‘LPG ಸಿಲಿಂಡರ್​​ ಮತ್ತು ತೈಲ ಬೆಲೆ ಏರಿಕೆಗೆ ತಾಲಿಬಾನ್​​ ಕಾರಣ’- ಬಿಜೆಪಿ ಶಾಸಕ ಅರವಿಂದ್​​ ಬೆಲ್ಲದ್​​

‘LPG ಸಿಲಿಂಡರ್​​ ಮತ್ತು ತೈಲ ಬೆಲೆ ಏರಿಕೆಗೆ ತಾಲಿಬಾನ್​​ ಕಾರಣ’- ಬಿಜೆಪಿ ಶಾಸಕ ಅರವಿಂದ್​​ ಬೆಲ್ಲದ್​​

ಹುಬ್ಬಳ್ಳಿ: ತಾಲಿಬಾನ್​​​ ಸಮಸ್ಯೆಯಿಂದಲೇ LPG ಸಿಲಿಂಡರ್​​ ಮತ್ತು ತೈಲ ಬೆಲೆ ಏರಿಕೆಯಾಗಿದೆ ಎಂದು ಬಿಜೆಪಿ ಶಾಸಕ ಅರವಿಂದ್​​ ಬೆಲ್ಲದ್ ಹೇಳಿದ್ದಾರೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮತದಾನದ ಬಳಿಕ ಮಾತಾಡಿದ ಅರವಿಂದ್​​​ ಬೆಲ್ಲದ್​​, ತಾಲಿಬಾನ್​ ಉಗ್ರರಿಂದ ಇಡೀ ಪ್ರಪಂಚಕ್ಕೆ ಸಮಸ್ಯೆಯಾಗಿದೆ. ಇದರ ಪರಿಣಾಮ ಭಾರತದಲ್ಲೂ ಎಲ್​​​ಪಿಜಿ ಸಿಲಿಂಡರ್​​​​​​ ಮತ್ತು ತೈಲ ಬೆಲೆ ಏರಿಕೆಯಾಗಿದೆ ಎಂದರು.

ತಾಲಿಬಾನ್​​​ನಿಂದಲೇ ಕಚ್ಚಾ ತೈಲ ಬರುತ್ತಿಲ್ಲ. ಹೀಗಾಗಿ ದೇಶದಲ್ಲಿ ಎಲ್​​ಪಿಜಿ ಸಿಲಿಂಡರ್​​ ಮತ್ತು ತೈಲ ಬೆಲೆ ಏರಿಕೆಯಾಗಿದೆ. ಇದನ್ನು ಮತದಾರ ಪ್ರಭುಗಳು ಅರ್ಥ ಮಾಡಿಕೊಳ್ಳಲಿದ್ದಾರೆ. ದೇಶದ ಒಳಿತಿಗಾಗಿ ಮೋದಿ ಕೆಲಸ ಮಾಡುತ್ತಿದ್ದಾರೆ ಎಂದು ಮತದಾರರಿಗೆ ಗೊತ್ತಿದೆ ಎಂದು ಹೇಳಿದರು.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಸಾಧನೆಗಳು ಬಿಜೆಪಿಯನ್ನು ಗೆಲ್ಲಿಸಲಿದೆ. ಸಿಎಂ ಬಸವರಾಜ್​​ ಬೊಮ್ಮಾಯಿ ಅವರು ಮುಂದಿನ ದಿನಗಳಲ್ಲಿ ಹುಬ್ಬಳ್ಳಿ-ಧಾರವಾಡಕ್ಕೆ ಒಳ್ಳೆಯ ಕೆಲಸ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ನ್ಯೂಜಿಲೆಂಡ್​​ನಲ್ಲಿ 6 ಮಂದಿಗೆ ಚಾಕುವಿನಿಂದ ಇರಿದ ISIS-K ಉಗ್ರನ ಕೊಂದ ಪೊಲೀಸರು

Source: newsfirstlive.com Source link