‘ಯಾವ ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟವೂ ಇಲ್ಲ’ -ಮಾಜಿ ಸಚಿವ ಎಂ.ಬಿ ಪಾಟೀಲ್​​​ ಹೀಗಂದಿದ್ಯಾಕೆ?

‘ಯಾವ ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟವೂ ಇಲ್ಲ’ -ಮಾಜಿ ಸಚಿವ ಎಂ.ಬಿ ಪಾಟೀಲ್​​​ ಹೀಗಂದಿದ್ಯಾಕೆ?

ಬೆಂಗಳೂರು: ಯಾವ ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟವೂ ಇಲ್ಲ ಎಂದು ಮಾಜಿ ಸಚಿವ ಮತ್ತು ಕಾಂಗ್ರೆಸ್​ ಹಿರಿಯ ನಾಯಕ ಎಂ.ಪಿ ಪಾಟೀಲ್​​ ಸ್ಪಷ್ಟಪಡಿಸಿದ್ದಾರೆ. ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಎಂ.ಬಿ ಪಾಟೀಲ್​​​​, ನಾನು ಎಲ್ಲಿಯೂ ಮತ್ತೆ ಲಿಂಗಾಯತ ಧರ್ಮದ ಹೋರಾಟ ಎಂದು ಹೇಳಿಯೇ ಇಲ್ಲ. ಈ ಕುರಿತು 2023ರ ವಿಧಾನಸಭಾ ಚುನಾವಣೆ ನಂತರ ವೀರಶೈವ ಲಿಂಗಾಯತ ಸಮುದಾಯದ ಎಲ್ಲರೂ ಕೂತು ಚರ್ಚೆ ಮಾಡಿ ಒಂದು ನಿರ್ಧಾರಕ್ಕೆ ಬರುತ್ತೇವೆ ಎಂದಿದ್ದೇನೆ ಎಂದು ಸ್ಪಷ್ಟನೆ ನೀಡಿದರು.

ಇತ್ತೀಚೆಗೆ ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟ ಶುರುವಾಗಲಿದೆ ಎಂದು ಕೆಲವು ಮಾಧ್ಯಮಗಳಲ್ಲಿ ಪ್ರಸಾರ ಮಾಡಲಾಗುತ್ತಿದೆ. ನಾನು ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಬಳಿಕ ನೀಡಿದ ಹೇಳಿಕೆಯೇ ಬೇರೆ. ಎಲ್ಲಿಯೂ ನಾವು ಮತ್ತೆ ಲಿಂಗಾಯತ ಧರ್ಮದ ಕೂಗು, ಹೋರಾಟ, ಪ್ರತಿಭಟನೆ ಮಾಡುತ್ತೇವೆ ಎಂದು ಬಳಸೇ ಇಲ್ಲ ಎಂದು ಸಾಕ್ಷಿಗಾಗಿ ತಾವು ಮಾತಾಡಿದ್ದ ಹಳೆಯ ವಿಡಿಯೋ ತೋರಿಸಿ ಆಕ್ರೋಶ ಹೊರಹಾಕಿದರು.

ನಾನು ಮಾತಾಡಿದ್ದು ಇಷ್ಟೇ. ಪ್ರತಿ ಬಾರಿಯೂ ಚುಣಾವಣೆ ನಂತರ ಇದಕ್ಕೆ ರಾಜಕೀಯ ಬಣ್ಣ ನೀಡುತ್ತಾರೆ. 2023ರ ವಿಧಾನಸಭಾ ಚುನಾವಣೆ ಬಳಿಕ ಎಲ್ಲರೂ ಕೂತು ಒಂದು ನಿರ್ಧಾರಕ್ಕೆ ಬರುತ್ತೇವೆ ಎಂದು ಮಾತ್ರ ಹೇಳಿದ್ದೇನೆ. ಎಲ್ಲಿಯೂ ಪ್ರತ್ಯೇಕ ಧರ್ಮದ ಹೋರಾಟ ಆರಂಭಿಸುವ ಮಾತೇ ಆಡಿಲ್ಲ ಎಂದರು.

ನಮ್ಮ ಸಮಾಜಕ್ಕೆ ಒಳ್ಳೆಯದಾಗಬೇಕು

2023ರ ವಿಧಾನಸಭಾ ಚುನಾವಣೆ ಬಳಿಕ ನಮ್ಮ ಸಮಾಜಕ್ಕೆ ಒಳ್ಳೆಯದಾಗಬೇಕು. ನಮ್ಮ ಮಕ್ಕಳಿಗೆ, ಸಂಸ್ಥೆಗಳಿಗೆ ಒಳ್ಳೆಯದಾಗಬೇಕು. ಹಾಗಾಗಿ ನಾವು ಎಲ್ಲರೂ ಮತ್ತೊಮ್ಮೆ ಸೇರುತ್ತೇವೆ, ಒಂದು ನಿರ್ಧಾರಕ್ಕೆ ಬರುತ್ತೇವೆ. ವೀರಶೈವ ಮತ್ತು ಲಿಂಗಾಯತ ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುತ್ತೇವೆ. ನಮ್ಮಲ್ಲಿ ಕೆಲವು ತಾತ್ವಿಕ ಭಿನ್ನಾಭಿಪ್ರಾಯಗಳು ಇವೆ. ಇದು ಬಗೆಹರಿಯಲು ವರ್ಷ, ಎರಡು ವರ್ಷ, ಮೂರು ವರ್ಷ ಹೀಗೆ ಎಷ್ಟು ವರ್ಷಗಳಾದರೂ ತೆಗೆದುಕೊಳ್ಳಬಹುದು. ನಾನೇ ಇದರ ನಾಯಕತ್ವ ವಹಿಸುತ್ತೇನೆ ಎಂದು ಕೂಡ ಹೇಳಿಲ್ಲ ಎಂದು ಹೇಳಿದರು.

ಇದನ್ನೂ ಓದಿ: ಲಿಂಗಾಯತ ಪ್ರತ್ಯೇಕ ಧರ್ಮದ ಬಗ್ಗೆ ಮಾತಾಡುವುದು ಅವರವರ ವೈಯಕ್ತಿಕ ವಿಚಾರ: ಶಿವಾಚಾರ್ಯ ಶ್ರೀಗಳು

Source: newsfirstlive.com Source link