ಮಾಜಿ ಶಾಸಕ ಇಕ್ಬಾಲ್​ ಅನ್ಸಾರಿ ‘ಜನಾಶೀರ್ವಾದ ನಡೆ’ಗೆ ಬ್ರೇಕ್​ ಹಾಕಿದ ಜಿಲ್ಲಾಡಳಿತ -ಐವರ ವಿರುದ್ಧ ಪ್ರಕರಣ

ಮಾಜಿ ಶಾಸಕ ಇಕ್ಬಾಲ್​ ಅನ್ಸಾರಿ ‘ಜನಾಶೀರ್ವಾದ ನಡೆ’ಗೆ ಬ್ರೇಕ್​ ಹಾಕಿದ ಜಿಲ್ಲಾಡಳಿತ -ಐವರ ವಿರುದ್ಧ ಪ್ರಕರಣ

ಕೊಪ್ಪಳ : ಕೊರೊನಾ ನಿಯಮ ಉಲ್ಲಂಘಿಸಿ ಗಂಗಾವತಿ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ನೇತೃತ್ವದಲ್ಲಿ ನಡೆಯುತ್ತಿದ್ದ ಸಮಾರಂಭಕ್ಕೆ ಜಿಲ್ಲಾಡಳತ ಬ್ರೇಕ್​ ಹಾಕಿದ್ದು, ಐದು ಜನರ ವಿರುದ್ಧ ಪ್ರಕರಣ ದಾಖಲಿಸಿದೆ.

ಕೋವಿಡ್​ ನಿಯಮ ಉಲ್ಲಂಘನೆ ಅಡಿಯಲ್ಲಿ ಕಾಂಗ್ರೆಸ್ ಮುಖಂಡರಾದ ಶಾಮೀದ್ ಮನಿಯಾರ್, ಬಸವರಾಜ, ವಿಶ್ವನಾಥ, ಬಸವರಾಜ ಹಾಗೂ ದೇವರಾಜ್ ಮೇಲೆ ಪ್ರಕರಣ ದಾಖಲಿಸಲಾಗಿದೆ. ಕಾಂಗ್ರೆಸ್​ನ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ನೇತೃತ್ವದಲ್ಲಿ ‘ಅನ್ಸಾರಿ ನಡೆ ಜನಾಶೀರ್ವಾದ ಕಡೆ’ಗೆ ಎಂಬ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ತಮ್ಮ ಕ್ಷೇತ್ರದ ಹಳ್ಳಿಗಳಿಗೆ ಕ್ಷೇತ್ರ ಸಂಚಾರ ಕೈಗೊಂಡಿದ್ದರು.

blank

ಕಳೆದ ಒಂದುವಾರದಿಂದ ತಾಲೂಕಿನ ಗ್ರಾಮಗಳಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ, ನೂರಾರು ಜನರು ಗುಂಪಾಗಿ ಸೇರಿ, ಮಾಸ್ಕ್, ಸಾಮಾಜಿಕ ಅಂತರ ಇವ್ಯಾವುದನ್ನು ಲೆಕ್ಕಿಸದೆ ಕೊರೊನಾ ನಿಯಮಗಳನ್ನು ಗಾಳಿಗೆ ತೂರಲಾಗಿತ್ತು.

ಇದನ್ನೂ ಓದಿ: 2023ರ ರಾಜ್ಯ ಚುನಾವಣೆಗೆ ಶಾ ಮಾಸ್ಟರ್​​ ಪ್ಲಾನ್.. ಸಿಎಂ ಬೊಮ್ಮಾಯಿ ನಾಯಕತ್ವಕ್ಕೆ ‘ಫ್ರೀ ಹ್ಯಾಂಡ್​​’!

blank

ಜಿಲ್ಲೆಯಲ್ಲಿ ಸೆಪ್ಟಂಬರ್​ 19ರ ವರೆಗೆ ಅದ್ಧೂರಿ ಸಭೆ, ಸಮಾರಂಭ ಆಯೋಜಿಸುವಂತಿಲ್ಲ ಎಂದು ಡಿಸಿ ಆದೇಶವಿದೆ, ಸಭೆಯಲ್ಲಿ 100 ಜನರಿಗಿಂತ ಹೆಚ್ಚು ಜನರಿರಬಾರದು ಅಂತಾ ನಿಯಮ ಇದ್ದರು ಕೂಡ, ಗಂಗಾವತಿ ತಾಲೂಕಿನ ಕೇಸರಟ್ಟಿ ಗ್ರಾಮದಲ್ಲಿ ಸಾವಿರಾರು ಜನ ಜಮಾವಣೆ ಮಾಡಿ ಪಟಾಕಿ ಸಿಡಿಸಿ ಅನ್ಸಾರಿಗೆ ಭರ್ಜರಿಯಾಗಿ ಸ್ವಾಗತಿಸಿದ್ದರು. ರಾಜ್ಯದಲ್ಲಿ ಮೂರನೇ ಅಲೆ ಆತಂಕವಿರುವ ಹಿನ್ನೆಲೆ ಕಾರ್ಯಕ್ರಮದಿಂದ ಕೊರೊನಾ ಹರಡುವ ಸಾಧ್ಯತೆಗಳಿದೆ ಎಂದು ಕೇಸ್ ಹಾಕಿ, ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ.

ಇದನ್ನೂ ಓದಿ: ‘ನಾನು ಭಿಕ್ಷೆ ಬೇಡ್ತಿಲ್ಲ , ಇನ್ಮುಂದೆ ಕೊಟ್ಟರೆ ಕೊಡಲಿ ಬಿಟ್ಟರೆ ಬಿಡಲಿ’- ಹೀಗ್ಯಾಕಂದ್ರು ಹೊರಟ್ಟಿ

blank

Source: newsfirstlive.com Source link