‘ಯಾವ ಹಾಲಿವುಡ್​ ಸಿನಿಮಾಗೂ ಕಡಿಮೆ ಇಲ್ಲ’ -‘ವಿಕ್ರಾಂತ್​ ರೋಣ’ನಿಗೆ ಟಾಲಿವುಡ್​ ಕಿಂಗ್​​ ಶಹಬ್ಬಾಸ್​ಗಿರಿ

‘ಯಾವ ಹಾಲಿವುಡ್​ ಸಿನಿಮಾಗೂ ಕಡಿಮೆ ಇಲ್ಲ’ -‘ವಿಕ್ರಾಂತ್​ ರೋಣ’ನಿಗೆ ಟಾಲಿವುಡ್​ ಕಿಂಗ್​​ ಶಹಬ್ಬಾಸ್​ಗಿರಿ

‘ವಿಕ್ರಾಂತ್​ ರೋಣ’ ಸ್ಯಾಂಡಲ್​ವುಡ್​ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ಅಭಿನಯದ ಬಹುನಿರೀಕ್ಷಿತ ಪ್ಯಾನ್​ ಇಂಡಿಯನ್ ಮೂವಿ. ಕಿಚ್ಚ ಸುದೀಪ್​ ಬರ್ತ್​ಡೇ ಪ್ರಯುಕ್ತ ನಿನ್ನೆಯಷ್ಟೇ ‘ವಿಕ್ರಾಂತ್​ ರೋಣ’ ಚಿತ್ರತಂಡ ಚಿತ್ರದ ಟೀಸರ್ ರಿಲೀಸ್​ ಮಾಡಿತ್ತು. ಇನ್ನು ಚಿತ್ರದ ಟೀಸರ್​ ನೋಡಿದ ಪ್ರೇಕ್ಷಕರು ಇದು ನಮ್ಮ ಸ್ಯಾಂಡಲ್​ವುಡ್​ ಸಿನಿಮಾನ ಅಥವಾ ಹಾಲಿವುಡ್​ ಸಿನಿಮಾನ ಅಂತಾ ಕನ್​ಫ್ಯೂಸ್​ ಅಗಿದ್ರು. ಅದ್ರೆ ‘ವಿಕ್ರಾಂತ್​ ರೋಣ’ ಚಿತ್ರದ ಟೀಸರ್​ ಬಿಡುಗಡೆಯಾಗೋ ಮೊದಲೇ ಈ ಚಿತ್ರ ಯಾವ ಹಾಲಿವುಡ್​ ಸಿನಿಮಾಗೂ ಕಡಿಮೆ ಇಲ್ಲ ಅಂತಾ ಟಾಲಿವುಡ್​ನ ಸ್ಟಾರ್​ ನಟರೊಬ್ಬರು ಹೇಳಿದ್ರಂತೆ..

blank

ಹೌದು, ಟಾಲಿವುಡ್​ ಕಿಂಗ್​ ನಾಗಾರ್ಜುನ ವಿಕ್ರಾಂತ್​ ರೋಣ ಚಿತ್ರದ ಸೆಟ್​ಗೆ ಭೇಟಿ ನೀಡಿ ವಿಕ್ರಾಂತ್​ ರೋಣ ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್​ ಅಗುತ್ತೆ ಅಂತಾ ಹೇಳಿದಾರಂತೆ. ಸುದೀಪ್​ ತಮ್ಮ ಬರ್ತ್​ಡೇ ಪ್ರಯುಕ್ತ ತಮ್ಮ ಕಿಚ್ಚ ಕ್ರಿಯೆಶನ್ಸ್​ ಯೂಟ್ಯೂಬ್​ ಮೂಲಕ ನಿರೂಪಕ ಅಕುಲ್​ ಬಾಲಾಜಿ ಜೊತೆ ಲೈವ್ ಸಂರ್ದಶನ ನೀಡುವ ಸಂದರ್ಭದಲ್ಲಿ ನಟ ನಾಗಾರ್ಜುನ, ವಿಕ್ರಾಂತ್​ ರೋಣ ಚಿತ್ರದ ಸೆಟ್​ ಗೆ ಭೇಟಿ ನೀಡಿದ ಬಗ್ಗೆ ಹೇಳಿದ್ದಾರೆ.

ಹೈದರಾಬಾದ್​ನಲ್ಲಿ ತೆಲುಗು ಬಿಗ್​ಬಾಸ್​ ಶೂಟಿಂಗ್​ ವೇಳೆ ನಾಗಾರ್ಜುನ ‘ವಿಕ್ರಾಂತ್​ ರೋಣ’ ಚಿತ್ರದ ಸೆಟ್​ಗೆ ಭೇಟಿ ನೀಡಿ ಒಳ್ಳೆ ಪ್ರಶಂಸೆಯನ್ನು ಕೊಟ್ಟಿದರಂತೆ. ಇನ್ನು ವಿಕ್ರಾಂತ್​ ರೋಣ ಚಿತ್ರ ಯಾವ ಹಾಲಿವುಡ್​ ಸಿನಿಮಾಗೂ ಕಡಿಮೆ ಇಲ್ಲ ಹೇಳಿದ್ರಂತೆ. ನಾಗಾರ್ಜುನ್​ರ ಈ ಮಾತು ಕೇಳಿ ಸುದೀಪ್​ ತುಂಬ ಖುಷಿ ಪಟ್ಟಿದ್ರಂತೆ.

Source: newsfirstlive.com Source link