ಮೃಗಾಲಯದ ಪ್ರಾಣಿಗಳಿಗೆ ಆಹಾರ ಇಲ್ಲ.. ಆದರೆ ಅಧ್ಯಕ್ಷರ ‘ಕಾರು’ಬಾರು- ಸಾರ್ವಜನಿಕರ ಆಕ್ರೋಶ ಸ್ಫೋಟ

ಮೃಗಾಲಯದ ಪ್ರಾಣಿಗಳಿಗೆ ಆಹಾರ ಇಲ್ಲ.. ಆದರೆ ಅಧ್ಯಕ್ಷರ ‘ಕಾರು’ಬಾರು- ಸಾರ್ವಜನಿಕರ ಆಕ್ರೋಶ ಸ್ಫೋಟ

ಮೈಸೂರು : ಮೃಗಾಲಯದ ಪ್ರಾಣಿಗಳಿಗೆ ಆಹಾರದ ಕೊರತೆ, ಆದ್ರೆ ಅಧ್ಯಕ್ಷರಿಗೆ ಮಾತ್ರ ಐಷಾರಾಮಿ ಕಾರು. ಹೌದು ಕೊರೊನಾ ಬಂದು ಪ್ರಾಣಿ ಸಾಕಲಾಗದೆ ಹೈರಾಣಾಗಿದ್ದ ಮೃಗಾಲಯ ಪ್ರಾಧಿಕಾರ, ಸಾರ್ವಜನಿಕರು, ಗಣ್ಯರು, ಸಿನಿಮಾ ನಟ-ನಟಿಯರಿಂದ ದೇಣಿಗೆ ಸಂಗ್ರಹಿಸಿ ಮೃಗಾಲಯದ ಪ್ರಾಣಿಗಳಿಗೆ ನೆರವಾಗಿದ್ದರು. ಇಂತ ಸಂದರ್ಭದಲ್ಲಿ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷರು 21ಲಕ್ಷ ಮೌಲ್ಯದ ಹೊಸ ಕಾರೊಂದನ್ನ ಖರೀದಿಸಿದ್ದು ಆಕ್ರೋಶಕ್ಕೆ ಕಾರಣವಾಗಿದೆ.

blank

ಕೋವಿಡ್​ ಕಾಲಘಟ್ಟದಲ್ಲಿ ಆರ್ಥಿಕ ಹೊಡೆತಕ್ಕೆ ಸಿಲುಕಿದ್ದ ನಗರದ ಚಾಮರಾಜೇಂದ್ರ ಮೃಗಾಲಯ. ಮೃಗಾಲಯಯದ ಪ್ರಾಣಿ, ಪಕ್ಷಿಗಳನ್ನು ಸಲುಹಲು ಒದ್ದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ವೇಳೆ ಪ್ರಾಣಿ ಪಕ್ಷಿಗಳ ಪರಿಸ್ಥಿತಿಗೆ ಮಮ್ಮುಲ ಮರಗಿದ ಕರುನಾಡ ಜನತೆ ತಮ್ಮ ಕೈಲಾದಷ್ಡು ದೇಣಿಗೆ ನೀಡಿದ್ದರು. ಆದರೆ ಪ್ರಾಣಿ ಪಕ್ಷಿಗಳ ಆಹಾರದ ದುಡ್ಡಲ್ಲಿ ಮೃಗಾಲಯದ ಅಧ್ಯಕ್ಷರು ಕಾರು ಖರೀದಿಸಿ ದರ್ಬಾರ್ ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

blank

ಸದ್ಯ ಮೃಗಾಲಯ ಪ್ರಾಧಿಕಾರದ ಹಾಲಿ ಅಧ್ಯಕ್ಷ ಆಗಿರುವ ಮಹದೇವಸ್ವಾಮಿ ಎಂಬುವವರು, 7 ವರ್ಷ ಹಳೆಯದಾದ ಕಾರನ್ನು ಮೃಗಾಲಯ ನಿರ್ದೇಶಕರಿಗೆ ನೀಡಿದ್ದು, ಅಧಿಕೃತ ಉಪಯೋಗಕ್ಕಾಗಿ 21ಲಕ್ಷ 13 ಸಾವಿರ ಮೌಲ್ಯದ ಹೊಸ ಇನೋವಾ ಕ್ರಿಸ್ಟ್​ ಕಾರನ್ನು ಖರೀದಿಸಿದ್ದಾರೆ. ಈ ಕುರಿತು 147ನೇ ಆಡಳಿತ ಮಂಡಳಿ ಸಭೆಯಲ್ಲಿ ಕೂಡ ಅನುಮೋದಿಸಲಾಗಿದೆ. ಅಧ್ಯಕ್ಷರ ಈ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ ಸಾರ್ವಜನಿಕರು ಕೊರೊನಾ ಕಷ್ಟದ ಸಮಯದಲ್ಲಿ ಇಷ್ಟೊಂದು ಮೌಲ್ಯದ ಕಾರು ಬೇಕಿತ್ತಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ಇದನ್ನೂ ಓದಿ:  ಬೆಳ್ಳಂ ಬೆಳಗ್ಗೆ ನಾಡ ದೇವತೆ ಚಾಮುಂಡೇಶ್ವರಿ ದೇವಿ ದರ್ಶನ ಪಡೆದ ಕಿಚ್ಚ ಸುದೀಪ್

Source: newsfirstlive.com Source link