ಸೆ.5ರಂದು ‘ಗೌರಿ ಲಂಕೇಶ್ ದಿನ’ವನ್ನಾಗಿ ಆಚರಿಸಲಿದೆ ಕೆನಡಾದ ಬರ್ನಾಬಿ ನಗರ

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಮೃತಪಟ್ಟ ಸೆ.5ರಂದು ಕೆನಡಾದ ಬರ್ನಾಬಿ ನಗರದ ಸಿಟಿ ಕೌನ್ಸಿಲ್ ‘ಗೌರಿ ಲಂಕೇಶ್ ದಿನ’ವನ್ನಾಗಿ ಆಚರಿಸಲು ಮುಂದಾಗಿದೆ.

ಆಗಸ್ಟ್ 30 ರಂದು ತನ್ನ ಕೌನ್ಸಿಲ್ ಸಭೆಯಲ್ಲಿ ಕೆನಡಾದ ಬರ್ನಾಬಿ ಸಿಟಿ ಕೌನ್ಸಿಲ್ ‘ಗೌರಿ ಲಂಕೇಶ್ ದಿನ’ವನ್ನಾಗಿ ಆಚರಿಸಲು ಮುಂದಾಗಿದೆ ಎಂದು ಆ ದಿನಗಳು ಖ್ಯಾತಿಯ ಚೇತನ್ ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಬಸ್ ನಿಲ್ದಾಣದಲ್ಲಿ ಕಳ್ಳನ ಕೈಚಳಕ – ಕುಳಿತಿದ್ದ ಮಹಿಳೆ ಮಾಂಗಲ್ಯ ಕಿತ್ತ ಖದೀಮ

ಆಗಸ್ಟ್ 30 ರಂದು ಕೆನಡಾದ ಬರ್ನಾಬಿ ಸಿಟಿ ಕೌನ್ಸಿಲ್ ಸಭೆಯಲ್ಲಿ ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಿದ ದಿನವನ್ನು ‘ಗೌರಿ ಲಂಕೇಶ್ ದಿನ’ ಎಂದು ಆಚರಿಸಬೇಕೆಂದು ನಿರ್ಧರಿಸಿದೆ. ನಗರದ ಮೇಯರ್ ಮೈಕ್ ಹರ್ಲೆ ಸಹಿ ಮಾಡಿದ್ದು, ಈ ಘೋಷಣೆಯನ್ನು ನಗರ ಆಡಳಿತ ತನ್ನ ವೆಬ್‍ಸೈಟ್‍ನಲ್ಲಿ ಪ್ರಕಟಿಸಿದೆ. ಇದನ್ನೂ ಓದಿ:ಗಣೇಶ ಮೂರ್ತಿಗಳಿಗೆ ಬೇಡಿಕೆ ಕುಸಿತ- ಸಂಕಷ್ಟದಲ್ಲಿ ಕಲಾಕಾರರು

ಗೌರಿ ಲಂಕೇಶ್ ತಮ್ಮ ಕೆಲಸದ ಮೂಲಕ ಓದುಗರಿಗೆ ವೈಜ್ಞಾನಿಕ ಮನೋಧರ್ಮವನ್ನು ಅಳಡಿಸಿಕೊಳ್ಳಲು ಮತ್ತು ಧಾರ್ಮಿಕ ಮತಾಂಧತೆ, ಜಾತಿ ಆಧಾರಿತ ತಾರತಮ್ಯ ಮತ್ತು ಧರ್ಮಾಧತೆಯನ್ನು ತಿರಸ್ಕರಿಸಲು ಪ್ರೋತ್ಸಾಹಿಸಿದರು ಎಂದು ಬರೆದು ಚೇತನ್ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ:ತಾಲಿಬಾನ್ ಸರ್ಕಾರ ರಚನೆಗೆ ಸಂತೋಷ ವ್ಯಕ್ತಪಡಿಸೋದು ಅನಾಗರೀಕತೆ: ನಾಸಿರುದ್ದೀನ್ ಶಾ

2017ರ ಸೆ.5 ರಂದು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಗೌರಿ ಲಂಕೇಶ್ ಮನೆಯ ಹೊರಗೆಯೇ ದುಷ್ಕರ್ಮಿಗಳು ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದರು.

Source: publictv.in Source link