ಮಿಡ್ ನೈಟ್ ವಿಡಿಯೋ ಕಾಲ್​ ಮಾಡಿ ಸುದೀಪ್​ಗೆ ಸರ್ಪೈಸ್​ ಕೊಟ್ಟ ಬಾಲಿವುಡ್ ಸೂಪರ್ ಸ್ಟಾರ್

ಮಿಡ್ ನೈಟ್ ವಿಡಿಯೋ ಕಾಲ್​ ಮಾಡಿ ಸುದೀಪ್​ಗೆ ಸರ್ಪೈಸ್​ ಕೊಟ್ಟ ಬಾಲಿವುಡ್ ಸೂಪರ್ ಸ್ಟಾರ್

ಸ್ಯಾಂಡಲ್​ವುಡ್​ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ನಿನ್ನೆಯಷ್ಟೇ 50 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ವೇಳೆ ಸ್ಯಾಂಡಲ್​ವುಡ್,​ ಟಾಲಿವುಡ್,​ ಕಾಲಿವುಡ್​ ,ಬಾಲಿವುಡ್​ನಿಂದ ಅನೇಕ ಸೆಲೆಬ್ರೇಟಿಗಳು ಸೋಶಿಯಲ್​ ಮೀಡಿಯಾ ಮೂಲಕ ಕಿಚ್ಚನಿಗೆ ಬರ್ತ್​ಡೇ ಶುಭಾಶಯಗಳನ್ನು ತಿಳಿಸಿದ್ರು. ಅದ್ರೆ ಬಾಲಿವುಡ್​ ಆ ಒಬ್ಬ ಸ್ಟಾರ್​ ನಟ ಸುದೀಪ್​ ಮಿಡ್​ ನೈಟ್​ ವಿಡಿಯೋ ಕಾಲ್​ ಮಾಡಿ ಬರ್ತ್​ಡೇ ವಿಶ್​ ತಿಳಿಸಿದಾರಂತೆ.

ಹೌದು, ಬಾಲಿವುಡ್​ ಬಾಕ್ಸ್ಆಫಿಸ್​ ಸುಲ್ತಾನ ಸಲ್ಮಾನ್ ಖಾನ್​ರ ದಬಾಂಗ್​ ಸಿನಿಮಾದಲ್ಲಿ ಸಲ್ಲು ಬಾಯ್​ಮುಂದೆ ಸುದೀಪ್​ ವಿಲನ್​ ಆಗಿ ಆ್ಯಕ್ಟ್​ ಮಾಡಿದ್ರು ರಿಯಲ್​ ಲೈಫ್​ನಲ್ಲಿ ಕಿಚ್ಚ ಮತ್ತು ಸಲ್ಲು ಇಬ್ಬರು ಬೆಸ್ಟ್​ ಫ್ರೆಂಡ್ಸ್​ ಅದ್ರು. ಇದಕ್ಕೆ ಸಾಕ್ಷಿಯಂಬಂತೆ ಸಲ್ಲು ಕಿಚ್ಚನಿಗೆ ಐಷಾರಾಮಿ BMW ಕಾರ್​ನ್ನು ಕೂಡ ಗಿಫ್ಟ್​ ಮಾಡಿದ್ರು. ಇದೀಗ ಸಲ್ಲು ಭಾಯ್​ ರಷ್ಯಾದಲ್ಲಿ ಟೈಗರ್​3 ಚಿತ್ರದ ಶೂಟಿಂಗ್​ನಲ್ಲಿ ಫುಲ್​ ಬ್ಯುಸಿಯಾಗಿದ್ರು ಕೂಡ ತಮ್ಮ ನೆಚ್ಚಿನ ಸ್ನೇಹಿತ ಕಿಚ್ಚನಿಗೆ ಮಿಡ್​ನೈಟ್​ ವಿಡಿಯೋ ಕಾಲ್​ ಮಾಡಿ ಬರ್ತ್​ಡೇ ವಿಶ್​ ತಿಳಿಸಿದಾರಂತೆ.. ಇನ್ನು ಸಲ್ಮಾನ್​ ಖಾನ್​ ಸಹೋದರ ಸೋಹೈಲ್​ ಖಾನ್​ ಕೂಡ ಸುದೀಪ್​ಗೆ ವಿಡಿಯೋ ಕಾಲ್​ ಮೂಲಕ ಹುಟ್ಟು ಹಬ್ಬದ ಶುಭಾಶಯವನ್ನು ತಿಳಿಸಿದ್ರಂತೆ.

ಇದನ್ನೂ ಓದಿ: ‘ಯಾವ ಹಾಲಿವುಡ್​ ಸಿನಿಮಾಗೂ ಕಡಿಮೆ ಇಲ್ಲ’ -‘ವಿಕ್ರಾಂತ್​ ರೋಣ’ನಿಗೆ ಟಾಲಿವುಡ್​ ಕಿಂಗ್​​ ಶಹಬ್ಬಾಸ್​ಗಿರಿ

Source: newsfirstlive.com Source link