ಕೊರೊನಾ ಲಸಿಕೆಗೆ ಹೆದರಿ ಮರವೇರಿ ಕುಳಿತ ಭೂಪ!

ಕೊರೊನಾ ಲಸಿಕೆಗೆ ಹೆದರಿ ಮರವೇರಿ ಕುಳಿತ ಭೂಪ!

ಬಳ್ಳಾರಿ : ಸರ್ಕಾರ ದೇಶವನ್ನು ಕೊರೊನಾ ಮುಕ್ತಗೊಳಿಸಲು ಪ್ರಯತ್ನಿಸುತ್ತಿದ್ದು, ಅದರಂತೆ ದೇಶದ ಪ್ರತಿ ನಾಗರಿಕನಿಗೆ ಕೊರೊನಾ ಲಸಿಕೆ ಹಾಕಿಸುತ್ತಿದೆ. ಕೆಲ ಭಾಗದಲ್ಲಿ ಲಸಿಕೆ ಸಿಗದೆ ಜನರು ಪರದಾಡುತ್ತಿದ್ದರೆ ಇಲ್ಲಿ ಲಸಿಕೆ ಕಂಡು ನಾಪತ್ತೆಯಾಗುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಕೊರೊನಾ ಲಸಿಕೆ ಹಾಕಿಸಲು ಜನ ಹಿಂದೆಟು ಹಾಕುತ್ತಿದ್ದಾರೆ.

blank

ಕೊರೊನಾ ವ್ಯಾಕ್ಸಿನ್​ಗೆ ಹೆದರಿದ ವ್ಯಕ್ತಿಯೊರ್ವ ಮರವೇರಿ ಕುಳಿತ ಅಪರೂಪದ ಘಟನೆ ಜಿಲ್ಲೆಯ ಕೂರಗೋಡು ತಾಲೂಕಿನ ಬೈಲೂರು ಗ್ರಾಮದಲ್ಲಿ ನಡೆದಿದೆ. ಬೈಲೂರು ಗ್ರಾಮದ ಹುಲೆಪ್ಪಾ ಎಂಬಾತ ಮರ ಹತ್ತಿ ಕುಳಿತ ಭೂಪ. ಸರ್ಕಾರ ಕೊರೊನಾ ಲಸಿಕೆಗಳ ಕುರಿತು ಇರುವ ಭಯವನ್ನು ಹೋಗಲಾಡಿಸಲು ಎಷ್ಟೇ ಜಾಗೃತಿ ಮೂಡಿಸುತ್ತಿದ್ದರು ಕೂಡ, ಅಲ್ಲಲ್ಲಿ ಲಸಿಕೆ ಕುರಿತಂತೆ ಭಯ ಜನರಲ್ಲಿ ಮನೆ ಮಾಡಿರುವುದು ವಿಪರ್ಯಾಸದ ಸಂಗತಿ.

ಇದನ್ನೂ ಓದಿ: ವ್ಯಾಕ್ಸಿನ್​ ಹಾಕಲು ಬಂದ ಸಿಬ್ಬಂದಿಗೆ ದೊಣ್ಣೆ ಹಿಡಿದು ಅಟ್ಟಾಡಿಸಿದ ಭೂಪ

Source: newsfirstlive.com Source link