ಅವಧಿ ಮುಗಿದರು ಚುನಾವಣಾ ಪ್ರಚಾರ ಮಾಡ್ತಿದ್ದ ಬಿಜೆಪಿ ಶಾಸಕರಿಗೆ ಕ್ಲಾಸ್ ತೆಗೆದುಕೊಂಡ ವೈದ್ಯ

ಅವಧಿ ಮುಗಿದರು ಚುನಾವಣಾ ಪ್ರಚಾರ ಮಾಡ್ತಿದ್ದ ಬಿಜೆಪಿ ಶಾಸಕರಿಗೆ ಕ್ಲಾಸ್ ತೆಗೆದುಕೊಂಡ ವೈದ್ಯ

ಬೀದರ್: ನಗರಸಭೆ ಉಪಚುನಾವಣೆ ಪ್ರಚಾರದ ವೇಳೆ ಶಾಸಕ ಶರಣು ಸಲಗಾರ್​ಗೆ, ವೈದ್ಯರೊಬ್ಬರು ಕ್ಲಾಸ್ ತೆಗೆದುಕೊಂಡ ಘಟನೆ ಬೀದರ್​ನಲ್ಲಿ ನಡೆದಿದೆ.

ಬೀದರ್​ನ ಬಸವಕಲ್ಯಾಣ ನಗರದಲ್ಲಿ ಇಂದು ಎರಡು ವಾರ್ಡ್​​ಗಳಿಗೆ ಉಪ ಚುನಾವಣೆ ನಡೆಯುತ್ತಿದ್ದು, ಈ ಹಿನ್ನಲೆಯಲ್ಲಿ ನಿನ್ನೆ ಶಾಸಕ ಶರಣು ಸಲಗಾರ ಪ್ರಚಾರಕ್ಕೆ ಆಗಮಿಸಿದ್ದರು. ಈ ವೇಳೆ ಪ್ರಚಾರದ ಅವಧಿ ಮುಗಿದಿದೆ ಎಂದು ಶಾಸಕರಿಗೆ ಡಾ. ಪೃಥ್ವಿರಾಜ್ ಬಿರಾದಾರ ಆಕ್ಷೇಪಿಸಿದ್ದಾರೆ. ವೈದ್ಯ ಹೇಳಿದ್ದೆ ತಡ ಶಾಸಕ ಹಾಗೂ ವೈದ್ಯ ಮಧ್ಯ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೆ ಜಗಳ ತಲುಪಿತ್ತು.

ಬಳಿಕ ನೀವು ಎಲ್ಲಿಯವರು ಎಂದು ಜನ ಪ್ರಶ್ನೆ ಮಾಡಿದ್ದಾರೆ, ಜನರ ಈ ಮಾತಿಗೆ ಹಾಂ… ನಾನು ಬಸವಕಲ್ಯಾಣದವನು… ಸತ್ತರೂ ಇಲ್ಲೇ ನನ್ನ ಅಂತ್ಯಕ್ರಿಯೆ ಎಂದು, ಒಬ್ಬ ಜವಾಬ್ದಾರಿತ ಸ್ಥಾನದಲ್ಲಿರುವ ಶಾಸಕ ಹೀಗೆ ಏರೂ ಧ್ವನಿಯಲ್ಲಿ ಜನರ ಜೊತೆಗೆ ಮಾತನಾಡಿದ್ದು, ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

Source: newsfirstlive.com Source link