ಕತ್ತಲೆ ಆವರಿಸಿದ್ದ ನಮ್ಮ ಬಾಳಲ್ಲಿ ಬೆಳಕು ತಂದಿದ್ದೆ ‘ರಾಯನ್​’-ಮೇಘನಾ ರಾಜ್​

ಕತ್ತಲೆ ಆವರಿಸಿದ್ದ ನಮ್ಮ ಬಾಳಲ್ಲಿ ಬೆಳಕು ತಂದಿದ್ದೆ ‘ರಾಯನ್​’-ಮೇಘನಾ ರಾಜ್​

ಬೆಂಗಳೂರು : ನಟಿ ಮೇಘನಾ ರಾಜ್​, ಜಿರಂಜೀವಿ ಸರ್ಜಾ ಪುತ್ರನಿಗೆ ರಾಯನ್ ರಾಜ್ ಸರ್ಜಾ ಎಂದು ನಾಮಕರಣ ಮಾಡಿದ್ದಾರೆ. ಕಳೆದ 10 ತಿಂಗಳಿಂದ ಜ್ಯೂನಿಯರ್​ ಚಿರು ಎಂದೇ ಕರೆಯುತ್ತಿದ್ದ ಕುಟುಂಬಸ್ಥರು ಇಂದು ಬೆಂಗಳೂರಿನ ಚಾನ್ಸರಿ ಪೆವಿಲಿಯನ್ ಹೋಟೆಲ್​​​ನಲ್ಲಿ ನಾಮಕರಣ ಕಾರ್ಯಕ್ರಮ ನೆರವೇರಿಸಿದ್ದಾರೆ.

ನಾಮಕರಣ ಕಾರ್ಯಕ್ರಮದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮೇಘನಾ ರಾಜ್​, ಭಾವುಕರಾಗಿದ್ದು, ನಮ್ಮೆಲ್ಲರ ಜೀವನದಲ್ಲಿ ಕಳೆದ ಕೆಲವು ವರ್ಷಗಳಿಂದ ಕತ್ತಲೇ ತುಂಬಿತ್ತು, ಅದಕ್ಕೆ ಬೆಳಕು ನೀಡಿದವನೆ ನನ್ನ ಮಗ ‘ರಾಯನ್​’. ಮಗನ ಆಗಮನ ನಮ್ಮ ಬದುಕಿನಲ್ಲಿ ಸ್ವರ್ಗದ ಬಾಗಿಲು ತೆರೆದಂತಾಗಿದೆ ಎಂದರು.

ಚಿರು ನಮ್ಮೆಲ್ಲರಿಗೂ ರಾಜಾನೇ, ಚಿರು ಸ್ನೇಹಜೀವಿ, ಅವನ ಸ್ನೇಹಿತರು ನಮಗೆ ಬೆಂಗಾವಲಾಗಿ ನಿಂತಿದ್ದು, ನಮಗೆ ಆಸರೆಯಾಗಿದ್ದಾರೆ. ನಮ್ಮೆಲ್ಲರಿಗೂ ಅಂತಹ ಸ್ನೇಹಿತರನ್ನು ಬಿಟ್ಟು ಹೋಗಿದ್ದಾರೆ. ಹೀಗಾಗಿ ಪನ್ನಗಾಭರಣ ಮತ್ತು ಅವರ ತಂಡಕ್ಕೆ ಧನ್ಯವಾದಗಳನ್ನು ತಿಳಿಸ್ತೇನೆ ಎಂದರು.
ಇದನ್ನೂ ಓದಿ: ಮೇಘನಾ ರಾಜ್​​, ಚಿರಂಜೀವಿ ಸರ್ಜಾ ಪುತ್ರನ ನಾಮಕರಣ.. ಹೆಸರೇನು ಗೊತ್ತಾ?

Source: newsfirstlive.com Source link