’14 ಲಕ್ಷ ಬ್ಯಾಗ್​​ ಖರೀದಿಯಲ್ಲಿ 6 ಕೋಟಿ ಭ್ರಷ್ಟಾಚಾರ’- ರೋಹಿಣಿ ಸಿಂಧೂರಿ ವಿರುದ್ಧ ಸಾ.ರಾ ಮಹೇಶ್​ ಗಂಭೀರ ಆರೋಪ

’14 ಲಕ್ಷ ಬ್ಯಾಗ್​​ ಖರೀದಿಯಲ್ಲಿ 6 ಕೋಟಿ ಭ್ರಷ್ಟಾಚಾರ’- ರೋಹಿಣಿ ಸಿಂಧೂರಿ ವಿರುದ್ಧ ಸಾ.ರಾ ಮಹೇಶ್​ ಗಂಭೀರ ಆರೋಪ

ಮೈಸೂರು: ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ವಿರುದ್ಧ ಜೆಡಿಎಸ್​ ಶಾಸಕ ಸಾ.ರಾ ಮಹೇಶ್​​ ಮತ್ತೊಂದು ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಸಾ.ರಾ ಮಹೇಶ್​​​, ಮೈಸೂರು ಜಿಲ್ಲೆಗೆ ಬಂದ ಎಂಟು ಕೋಟಿ ಎಸ್‌ಎಸ್‌ಸಿ ಅನುಧಾನ ದುರ್ಬಳಕೆ ಮಾಡಿಕೊಳ್ಳಲಾಗಿದೆ. ರೋಹಿಣಿ ಸಿಂಧೂರಿ ಪ್ಲಾಸ್ಟಿಕ್ ಮುಕ್ತ ಮೈಸೂರು ಮಾಡುವ ನೆಪದಲ್ಲಿ ಹಣ ಲೂಟಿ ಮಾಡಿದ್ದಾರೆ. ಬಟ್ಟೆ ಬ್ಯಾಗ್ ಖರೀದಿಯಲ್ಲಿ ಭಾರೀ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಆರೋಪ ಎಸಗಿದರು.

ಪುರಸಭೆ, ನಗರಸಭೆ, ಮಹಾನಗರ ಪಾಲಿಕೆ ಅನುಮತಿ ಪಡೆಯದೆ ಬಟ್ಟೆ ಬ್ಯಾಗ್ ಖರೀದಿ ಮಾಡಲಾಗಿದೆ. ಒಟ್ಟು 7.65 ಕೋಟಿ ರೂಪಾಯಿ ಹಣ ಬಳಕೆ ಮಾಡಿಕೊಳ್ಳಲಾಗಿದೆ. ಮೈಸೂರು ಉಪವಿಭಾಗಾಧಿಕಾರಿ ಒಬ್ಬ ಬ್ಯಾಗ್ ಸರಬರಾಜು ಗುತ್ತಿಗೆದಾರ ಆಗಿದ್ದ. ಇವರಿಂದಲೇ ಕಿಕ್‌ ಬ್ಯಾಕ್ ಪಡೆದು ಅವ್ಯವಹಾರ ಮಾಡಲಾಗಿದೆ. ಐದು ಕೆ.ಜಿ ಬ್ಯಾಗ್‌ ಒಂದಕ್ಕೆ ಸುಮಾರು 52 ರೂಪಾಯಿ ಬಿಲ್ ಮಾಡಿದ್ದಾರೆ. ಈಗ ಗುತ್ತಿಗೆದಾರ ಅಳುತ್ತಿದ್ದಾನೆ ಎಂದು ಕುಟುಕಿದರು.

ನಾವು ಖರೀದಿ ಮಾಡಿದಾಗ ಕೇವಲ 13 ರೂಪಾಯಿ ಸಿಗುತ್ತದೆ. ಆದರೆ, ಪ್ರತೀ ಬ್ಯಾಗ್​​ 52 ರೂಪಾಯಿಗೆ ಖರೀದಿ ಮಾಡಿದ್ದಾರೆ. 14,71,458 ಬ್ಯಾಗ್‌ಗಳ ಖರೀದಿ ಮಾಡಿದ್ದಾರೆ. ವಾಸ್ತವ ಬೆಲೆ‌ 1.47,14,586 ರೂಪಾಯಿ. ಆದರೆ, ಇವರು 7.65 ಕೋಟಿಯಷ್ಟು ಬಿಲ್ ಮಾಡಲು ಹೊರಟಿದ್ದಾರೆ ಎಂದರು.

ಇದನ್ನೂ ಓದಿ: ‘ಯಾವ ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟವೂ ಇಲ್ಲ’ -ಮಾಜಿ ಸಚಿವ ಎಂ.ಬಿ ಪಾಟೀಲ್​​​ ಹೀಗಂದಿದ್ಯಾಕೆ?

ಬರೋಬ್ಬರಿ ಆರು ಕೋಟಿಗೂ ಅಧಿಕ ಭ್ರಷ್ಟಾಚಾರ ನಡೆದಿದೆ. ಕರ್ನಾಟಕದ ತೆರಿಗೆ ಹಣ ಆಂಧ್ರದಲ್ಲಿ ಆಸ್ತಿ ಮಾಡುವವರ ಪಾಲಾಗುತ್ತಿದೆ. ಈ ಭ್ರಷ್ಟಾಚಾರ ಮುಚ್ಚಿ ಹಾಕಿಕೊಳ್ಳಲು ಸಿಎಂ ಮನೆಗೆ ಹೋಗಿದ್ದರು. ಇಂದೇ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಈ ವಿಚಾರ ಚರ್ಚೆ ಮಾಡುತ್ತೇನೆ. ರೋಹಿಣಿ ಸಿಂಧೂರಿಯನ್ನು ಅಮಾನತು ಮಾಡಿ ತನಿಖೆ ಮಾಡದಿದ್ದರೆ ಧರಣಿ ಕೂರುತ್ತೇನೆ ಎಂದು ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ.

ಇದನ್ನೂ ಓದಿ: ರೋಹಿಣಿ ವಿರುದ್ಧ ಪ್ರತಿಭಟನೆಗೆ ಸಾರಾ ಮಹೇಶ್ ನಿರ್ಧಾರ; ಭೂ ಅಕ್ರಮದ ಬಗ್ಗೆ ಮಾತನಾಡಿದ್ದೇ ತಪ್ಪಾ?

Source: newsfirstlive.com Source link