ಮಾನಸಿಕವಾಗಿ ಚಿಕ್ಕಮಗಳೂರಿನ ಬಾಲಕಿಗೆ ಎಷ್ಟು ಘಾಸಿಯಾಗಿರಬಹುದು: ರಮ್ಯಾ ಕಿಡಿ

ಬೆಂಗಳೂರು: ಚಿಕ್ಕಮಗಳೂರು ಜಿಲ್ಲೆಯ ಭದ್ರಾ ವನ್ಯಜೀವಿ ಅಭಯಾರಣ್ಯದ ಉಳಿವಿಗಾಗಿ ಸಾಕಷ್ಟು ಹೋರಾಟ ನಡೆಸಿಕೊಂಡು ಬಂದಿರುವ ಪರಿಸರವಾದಿ ಡಿವಿ ಗಿರೀಶ್ ಮೇಲೆ ಕಿಡಿಗೇಡಿಗಳು ಹಲ್ಲೆ ನಡೆಸಿದ್ದರು. ಇದೇ ವೇಳೆ ವಾಹನದಲ್ಲಿದ್ದ ಬಾಲಕಿ ಕುರಿತಂತೆ ಆಶ್ಲೀಲವಾಗಿ ಮಾತನಾಡಿದ್ದರು. ಸದ್ಯ ಈ ಬಗ್ಗೆ ನಟಿ ಹಾಗೂ ರಾಜಕಾರಣಿ ರಮ್ಯಾ ಬೇಸರ ವ್ಯಕ್ತಪಡಿಸಿದ್ದಾರೆ.

ಈ ವಿಚಾರವಾಗಿ ರಮ್ಯಾ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯ ಸ್ಟೋರಿಯಲ್ಲಿ ಬರೆದುಕೊಂಡಿದ್ದು, ಚಿಕ್ಕಮಗಳೂರಿನಲ್ಲಿ ಡಿ.ವಿ ಗಿರೀಶ್ ಹಾಗೂ ಅವರ ಸ್ನೇಹಿತರ ಮೇಲೆ ನಡೆದ ಹಲ್ಲೆ ವಿಚಾರ ಓದಿದೆ. ಪುಂಡರು ಇಬ್ಬರು ವ್ಯಕ್ತಿಯನ್ನು ನಿಂದಿಸುವ ವೇಳೆ 17 ವರ್ಷದ ಬಾಲಕಿ ಅಸಹಾಯಕಳಾಗಿ ವಾಹನದಲ್ಲಿಯೇ ಕುಳಿತುಕೊಂಡು ಇಡೀ ಘಟನೆಯನ್ನು ನೋಡುತ್ತಿದ್ದಳು. ಈ ವೇಳೆ ಬಾಲಕಿಯ ಮೇಲೆ ಎಷ್ಟು ಪರಿಣಾಮ ಬೀರಿರಬಹುದು ಊಹಿಸಿಕೊಳ್ಳಿ ಎಂದಿದ್ದಾರೆ. ಇದನ್ನೂ ಓದಿ: ಮಹಿಳೆಯರ ವಿರುದ್ಧದ ಅಪರಾಧಗಳತ್ತ ಕಣ್ಣು ಮುಚ್ಚಬೇಡಿ, ಮಾತನಾಡಿ: ರಮ್ಯಾ

ramya

ಮಾನಸಿಕವಾಗಿ ಬಾಲಕಿ ಎಷ್ಟು ಘಾಸಿಯಾಗಿರಬಹುದು. ಆ ದುಷ್ಟರನ್ನು ಅರೆಸ್ಟ್ ಮಾಡಬೇಕು. ಜನರ ಮೇಲೆ ದೈಹಿಕ ಹಲ್ಲೆ ನಡೆಸುವುದು ಅಷ್ಟು ಸುಲಭವೇ? ಕಾನೂನಿನ ಭಯ ಇಲ್ಲವೇ? ಬೇರೆ ಮನುಷ್ಯರ ಬಗ್ಗೆ ಗೌರವವಿಲ್ಲವೇ? ಎಂದು ಪ್ರಶ್ನಿಸುವ ಮೂಲಕ ಕಿಡಿಕಾರಿದ್ದಾರೆ. ಇದನ್ನೂ ಓದಿ: ನಾನು ಈ ಮೂರು ವಸ್ತುಗಳನ್ನು ಮರೆಯುತ್ತೇನೆ: ರಮ್ಯಾ

ಗಿರೀಶ್ ತಮ್ಮ ಜಿಪ್ಸಿಯಲ್ಲಿ ಕೆಮ್ಮಣ್ಣುಗುಂಡಿ ಸಮೀಪದ ಕಟ್ಟೆಹೊಳೆ ಎಸ್ಟೇಟ್‍ನಿಂದ ಸ್ನೇಹಿತರೊಂದಿಗೆ ಹಿಂದಿರುಗುವ ವೇಳೆ ಸಂತವೇರಿ ತಿರುವಿನ ಸಮೀಪದಲ್ಲಿ ಕೆಲ ಯುವಕರು ಬಾಲಕಿಯ ಬಗ್ಗೆ ಆಶ್ಲೀಲವಾಗಿ ಮಾತನಾಡಿದ್ದಾರೆ. ಈ ವೇಳೆ ಗಿರೀಶ್ ಆ ರೀತಿ ಮಾತನಾಡಬಾರದು ಎಂದು ಯುವಕರಿಗೆ ಬುದ್ಧಿ ಹೇಳಿ ಹೋಗಿದ್ದರು.

blank

ಕೆಲ ಹೊತ್ತಿನ ಬಳಿಕ ಯುವಕರು ಮತ್ತೆ ಅವರನ್ನು ಹಿಂಬಾಲಿಸಿಕೊಂಡು ಹೋಗಿ ಜಿಪ್ಸಿಗೆ ಅಡ್ಡ ಹಾಕಿ ಮನಬಂದಂತೆ ನಿಂದಿಸಿ ಹಲ್ಲೆ ನಡೆಸಿದ್ದು, ಈ ವೇಳೆ ಗಿರೀಶ್‍ಗೆ ಪೆಟ್ಟಾಗಿದೆ. ನಂತರ ಈ ಬಗ್ಗೆ ಗಿರೀಶ್ ಪೊಲೀಸರಿಗೆ ತಿಳಿಸಿ ಘಟನೆಯಲ್ಲಿ ಬಾಲಕಿಯನ್ನು ಹಿಡಿದು ಎಳೆದಾಡಿರುವುದಾಗಿ ದೂರು ನೀಡಿದ್ದರು.

Source: publictv.in Source link