‘ನಾನು ಭಿಕ್ಷೆ ಬೇಡ್ತಿಲ್ಲ , ಇನ್ಮುಂದೆ ಕೊಟ್ಟರೆ ಕೊಡಲಿ ಬಿಟ್ಟರೆ ಬಿಡಲಿ’- ಹೀಗ್ಯಾಕಂದ್ರು ಹೊರಟ್ಟಿ

‘ನಾನು ಭಿಕ್ಷೆ ಬೇಡ್ತಿಲ್ಲ , ಇನ್ಮುಂದೆ ಕೊಟ್ಟರೆ ಕೊಡಲಿ ಬಿಟ್ಟರೆ ಬಿಡಲಿ’- ಹೀಗ್ಯಾಕಂದ್ರು ಹೊರಟ್ಟಿ

ಧಾರವಾಡ : ಸಭಾಪತಿ ನಿವಾಸ ಹಂಚಿಕೆ ವಿಚಾರವಾಗಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ. ಮನೆ ಕೊಡುವ ವಿಚಾರವಾಗಿ 7 ಪತ್ರ ಬರೆದಿದ್ದು, 8ನೇಯ ಪತ್ರವನ್ನ ಇಂದು ಬರೆಯುವುದಾಗಿ ಹೊರಟ್ಟಿ ಹೇಳಿದ್ದಾರೆ.

ಪಾಲಿಕೆ ಮತದಾನ ಬಳಿಕ ಬಸವರಾಜ ಹೊರಟ್ಟಿ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಸಭಾಪತಿ ನಿವಾಸ ಹಂಚಿಕೆ ವಿಚಾರವಾಗಿ ಇದುವರೆಗೆ 7 ಪತ್ರ ಬರೆದಿದ್ದೇನೆ, 8 ನೇ ಪತ್ರವನ್ನು ಇಂದು ಬರೆಯಲಿದ್ದೇನೆ, ನಾನು ಭಿಕ್ಷೆ ಬೇಡುತ್ತಿಲ್ಲ, ಕೊಟ್ಟರೆ ಕೊಡಲಿ ಬಿಟ್ಟರೆ ಬಿಡಲಿ, ನಾನು ಇನ್ಮುಂದೆ ಮನೆಯನ್ನ ಕೇಳುವುದಿಲ್ಲ, ಇದು ಸರ್ಕಾರಕ್ಕೆ ನನ್ನ ಕೊನೆಯ ಪತ್ರ ಎಂದಿದ್ದಾರೆ.

ಮುಂದುವರೆದು ಮಾತನಾಡಿದ ಅವರು, ಎಥಿಕ್ಸ್ ಮೇಲೆ ಚುನಾವಣೆ ನಡೆಯಲ್ಲ ಅಂತ ಹೇಳ್ತಾರೆ, ಜನ ಪರವಾದ ಕೆಲಸ ಎಲ್ಲಿಯವರೆಗೆ ಮಾಡುವುದಿಲ್ಲ ಅಲ್ಲಿಯವರೆಗೂ ಇದು ಹೀಗೆ ನಡೆಯುತ್ತಿರುತ್ತದೆ. ನಮ್ಮದು ಪ್ರಜಾಪ್ರಭುತ್ವ ದೇಶ, ಎಲ್ಲರೂ ಜನಪರ ಕೆಲಸ ಮಾಡಬೇಕು. ಆಯ್ಕೆಯಾದವರು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದಿದ್ದಾರೆ.

ಜಿಲ್ಲೆಯಲ್ಲಿ ಜನಪ್ರತಿನಿಧಿಗಳಿಂದಳೇ ಕೋವಿಡ್ ರೂಲ್ಸ್ ಬ್ರೇಕ್ ಹಿನ್ನೆಲೆ ಪ್ರತಿಕ್ರಿಯೆ ನೀಡಿದ ಅವರು, ಡಿಸಿ ಸಹ ರಾಜಕಾರಣಿಗಳ ಕೈಯಲ್ಲೇ ಕೆಲಸ ಮಾಡುವವರು, ಸದನದಲ್ಲಿ ಈ ಬಗ್ಗೆ ಯಾರಾದರೂ ಪ್ರಶ್ನೆ ಮಾಡಿದ್ರೆ ನಾನು ಸಹ ಈ ಬಗ್ಗೆ ಧ್ವನಿ ಎತ್ತುತ್ತೇನೆ ಎಂದರು.

ಇದನ್ನೂ ಓದಿ:  ದೆಹಲಿ ವಿಧಾನಸಭೆಯಿಂದ ಕೆಂಪು ಕೋಟೆಗೆ ಸಂಪರ್ಕ ಮಾಡೋ ಸುರಂಗ ಪತ್ತೆ

Source: newsfirstlive.com Source link