ಜೀವನದಲ್ಲಿ ಕಳ್ಕೊಂಡಿರೋದನ್ನ ದೇವರು ಇನ್ನೊಂದು ರೂಪದಲ್ಲಿ ಕೊಡ್ತಾನೆ- ಸುಂದರ್​ ರಾಜ್​

ಜೀವನದಲ್ಲಿ ಕಳ್ಕೊಂಡಿರೋದನ್ನ ದೇವರು ಇನ್ನೊಂದು ರೂಪದಲ್ಲಿ ಕೊಡ್ತಾನೆ- ಸುಂದರ್​ ರಾಜ್​

ಬೆಂಗಳೂರು : ನಟಿ ಮೇಘನಾ ರಾಜ್​, ಜಿರಂಜೀವಿ ಸರ್ಜಾ ಪುತ್ರನಿಗೆ ರಾಯನ್ ರಾಜ್ ಸರ್ಜಾ ಎಂದು ನಾಮಕರಣ ಮಾಡಿದ್ದಾರೆ. ಕಳೆದ 10 ತಿಂಗಳಿಂದ ಜ್ಯೂನಿಯರ್​ ಚಿರು ಎಂದೇ ಕರೆಯುತ್ತಿದ್ದ ಕುಟುಂಬಸ್ಥರು ಇಂದು ಬೆಂಗಳೂರಿನ ಚಾನ್ಸರಿ ಪೆವಿಲಿಯನ್ ಹೋಟೆಲ್​​​ನಲ್ಲಿ ನಾಮಕರಣ ಕಾರ್ಯಕ್ರಮ ನೆರವೇರಿಸಿದ್ದಾರೆ.

ನಾಮಕರಣ ಕಾರ್ಯಕ್ರಮದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮೇಘನಾ ರಾಜ್​ ತಂದೆ, ನಟ ಸುಂದರ್​ ರಾಜ್​, ಜೀವನದಲ್ಲಿ ಏನನ್ನಾದರೂ ಕಳ್ಕೊಂಡ್ರು ದೇವರು ಮತ್ತೆ ಇನ್ನೊದು ರೂಪದಲ್ಲಿ ಕೊಡ್ತಾನೆ ಅನ್ನೋ ನಂಬಿಕೆ ನನ್ನಲಿದ್ದು, ಆ ಪ್ರಕಾರ ರಾಯನ್​ ರೂಪದಲ್ಲಿ ಚಿರು ಮರು ಜನ್ಮ ಪಡೆದು ಬಂದಿದ್ದಾನೆ, ಅವನಿಗೆ ರಾಯನ್​ ರಾಜ್​ ಸರ್ಜಾ ಅಂತ ನಾಮಕರಣ ಮಾಡಲಾಗಿದೆ ಎಂದರು.

ಇದನ್ನೂ ಓದಿ: ಬೆಳ್ಳಂ ಬೆಳಗ್ಗೆ ನಾಡ ದೇವತೆ ಚಾಮುಂಡೇಶ್ವರಿ ದೇವಿ ದರ್ಶನ ಪಡೆದ ಕಿಚ್ಚ ಸುದೀಪ್​

ಚಿರು ಯಾವಾಗ್ಲೂ ನನ್ನ ಬಳಿ ಹೇಳ್ತಿದ್ದ, ಅಂಕಲ್​ ನಾನು ಫೀನಿಕ್ಸ್​ ಬರ್ಡ್​ ತರ ಮತ್ತೆ ಬರ್ತಿನಿ ಅಂತ ಹಂಗೆ ಯಾಕೆ ಹೇಳ್ತಿದ್ದ ಎಂದು ಗೊತ್ತಾಗಿರಲಿಲ್ಲ. ಇವತ್ತು ಎರಡು ಕುಟುಂಬಗಳು ಸೇರಿ ರಾಯನ್​ ಎಂದು ನಾಮಕರಣ ಮಾಡಿದ್ದೇವೆ. ಅರ್ಜುನ್​ ಸರ್ಜಾ ಮತ್ತು ಧ್ರುವ ಸರ್ಜಾ, ಮೇಘನಾಳಿಗೆ ಎರಡು ಕಣ್ಣುಗಳಿದ್ದಂತೆ. ಜ್ಯೂನಿಯರ್​ ಚಿರು ಈಗ ನನ್ನ ಫ್ರೆಂಡ್ ಆಗಿದ್ದಾನೆ. ನಮ್ಮ ಕಷ್ಟದ ಕಾಲದಲ್ಲಿ ನಮ್ಮ ಬೆನ್ನಿಗೆ ನಿಂತ ಚಿರು ಸ್ನೇಹಿತರಾದ ಪನ್ನಾಗಭರಣ ಅವರಿಗೆ ವಿಶೇಷವಾಗಿ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.

ಇದನ್ನೂ ಓದಿ: ಮೇಘನಾ ರಾಜ್​​, ಚಿರಂಜೀವಿ ಸರ್ಜಾ ಪುತ್ರನ ನಾಮಕರಣ.. ಹೆಸರೇನು ಗೊತ್ತಾ?

Source: newsfirstlive.com Source link