ರಾಯನ್ ಹೆಸರಲ್ಲಿರೋ ತರ ರಾಜ್, ಸರ್ಜಾ ಕುಟುಂಬ ಸದಾ ಒಂದಾಗಿರುತ್ತೆ -ಧ್ರುವ ಸರ್ಜಾ

ರಾಯನ್ ಹೆಸರಲ್ಲಿರೋ ತರ ರಾಜ್, ಸರ್ಜಾ ಕುಟುಂಬ ಸದಾ ಒಂದಾಗಿರುತ್ತೆ -ಧ್ರುವ ಸರ್ಜಾ

ಚಿರಂಜೀವಿ ಸರ್ಜಾ, ಮೇಘನಾ ರಾಜ್​ ದಂಪತಿಯ ಮುದ್ದಿನ ಮಗ ಜೂ.ಚಿರುಗೆ ಇಂದು ನಾಮಕರಣವನ್ನು ಕುಟುಂಸ್ಥರು ನೆರವೇರಿಸಿದ್ದು, ರಾಯನ್​​ ರಾಜ್​ ಸರ್ಜಾ ಎಂದು ಹೆಸರಿಟ್ಟಿದ್ದಾರೆ. ಬೆಂಗಳೂರಿನ ಚಾನ್ಸರಿ ಪೆವಿಲಿಯನ್ ಹೋಟೆಲ್​​​ನಲ್ಲಿ ನಾಮಕರಣ ಕಾರ್ಯಕ್ರಮ ನೆರವೇರಿದೆ. ಈ ವೇಳೆ ಮಾತನಾಡಿದ ಧ್ರುವ ಸರ್ಜಾ, ರಾಯನ್ ಹೆಸರಲ್ಲಿರೋ ತರ ರಾಜ್, ಸರ್ಜಾ ಕುಟುಂಬ ಸದಾ ಒಂದಾಗಿರುತ್ತೆ ಎಂದು ಹೇಳಿದ್ದಾರೆ.

blank

ನಮ್ಮ ಅಣ್ಣನ ಮಗ ಅವನ ಹೆಸರು ರಾಯನ್ ರಾಜ್ ಸರ್ಜಾ.. ಅವನ ಹೆಸರಲ್ಲೇ ಇರೋ ತರ ರಾಜ್ ಮತ್ತು ಸರ್ಜಾ ಕುಟುಂಬ ಸದಾ ಒಂದಾಗಿರ್ತಿವಿ. ಯಾರು ಏನೇ ಮಾಡಿದ್ರು ನಮ್ಮ ಕುಟುಂಬವನ್ನು ಬೇರೆ ಮಾಡಲು ಆಗೋದಿಲ್ಲ. ಈ ಸಮಯದಲ್ಲಿ ನಾನು ನಮ್ಮ ಅಂಕಲ್ ಮತ್ತು ಅಣ್ಣನ ನೆನಪಿಸಿಕೊಳ್ಳೋಕೆ ಇಷ್ಟ ಪಡುತ್ತೇನೆ. ಅವನಿಗೆ ರಾಯನ್ ರಾಜ್ ಸರ್ಜಾ ಅಂತ ಹೆಸರು ಇಟ್ಟಿದ್ದೀನಿ.. ಅವನು ರಾಜನಂತೆಯೇ ಇರ್ತಾನೆ ಎಂದು ಸತಂಸ ವ್ಯಕ್ತಪಡಿಸಿದರು.

blank

ಇದೇ ವೇಳೆ ಮಾತನಾಡಿದ ಕಿಶೋರ್ ಸರ್ಜಾ ಪುತ್ರ ಸೂರಜ್ ಸರ್ಜಾ, ನಮಗೆ ನಮ್ಮ ಅಂಕಲ್ ಯಾವ ರೀತಿ ಸಪೋರ್ಟ್ ಆಗಿ ಇದ್ರೋ, ಅದೇ ರೀತಿ ನಾವು ಕೂಡ ರಾಯನ್ ಜೊತೆ ಸದಾ ಇರ್ತೀವಿ ಎಂದರು. ಪ್ರೇರಣಾ ಸರ್ಜಾ ಮಾತನಾಡಿ, ನನಗೆ ಮೇಘಾನ ನೋಡಿದ್ರೆ ಸಖತ್ ಖುಷಿಯಾಗುತ್ತೆ. ಸಿಂಗಲ್ ಲೇಡಿ ಇದನೆಲ್ಲ ಬ್ಯಾಲೆನ್ಸ್ ಮಾಡೋದು ಕಷ್ಟ. ಆ ಮಗುವಿನ ನಗುವಲ್ಲಿ ನಾವು ನಗು ಕಾಣ್ತಿದ್ದೀವಿ ಎಂದರು.

 

View this post on Instagram

 

A post shared by Dhruva Sarja (@dhruva_sarjaa)

Source: newsfirstlive.com Source link