ಟೋಕಿಯೋ ಪ್ಯಾರಾಲಿಂಪಿಕ್ಸ್- ಹೈ ಜಂಪ್​​ನಲ್ಲಿ ಭಾರತದ ಪ್ರವೀಣ್​ಗೆ ಬೆಳ್ಳಿ ಪದಕ

ಟೋಕಿಯೋ ಪ್ಯಾರಾಲಿಂಪಿಕ್ಸ್- ಹೈ ಜಂಪ್​​ನಲ್ಲಿ ಭಾರತದ ಪ್ರವೀಣ್​ಗೆ ಬೆಳ್ಳಿ ಪದಕ

ಟೋಕಿಯೋ ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತಕ್ಕೆ ಮತ್ತೊಂದು ಪದಕ ಒಲಿದಿದೆ. ಹೈ ಜಂಪ್ T64 ವಿಭಾಗದದಲ್ಲಿ ಭಾರತದ ಪ್ರವೀಣ್ ಕುಮಾರ್, ಬೆಳ್ಳಿ ಪದಕಕ್ಕೆ ಕೊರಳ್ಳೊಡ್ಡಿದ್ದಾರೆ. ಆ ಮೂಲಕ ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತದ ಪದಕಗಳ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಇಂದು ನಡೆದ ಹೈ ಜಂಪ್ T64 ವಿಭಾಗದಲ್ಲಿ 2.07 ಮೀಟರ್ ಎತ್ತರಕ್ಕೆ ಜಿಗಿದ 18 ವರ್ಷದ ಯುವ ಪ್ಯಾರಾ ಹೈಜಂಪರ್​​​ ಪ್ರವೀಣ್ ಕುಮಾರ್, ಬೆಳ್ಳಿ ಪದಕ ಗೆಲ್ಲುವಲ್ಲಿ ಯಶಸ್ವಿಯಾದರು. ಇನ್ನು ಇದೇ ಹೋರಾಟದಲ್ಲಿ 2.10 ಮೀಟರ್ ಎತ್ತರಕ್ಕೆ ಜಿಗಿದ ಬ್ರಿಟನ್​ನ ಜೋನಾಥನ್ ಎಡ್ವರ್ಡ್ಸ್​​ ಚಿನ್ನ ಗೆಲ್ಲುವಲ್ಲಿ ಯಶಸ್ವಿಯಾದರು.

Source: newsfirstlive.com Source link