ಚಿರು, ಮೇಘನಾ ಪುತ್ರ ಈಗ ‘ರಾಯನ್ ರಾಜ್ ಸರ್ಜಾ’

ಬೆಂಗಳೂರು: ಸ್ಯಾಂಡಲ್‍ವುಡ್ ದಿವಂಗತ ನಟ ಚಿರಂಜೀವಿ ಸರ್ಜಾ ಹಾಗೂ ನಟಿ ಮೇಘನಾ ರಾಜ್ ದಂಪತಿಯ ಮುದ್ದಾದ ಮಗನ ಹೆಸರು ಇಂದು ಬಹಿರಂಗಗೊಂಡಿದೆ.

ಇಷ್ಟು ದಿನ ಜ್ಯೂನಿಯರ್ ಚಿರು ಎಂದೇ ಫೇಮಸ್ ಆಗಿದ್ದ ಜ್ಯೂನಿಯರ್ ಚಿರುಗೆ ಇಂದು ರಾಯನ್ ರಾಜ್ ಸರ್ಜಾ ಎಂದು ನಾಮಕರಣ ಮಾಡಲಾಗಿದೆ. ಬೆಂಗಳೂರಿನ ಖಾಸಗಿ ಹೋಟೆಲ್‍ನಲ್ಲಿ ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ಜ್ಯೂನಿಯರ್ ಚಿರುಗೆ ರಾಯನ್ ಸರ್ಜಾ ಎಂದು ನಾಮಕರಣ ಮಾಡಲಾಗಿದೆ. ಸಂಸ್ಕೃತದಲ್ಲಿ ರಾಯನ್ ಅಂದರೆ ಯುವರಾಜ ಎಂಬ ಅರ್ಥವಿದೆ. ಇದನ್ನೂ ಓದಿ: ಜೂನಿಯರ್ ಚಿರುಗೆ 10 ತಿಂಗಳು ತುಂಬಿರುವ ಸಂಭ್ರಮ- ಮನಸಾರೆ ನಕ್ಕ ಮೇಘನಾ ರಾಜ್

junior chiru

ಇಷ್ಟು ದಿನ ಚಿಂಟು, ಸಿಂಬಾ, ಪಾಪ ಕುಟ್ಟಿ, ಜೂನಿಯರ್ ಚಿರು, ಜ್ಯೂನಿಯರ್ ಸಿಂಗ ಹೀಗೆ ಹಲವಾರು ಮುದ್ದಾದ ಹೆಸರುಗಳಲ್ಲಿ ಕುಟುಂಬದವರು ಹಾಗೂ ಅಭಿಮಾನಿಗಳು ಪ್ರೀತಿಯಿಂದ ಚಿರು ಪುತ್ರನನ್ನು ಕರೆಯುತ್ತಿದ್ದರು. ಆದರೆ ಸೆಪ್ಟೆಂಬರ್ 3ರಂದು ಜ್ಯೂನಿಯರ್ ಚಿರು ನಿಜವಾದ ಹೆಸರನ್ನು ಕುಟುಂಬದವರು ರಿವೀಲ್ ಮಾಡಲು ನಿರ್ಧರಿಸಿರುವುದಾಗಿ ಮೇಘನಾ ರಾಜ್ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೋ ಹಂಚಿಕೊಳ್ಳುವುದರ ಮೂಲಕ ತಿಳಿಸಿದ್ದರು. ಇದನ್ನೂ ಓದಿ: ಚಿರು ಯಾವಾಗಲೂ ನೀನೇ ನನ್ನ ಬೆಸ್ಟ್ ಫ್ರೆಂಡ್: ಮೇಘನಾ ರಾಜ್

junior chiru

ಅದರಂತೆ ಇದೀಗ ಚಿರಂಜೀವಿ ಸರ್ಜಾ ಪುತ್ರನಿಗೆ ‘ರಾಯನ್ ರಾಜ್ ಸರ್ಜಾ’ ಎಂದು ಹೆಸರಿಡಲಾಗಿದೆ. ಇದನ್ನೂ ಓದಿ: ಸೆ.3ರಂದು ರಿವೀಲ್ ಆಗಲಿದೆ ಜ್ಯೂನಿಯರ್ ಚಿರು ನಿಜವಾದ ಹೆಸರು

Source: publictv.in Source link