಗೆ ಸಾಲು ಸಾಲು ಜಾಹಿರಾತುಗಳು ಬೆನ್ನಿ ಹತ್ತಿದ್ದವು, ತಮ್ಮ ವೃತ್ತಿಯನ್ನು ಕೈ ಚೆಲ್ಲಿ.. ತನ್ನ ನೆಚ್ಚಿನ ಜಗತ್ತಿಗೆ ಕಾಲಿಟ್ಟಿ ಯಶಸ್ಸಿನ ಪಥವನ್ನು ಮೆಟ್ಟಿದ್ದರು ಸಿದ್ದಾರ್ಥ್.

ಬಾಬುಲ್ ಕಾ ಆಂಗನ್ ಚೂಟೇ ನಾ ಮೊದಲ ಧಾರವಾಹಿ
ಮಾಡೆಲಿಂಗ್ ನಲ್ಲಿ ಬ್ಯುಸಿ ಆಗಿದ್ದ ಇವರಿಗೆ ಬಾಲಿವುಡ್ ಅಂಗಳದಲ್ಲಿ ಹೆಸರು ಸಿಕ್ಕಾಗಿತ್ತು. ಎಲ್ಲೆಲ್ಲೂ ಮಾಡೆಲ್ ಆಗಿ ಸಿದ್ದಾರ್ಥ್​ನ ಆ್ಯಡ್ಸ್ ಗಳು, ಪೋಟೋ ಪೋಸ್ಟರ್ಸ್ ಗಳು ರಾರಾಜಿಸುತ್ತಿತ್ತು. ಮುಂಬೈನ ಮನೆ ಮನೆಗೆ ಇನ್ನಷ್ಟು ಪರಿಚಯವಾಗಲೂ ಸಿದ್ದಾರ್ಥ್ ಮೊದಲ ಭಾರಿಗೆ 2008 ರಲ್ಲಿ ಧಾರವಾಹಿ ದುನಿಯಾಗೆ ಪದಾರ್ಪಣೆ ಮಾಡಿದ್ದರು. ಬಾಬುಲ್ ಕಾ ಆಂಗನ್ ಚೂಟೇ ನಾ.. ಇದೇ ಸಿದ್ದಾರ್ಥ್​ರವರ ಮೊಟ್ಟಮೊದಲ ಧಾರವಾಹಿ. ನಟನೆಯ ಬಗ್ಗೆ ಅರಿವಿಲ್ಲದಿದ್ದರೂ, ಯಾವ ನಟನಿಗಿಂತ ಕಡಿಮೆ ಇಲ್ಲದ ರೀತಿ ಆ್ಯಕ್ಟ್ ಮಾಡಿ ಧಾರವಾಹಿ ಪ್ರಿಯರ ಮನೆ ಮಗನಾಗಿಬಿಟ್ಟಿದ್ದರು ಸಿದ್ದಾರ್ಥ.

ಆ ಧಾರವಾಹಿ ಕಥೆಯ ಮೂಲಕ ಮಾತ್ರವಲ್ಲದೆ ಸಿದ್ದಾರ್ಥರವರ ನಟನೆಯಿಂದಲೂ ಸಹ ತನ್ನದೆ ಆದ ಅಭಿಮಾನಿಗಳನ್ನು ಹೊಂದಿತ್ತು. 2008ರಲ್ಲಿ ಸೀರಿಯಲ್ ಕೊನೆಯಾಗುವಾಗಲೇ, ಜಾನೆ ಪೆಹಚಾನ್ ಸೇ ಎನ್ನವ ಮತ್ತೊಂದು ಧಾರವಾಹಿ ಸಿದ್ದಾರ್ಥ ಕೈ ಹಿಡಿದ್ದಿತ್ತು. ಇದಾದ ನಂತರ ಲವ್ ಯೂ ಜಿಂದಗಿ, ಆಹತ್, ಸಿಐಡಿ, ಪವಿತ್ರ ಪುನಿಯ ಹೀಗೆ ಎಲ್ಲ ಹೆಸರಾಂತ ಚಾನಲ್​ಗಳಲ್ಲಿ ಸಾಲು ಸಾಲು ಧಾರವಾಹಿಗಳು ಸಿದ್ದಾರ್ಥ್ ನಟನೆಯನ್ನು ಕೈ ಎತ್ತಿ ಹಿಡಿದಿತ್ತು.

ಇದನ್ನೂ ಓದಿ: ಶೆಹನಾಜ್‌ ಗಿಲ್‌ ಮುಗ್ಧ ಸ್ನೇಹಕ್ಕೆ ಬದಲಾಗಿದ್ದ ಌಂಗ್ರಿ ಯಂಗ್‌ ಮ್ಯಾನ್‌; ಇಷ್ಟು ಬೇಗ ಯಾಕೆ ಹೋದೆ ಸಿದ್?

ಮತ್ತಷ್ಟು ಹೆಸರು ತುಂದುಕೊಟ್ಟ ಬಾಲಿಕ ವಧು
ಇಷ್ಟು ಧಾರವಾಹಿಗಳಲ್ಲಿ ಕೇವಲ ನಟನಾಗಿ ಗುರುತಿಸಿಕೊಂಡಿದ್ದ ಶುಕ್ಲಾಗೆ ಸ್ಟಾರ್ ನಟನಾಗಲೂ ಒಂದು ಬ್ರೇಕ್ ಥ್ರೂ ಧಾರವಾಹಿ ಕಾದಿತ್ತು. ಅದೇ ಬಾಲಿಕ ವಧು. ಬಾಲಿಕ ವಧು.., ಈ ಸಿರಿಯಲ್ ಬಗ್ಗೆ ಕನ್ನಡಿಗರಿಗೂ ಗೊತ್ತಿರಲೇಬೇಕು,. ಪುಟ್ಟ ಗೌರಿಯ ಮದುವೆ ಎನ್ನುವ ಧಾರವಾಹಿ ಹೇಗೆ ಕರ್ನಾಟಕದಲ್ಲಿ ಹೆಸರುವಾಸಿ ಆಗಿತ್ತೋ.. ಹಾಗೆ ಉತ್ತರ ಭಾರತದಲ್ಲಿ ಬಾಲಿಕ ವಧು. ಧಾರವಾಹಿ ಲೋಕದಲ್ಲೆ ಹೊಸ ಅಲೆಯನ್ನು ತಂದು ಕೊಟ್ಟ ಸೀರಿಯಲ್. ಬಾಲಿಕ ವಧು ಸೀರಿಯಲ್ ನಲ್ಲಿ ಸಿದ್ದಾರ್ಥ್ ಅವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿ, ಭಾರತದ ಪ್ರತಿ ಮನೆಯಲ್ಲೂ ಮಾತಾಗಿದ್ದರು ಅಂದ್ರೆ ತಪ್ಪಾಗಲ್ಲ. ಅಲ್ಲಿ ನಾಯಕನಾಗಿ, ಕಲರ್​ಫುಲ್ ಧಾರಾವಾಹಿ ದುನಿಯಾದಲ್ಲಿ ಮೆರೆದವರು, ಪ್ರತಿ ಮನೆಯಲ್ಲಿ ಹೆಣ್ಣು ಹುಡುಗಿಯರ ಕನಸಿನ ರಾಜನಾಗಿಯೂ ಸಹ ಮನೆ ಮಾಡಿದ್ದರು ಸಿದ್ದಾರ್ಥ್.

ಇದೇ ಧಾರವಾಹಿಯಲ್ಲಿ ಸಾಕಷ್ಟು ಪ್ರಚಾರ ಸಿಕ್ಕ ಸಿದ್ದಾರ್ಥ್, 2011ರಲ್ಲಿ ಧಾರವಾಹಿಯಲ್ಲಿ ನಟನೆಯನ್ನು ಬಿಟ್ಟು, ಜಲಕ್ ದಿಕಲಾಜಾ ಕಾರ್ಯಕ್ರಮದಲ್ಲಿ ನೃತ್ಯ ಲೋಕಕ್ಕೆ ಕಾಲಿಟ್ಟಿದ್ದರು ಶುಕ್ಲಾ. ಆದರೆ 11 ನೇ ವಾರಕ್ಕೆ ಶೋನಿಂದ ಹೊರ ಬರಬೇಕಾಗಿತ್ತು. ಕಾರಣ ಬಾಲಿವುಡ್ ನ ಬಹುದೊಡ್ಡ ಪ್ರೋಡೆಕ್ಷನ್ ಹೌಸ್ ಧರ್ಮ ಪ್ರಡೆಕ್ಷನ್ ಗೆ 3 ಸಿನಿಮಾ ಮಾಡುವುದಾಗಿ ಸೈನ್ ಮಾಡಿಬಿಟ್ಟಿದ್ದರು ಶುಕ್ಲಾ. ಇಲ್ಲಿಂದ ಶುಕ್ಲಾ ಬಾಲಿವುಡ್ ನ ಅಸಲಿ ಜಗತ್ತು ಸಿನಿಮಾದಲ್ಲಿ ಕಾಣಿಸಿಕೊಳ್ಳಲು ಶುರು ಮಾಡಿದ್ದರು.

ಎಲ್ಲವನ್ನೂ ಮೀರಿಸುವ ಯಶಸ್ಸು ಬಿಗ್​ಬಾಸ್​
ಸಿನಿಮಾ ದುನಿಯಾದಲ್ಲಿ ಅಷ್ಟರ ಮಟ್ಟಿಗೆ ಕಾಣಿಸದೆ, ಕಿರು ತೆರೆಗೆ ಮತ್ತೆ ಹಿಂದಾಗಿದ ಶುಕ್ಲಾ.., ಕಾರ್ಯಕ್ರಮಗಳ ನಿರೂಪಕರಾಗಿ ಮತ್ತಷ್ಟು ಹೆಸರು ಸಂಪಾಧಿಸಿದ್ದರು. ಸಾವ್ದಾನ್ ಇಂಡಿಯಾ, ಇಂಡಿಯಾ ಗಾಟ್ ಟ್ಯಾಲೆಂಟ್ ಹೀಗೆ ಶೋ ಹೋಸ್ಟ್ ಮಾಡುವುದರ ಜೊತೆಗೆ, ಇನ್ನಷ್ಟೂ ಶೋಗಳಿಗೆ ಕಂಟೆಸ್ಟೆಂಟ್ ಸಹ ಹೌದು. ಕತ್ರೋಂಕಿ ಕಿಲಾಡಿ ಎನ್ನುವ ಅಡ್ವೆಂಚರ್ಸ್ ಶೋನಲ್ಲಿ ವಿನರ್ ಆಗಿದ್ದರು ಸಿದ್ದಾರ್ಥ್. ಇದೆಲ್ಲವನ್ನು ಮೀರಿಸುವ ಯಶಸ್ಸು ಎಂದರೆ ಬಿಗ್ ಬಾಸ್ ಸೀಸನ್-13.

ಇದನ್ನೂ ಓದಿ: ‘ಲೈಫ್ ಈಸ್ ಟೂ ಶಾರ್ಟ್’.. ಸಿದ್ಧಾರ್ಥ್ ಶುಕ್ಲಾರ ರೀಸೆಂಟ್ ಟ್ವೀಟ್ ನೋಡಿ ಭಾವುಕರಾದ ಅಭಿಮಾನಿಗಳು

blank

2019 ರಲ್ಲಿ ಸಲ್ಮಾನ್ ಖಾನ್ ನಡೆಸುವ ಶೋ ಬಿಗ್ ಬಾಸ್ ಸಿಸನ್ 13 ಕಾರ್ಯಕ್ರಮ ಸಿದ್ದಾರ್ಥ್ ಶುಕ್ಲಾ ಜೀವನದ ಮತ್ತೊಂದು ಪ್ರಮುಖ ಘಟ್ಟ. ಈ ಸ್ಪರ್ಧೆಯಲ್ಲಿ ಸಿದ್ದಾರ್ಥ್ ನ ಇನ್ನೊಂದು ಮುಖ ಎಲ್ಲರಿಗೂ ಪರಿಚಯವಾಯಿತು. ಶುಕ್ಲಾರವರ ಕೋಪ, ನ್ಯಾಯಕ್ಕಾಗಿ ಸ್ವಾತಂತ್ರ ಹೋರಾಟ, ಎಲ್ಲರನ್ನು ಚೇಡಿಸುವ ತುಂಟತನ, ನಕ್ಕಿ ನಗಿಸಿ, ಕಣ್ಣಿರೂ ಹಾಕಿ ದೊಡ್ಡ ಮಟ್ಟದ ಜನಪ್ರಿಯತೆ ಪಡೆದಿದ್ದರು ಸಿದ್ದಾರ್ಥ್. ಬಿಗ್ ಬಾಸ್ ಮನೆಯಲ್ಲಿ ಇವರು ಕೊಟ್ಟ ಕೌಂಟರ್ ಅಟ್ಯಾಕ್ ಮಾತುಗಳು, ಈಗಲೂ ಫೇಮಸ್. ಸಿದ್ದಾರ್ಥ್ ನನ್ನು ಮಾತಿನಲ್ಲಿ ಹಿಡಿದು ಸೋಲಿಸಲು ಅಲ್ಲಿದ್ದವರಿಗೆ ಸಾಧ್ಯವಾಗಲೇ ಇಲ್ಲ.

ತನ್ನ ಸ್ಪೋರ್ಟೀವ್ ಪ್ರದರ್ಶನಕ್ಕೆ, ಅವರ ಎನೆರ್ಜಿಗೆ ಎಲ್ಲರೂ ಸೋತಿದ್ದರು. ಕೋಪ ಬಂದಾಗ, ದುಷ್ಟನಂತೆ ಎಗರಾಡಿ. ನೋವಿನಲ್ಲಿ ಪುಟ್ಟ ಮಗುವಿನಂತೆ ಕಣ್ಣಿರು ಹಾಕಿ, ಯುವತಿಯರು ನಿರಂತರ ಫಾಲೋ ಮಾಡುವ ಹಾಗೆ ಮಾಡಿಕೊಂಡಿದ್ದ ಸಿದ್ದಾರ್ಥ್. ಬಿಗ್ ಬಾಸ್ ಕಾರ್ಯಕ್ರಮದ ಮೂಲಕ ಸಿದ್ದಾರ್ಥ್ ಶುಕ್ಲಾ ವೀಕ್ಷಕರ ಮನ ಗೆದ್ದರು. ಹಾಗೇ, ಬಿಗ್ ಬಾಸ್ 13 ವಿಜೇತರಾಗಿ ಹೊರಹೊಮ್ಮಿದರು. ಇಷ್ಟೆ ಅಲ್ಲ ಸಲ್ಮಾನ್ ಖಾನ್ ಬ್ಯುಸಿ ಇದ್ದಾಗ ಬಿಗ್ ಬಾಸ್ ಸೀಸನ್ 14ನ ವೀಕೆಂಡ್ ಕಾ ವಾರ್ ಸಂಚಿಕೆಗೆ ನಿರೂಪಕರಾಗಿ ಸಲ್ಮಾನ್ ಖಾನ್ ಜಾಗವನ್ನು ತುಂಬಿದ ಏಕೈಕ ಸ್ಪರ್ಧಿ ಸಿದ್ದಾರ್ಥ್ ಶುಕ್ಲಾ.

blank

ಇದನ್ನೂ ಓದಿ: ಸಿದ್​​ ಸಾವಿನ ಸುತ್ತ ಅನುಮಾನಗಳ ಹುತ್ತ; ನಿಖರ ಕಾರಣ ತಿಳಿದುಬಂದಿಲ್ಲ ಎಂದ ಪೊಲೀಸರು-ವೈದ್ಯರು

ಬಳಿಕ ಅದೆಷ್ಟೋ ಮ್ಯೂಸಿಕ್ ವಿಡಿಯೋಗಳಲ್ಲಿ, ಕೆಲವು ಸಿನಿಮಾಗಳಲ್ಲಿ, ಸಣ್ಣ ಪಾತ್ರವಾಗಿ ಹಾಗೂ ಎಲ್ಲರ ಗಮನ ಸೆಳೆಯುವ ಹಲವು ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದರು. ಆದರೆ ಇಂದು ಮುಂಬೈನ ಕೂಪರ್ ಆಸ್ಪತ್ರೆ ಸಿದ್ದಾರ್ಥ್ ಶುಕ್ಲಾ ಮೃತಪಟ್ಟಿರುವುದನ್ನು ದೃಢಪಡಿಸಿದೆ. ಹೃದಯಾಘಾತದಿಂದ ಸಿದ್ದಾರ್ಥ್ ಶುಕ್ಲಾ ನಿಧನರಾಗಿದ್ದಾರೆ ಎಂದು ಕೂಪರ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಕೇವಲ 40 ವಯಸ್ಸು..
ಅಷ್ಟು ಕಟ್ಟಮಸ್ತು ದೇಹ.. ಯಾವಾಗಲೂ ಆಕ್ಟೀವಿ ಇರುವ ಇವನಿಗೆ ಹೃದಯಾಘಾತದಿಂದ ಪ್ರಾಣ ಹೋಗುತ್ತದೆ ಅನ್ನೋದು ಅಚ್ಚರಿಯ ಸುದ್ದಿ. ಜಿಮ್ ನಲ್ಲಿ ಅದೆಷ್ಟೋ ಭಾರಗಳನ್ನು ಎತ್ತಿ ಇಳಿಸುವುದನ್ನು ನೋಡಿದರೇ, ಆರೋಗ್ಯವಂತ, ಗಟ್ಟಿ ದೇಹದವನು ಅನ್ನಿಸಿ ಬಿಡುತ್ತೆ. ಆದ್ರೆ ಈತನ ಸಾವು ಈ ರೀತಿ ಬರುತ್ತೆ ಅನ್ನೋದು ಸ್ವತಃ ಶುಕ್ಲಾ ಯೋಚಿಸಿಯೂ ಇದ್ದಿರಲಿಲ್ಲ ಅನ್ನಿಸುತ್ತೆ. ಕೇವಲ 40 ವಯಸ್ಸು.. ಇನ್ನು ಸಾಕಷ್ಟು ಸಾಧಿಸ ಬೇಕು ಎನ್ನುವ ಆಸೆ ಹೊತ್ತವನು, ಕೇವಲ ತನ್ನ ಮನೆಯವರನ್ನಲ್ಲದೆ ಇಡಿ ಅಭಿಮಾನಿ ಬಳಗವನ್ನೆ ಕೈ ಬಿಟ್ಟು ಹೋಗಿದ್ದಾರೆ.

ಇದನ್ನೂ ಓದಿ: ಸಿದ್ದಾರ್ಥ್​ ಶುಕ್ಲಾ ನೀವು ಬೇಗ ಹೋಗಿಬಿಟ್ರಿ -ಸಲ್ಮಾನ್ ಖಾನ್ ಭಾವುಕ

blank

ಸಿದ್ದಾರ್ಥ್ ಬ್ಯುಸಿ ಲೈಫ್ ನಲ್ಲಿ ಸ್ವಲ್ಪ ಮಟ್ಟಗಿನ ಒತ್ತಡದಲ್ಲಿದ್ದರಂತೆ. ಹಲವು ಕೆಲಸಗಳು ಪೆಂಡಿಂಗ್ ಇದೆ ಎನ್ನುವ ಕಾರಣಕ್ಕೆ, ತುಂಬ ಟೆನ್ಷನ್ ಮಾಡಿಕೊಳ್ಳುತ್ತಿದ್ದ, ಇದೇ ಕಾರಣಕ್ಕೆ ಸಿಗರೇಟ್ ಹೆಚ್ಚೆಚ್ಚು ಸೇದುತ್ತಿದ್ದ ಎಂದು ಅವರ ತಂಗಿ ವರದಿಯಲ್ಲಿ ಹೇಳಿದ್ದಾಳೆ. ಪೋಸ್ಟ್ ಮಾರ್ಟಂ ಮಾಡಿದ ವೈದ್ಯರು ಸಹ, ಇದು ಕೇವಲ ಕಾರ್ಡಿಯಾಕ್ ಅರೆಸ್ಟ್ ಎಂದು ಘೋಷಿಸಿದ್ದಾರೆ. ತನ್ನ ಜೀವನ ಪರ್ಯಂತ ತನ್ನ ನಟನೆಯಿಂದ, ನಗುವಿನಿಂದ, ಕೋಪದಿಂದ ಹಾಗೂ ತನ್ನ ಮಾತುಗಳಿಂದ ಎಲ್ಲರನ್ನು ಮನರಂಜಿಸಿದ ಸಿದ್ದಾರ್ಥ್ ಇಂದು ಶಾಂತವಾಗಿದ್ದಾರೆ. ಮೃತ್ಯೂವಿನ ಪಾಶಕ್ಕೆ ಬಹುಬೇಗನೇ ಬಲಿಯಾಗಿದ್ದಾರೆ. ಇನ್ನೇನ್ನಿದ್ದರು ಸಿದ್ದಾರ್ಥ್ ಕೇವಲ ನೆನಪು ಮಾತ್ರ..

ಇದನ್ನೂ ಓದಿ: ಲೆಜೆಂಡ್​ಗಳು ಹೇಳದೇ ಹೋಗಿಬಿಡ್ತಾರೆ: ಸಿದ್ದಾರ್ಥ್​ -ಸುಶಾಂತ್ ಸಾವಿನ ಬಗ್ಗೆ ಫ್ಯಾನ್ಸ್ ಹೇಳಿದ್ದಿದು..

Source: newsfirstlive.com Source link