ಮೇಘನಾ ರಾಜ್​​, ಚಿರಂಜೀವಿ ಸರ್ಜಾ ಪುತ್ರನ ನಾಮಕರಣ.. ಹೆಸರೇನು ಗೊತ್ತಾ?

ಮೇಘನಾ ರಾಜ್​​, ಚಿರಂಜೀವಿ ಸರ್ಜಾ ಪುತ್ರನ ನಾಮಕರಣ.. ಹೆಸರೇನು ಗೊತ್ತಾ?

ನಟಿ ಮೇಘನಾ ರಾಜ್​, ಜಿರಂಜೀವಿ ಸರ್ಜಾ ಪುತ್ರನಿಗೆ ರಾಯನ್ ರಾಜ್ ಸರ್ಜಾ ಎಂದು ನಾಮಕರಣ ಮಾಡಲಾಗಿದೆ. ಕಳೆದ 10 ತಿಂಗಳಿಂದ ಜ್ಯೂನಿಯರ್​ ಚಿರು ಎಂದೇ ಕರೆಯುತ್ತಿದ್ದ ಕುಟುಂಬಸ್ಥರು ಇಂದು ಬೆಂಗಳೂರಿನ ಚಾನ್ಸರಿ ಪೆವಿಲಿಯನ್ ಹೋಟೆಲ್​​​ನಲ್ಲಿ ನಾಮಕರಣ ಕಾರ್ಯಕ್ರಮ ನೆರವೇರಿಸಿದ್ದಾರೆ.

blank

ಇಂದು ನಡೆದ ಕಾರ್ಯಕ್ರಮದಲ್ಲಿ  ಸರ್ಜಾ ಕುಟುಂಬ ಭಾಗಿಯಾಗಿತ್ತು, ಮುದ್ದಾದ ಮುಗುವಿಗೆ ರಾಯನ್ ರಾಜ್ ಸರ್ಜಾ ಎಂದು ನಾಮಕರಣ ಮಾಡಲಾಗಿದೆ. ಅಂದಹಾಗೇ, ಸಂಸ್ಕೃತದಲ್ಲಿ ರಾಯನ್ ಅಂದ್ರೆ ಯುವರಾಜ ಎಂಬರ್ಥ ಹೊಂದಿದೆ. ಇನ್ನು ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಾಧ್ಯವಾದ ಹಿನ್ನೆಲೆಯಲ್ಲಿ ಅರ್ಜುನ್​ ಸರ್ಜಾ ವಿಡಿಯೋ ಕಾಲ್​​ ಮೂಲಕ ಕಾರ್ಯಕ್ರಮವನ್ನು ವೀಕ್ಷಣೆ ಮಾಡಿದ್ದಾರೆ. ನಿನ್ನೆಯಷ್ಟೇ ಈ ಕುರಿತು ಪೋಸ್ಟ್​ ಮಾಡಿದ್ದ ಮೇಘನಾ ಸರ್ಜಾ, ಸೆ.3ರಂದು ಮಗನ ಹೆಸರು ರಿವೀಲ್​ ಮಾಡೋದಾಗಿ ತಿಳಿಸಿದ್ದರು. ಕಳೆದ ವರ್ಷ ಜೂನ್ 7ರಂದು ಚಿರಂಜೀವಿ ಸರ್ಜಾ ಹೃದಯಘಾತದಿಂದ ನಿಧನರಾಗಿದ್ದರು. ಆದರೆ ರಾಯನ್​ ರಾಜ್​ ಸರ್ಜಾ ಆಗಮನದ ಬಳಿಕ ಮೇಘನಾ ರಾಜ್​ ಹಾಗೂ ಸರ್ಜಾ ಕುಟುಂಬದಲ್ಲಿ ಹೊಸ ಬೆಳಕು ಮೂಡಿತ್ತು.

blank

blank

Source: newsfirstlive.com Source link