ಅಭಿಮಾನಿಯೊಂದಿಗೆ ಬೈಕ್ ಏರಿದ ಶಿವರಾಜ್‍ಕುಮಾರ್ – ವೀಡಿಯೋ ವೈರಲ್

-ಅಭಿಮಾನಿ ಆಸೆ ಈಡೇರಿಸಿದ ಕರುನಾಡ ಚಕ್ರವರ್ತಿ

ಬೆಂಗಳೂರು: ಸ್ಯಾಂಡಲ್‍ವುಡ್ ನಟ ಕರುನಾಡ ಚಕ್ರವರ್ತಿ ಡಾ.ಶಿವರಾಜ್‍ಕುಮಾರ್ ಅಭಿಮಾನಿ ತಂದಿದ್ದ ಬೈಕ್ ಹತ್ತಿ ಸವಾರಿ ಮಾಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: BB ಗೆದ್ದು ಬನ್ನಿ ಮಂಜು, ಲವ್ ಯೂ: ಶಿವರಾಜ್‍ಕುಮಾರ್

ವಯಸ್ಸು 60 ಆದರೂ ಸಖತ್ ಯಂಗ್ ಆ್ಯಂಡ್ ಎನರ್ಜಿಟಿಕ್ ಆಗಿ ಇಂದಿನ ಯುವಕರು ಕೂಡ ನಾಚಿಸುವಂತೆ ಫಿಟ್‍ನೆಸ್ ಮೈನ್ ಟೈನ್ ಮಾಡಿರುವ ಶಿವರಾಜ್ ಕುಮಾರ್ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. ತಮ್ಮ ಡ್ಯಾನ್ಸ್, ಆ್ಯಕ್ಟಿಂಗ್ ಹಾಗೂ ಸ್ಟೈಲಿಶ್ ಆಗಿ ಲಾಂಗ್ ಹಿಡಿಯುವ ಶಿವರಾಜ್ ಕುಮಾರ್ ಕ್ಲಾಸ್‍ಗೂ ಸೈ ಹಾಗೂ ಮಾಸ್‍ಗೂ ಸೈ ಎಂಬುವಂತೆ ಯಾವುದೇ ಪಾತ್ರ ಕೊಟ್ಟರೂ ಲೀಲಾಜಾಲವಾಗಿ ಅಭಿನಯಿಸುತ್ತಾರೆ. ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಅವರು ಈ ಮಧ್ಯೆ ಅಭಿಮಾನಿಯೊಂದಿಗೆ ಬೈಕ್ ಏರಿ ಸವಾರಿ ಮಾಡಿ ಈ ಮೂಲಕ ಅಭಿಮಾನಿಯ ಆಸೆ ಈಡೇರಿಸಿದ್ದಾರೆ.ಇದನ್ನೂ ಓದಿ: ಶಿವರಾಜ್‍ಕುಮಾರ್ ಬಳಿ ಸಹಾಯಕ್ಕೆ ಅಂಗಲಾಚಿದ ನಟಿ ವಿಜಯಲಕ್ಷ್ಮಿ

ಹೌದು ಅಭಿಮಾನಿಯೊಬ್ಬರು ಹೊಸ ಬೈಕ್‍ನನ್ನು ಖರೀದಿಸಿ ಅದನ್ನು ತಮ್ಮ ನಿಚ್ಚಿನ ನಟ ಶಿವರಾಜ್‌ಕುಮಾರ್‌ರವರಿಗೆ ತೋರಿಸಲು ಮನೆಯ ಬಳಿ ಹೋಗಿದ್ದಾರೆ. ಈ ವೇಳೆ ಹೊಸ ಬೈಕ್ ನೋಡಿ ಶಿವಣ್ಣ ಅಭಿಮಾನಿಗೆ ಶುಭಾಶಯ ತಿಳಿಸಿ ಬೈಕ್ ಮೇಲೆ ಆಟೋಗ್ರಾಫ್ ಹಾಕಿದ್ದಾರೆ. ಜೊತೆಗೆ ಅಭಿಮಾನಿಯನ್ನು ಹಿಂದೆ ಕೂರಿಸಿಕೊಂಡು ಅದೇ ಬೈಕ್‍ನನ್ನು ಓಡಿಸಿದ್ದಾರೆ. ಅಲ್ಲದೇ ಬೈಕ್ ಓಡಿಸುವಾಗ ಸುರಕ್ಷಿತವಾಗಿರುವಂತೆ ಅಭಿಮಾನಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ಕರುನಾಡ ಚಕ್ರವರ್ತಿ ಶಿವರಾಜ್‍ಕುಮಾರ್​​​ಗೆ ಮಂಜು ಸಂದೇಶ

blank

 

ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಯ ಆಸೆ ಈಡೇರಿಸಿದ ಶಿವಣ್ಣನ ಸರಳತೆ ಹಾಗೂ ದೊಡ್ಡ ಗುಣಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Source: publictv.in Source link