ದೆಹಲಿ ವಿಧಾನಸಭೆಯಿಂದ ಕೆಂಪು ಕೋಟೆಗೆ ಸಂಪರ್ಕ ಕಲ್ಪಿಸೋ ಸುರಂಗ ಪತ್ತೆ

ದೆಹಲಿ ವಿಧಾನಸಭೆಯಿಂದ ಕೆಂಪು ಕೋಟೆಗೆ ಸಂಪರ್ಕ ಕಲ್ಪಿಸೋ ಸುರಂಗ ಪತ್ತೆ

ದೆಹಲಿ: ವಿಧಾನಸಭೆಯಲ್ಲಿ ಸುರಂಗದಂತಹ ರಚನೆ ಬೆಳಕಿಗೆ ಬಂದಿದ್ದು, ಈ ಸುರಂಗ ಕೆಂಪು ಕೋಟೆಗೆ ಸಂಪರ್ಕ ಕಲ್ಪಿಸುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಸದ್ಯ ಸುರಂಗದ ಇತಿಹಾಸದ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ ಬ್ರಿಟಿಷರು ಸ್ವಾತಂತ್ರ್ಯ ಹೋರಾಟಗಾರರಿಂದ ತಪ್ಪಿಸಿಕೊಳ್ಳಲು ಈ ಮಾರ್ಗವನ್ನು ಬಳಸುತ್ತಿದ್ದರು ಎಂದು ದೆಹಲಿ ವಿಧಾನಸಭಾ ಸ್ಪೀಕರ್ ರಾಮ್ ನಿವಾಸ್ ಗೋಯೆಲ್ ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ಸುರಂಗವನ್ನ ನವೀಕರಣ ಮಾಡಿ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಮಾಡಿಕೊಡಲಗುವುದು. ಮುಂದಿನ ವರ್ಷದ ಅಗಸ್ಟ್ 15 ಕ್ಕೆ ಸಾರ್ವಜನಿಕರಿಗೆ ಇದು ಮುಕ್ತವಾಗಲಿದೆ ಎಂದು ರಾಮ್ ನಿವಾಸ್ ಗೋಯೆಲ್ ವಿವರಿಸಿದ್ದಾರೆ.

Source: newsfirstlive.com Source link