ಟೋಕಿಯೋ ಪ್ಯಾರಾಲಿಂಪಿಕ್ಸ್: 50 ಮೀಟರ್ ರೈಫಲ್ ಸ್ಪರ್ಧೆಯಲ್ಲಿ ಕಂಚಿಗೆ ಮುತ್ತಿಟ್ಟ ಅವನಿ ಲೇಖರ್

ಟೋಕಿಯೋ ಪ್ಯಾರಾಲಿಂಪಿಕ್ಸ್: 50 ಮೀಟರ್ ರೈಫಲ್ ಸ್ಪರ್ಧೆಯಲ್ಲಿ ಕಂಚಿಗೆ ಮುತ್ತಿಟ್ಟ ಅವನಿ ಲೇಖರ್

ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಫದಕ ಲಭಿಸಿದೆ. ಪುರುಷರ ಹೈಜಂಪ್ T64 ವಿಭಾಗದ ಫೈನಲ್‌ನಲ್ಲಿ 18 ವರ್ಷದ ಪ್ರವೀಣ್ ಬೆಳ್ಳಿ ಗೆದ್ದ ಸಾಧನೆ ಬೆನ್ನಲ್ಲೇ ಭಾರತಕ್ಕೆ ಮತ್ತೊಂದು ಪದಕ ದಕ್ಕಿದೆ. 10 ಮೀಟರ್ ಏರ್​ರೈಫಲ್​ನಲ್ಲಿ ಚಿನ್ನ ಗೆದ್ದ ಸಾಧನೆ ಮಾಡಿದ್ದ ಅವನಿ ಲೇಖರ್, 50 ಮೀಟರ್ ಏರ್​​ಪಿಸ್ತೂಲ್ ವಿಭಾಗದಲ್ಲಿ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಮಹಿಳೆಯರ 50 ಮೀಟರ್ ರೈಫಲ್ SH1 ಫೈನಲ್​​ ಸ್ಪರ್ಧೆಯಲ್ಲಿ ಚೀನಾದ ಜಾಂಗ್ ಕ್ವಿಪಿಂಗ್ (457.9) ಅಂಕ, ಜರ್ಮನಿಯ ನತಾಶಾ 457.1 ಅಂಕ ಪಡೆಯುವುದರೊಂದಿಗೆ ಕ್ರಮವಾಗಿ ಚಿನ್ನ, ಬೆಳ್ಳಿಗೆ ಮುತ್ತಿಟ್ಟರೆ, 445.9 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದ 19 ವರ್ಷದ ಅವನಿ ಲೇಖರ್, ಕಂಚಿನ ಪದಕಕ್ಕೆ ತೃಪ್ತಿಪಟ್ಟರು. ಇದರೊಂದಿಗೆ ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತಕ್ಕೆ 2ನೇ ಪದಕ ಮುಡಿಗೇರಿಸಿದರು. ಈ ಮೂಲಕ ಭಾರತದ ಒಟ್ಟು ಪದಕಗಳ ಸಂಖ್ಯೆ 12ಕ್ಕೇರಿದೆ.

Source: newsfirstlive.com Source link