ತಾಲಿಬಾನ್ ಸರ್ಕಾರಕ್ಕೆ ಮುಲ್ಲಾ ಬರಾದರ್ ನಾಯಕ -ಯಾರಿತ..?

ತಾಲಿಬಾನ್ ಸರ್ಕಾರಕ್ಕೆ ಮುಲ್ಲಾ ಬರಾದರ್ ನಾಯಕ -ಯಾರಿತ..?

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸಹ-ಸಂಸ್ಥಾಪಕ ಮುಲ್ಲಾ ಬರಾದರ್ ನೇತೃತ್ವದಲ್ಲಿ ಸರ್ಕಾರ ರಚನೆಯಾಗಲಿದೆ ಅಂತಾ ಇಸ್ಲಾಮಿಕ್ ಸಂಘಟನೆ ಘೋಷಣೆ ಮಾಡಿದೆ. ಬರಾದರ್​ ತಾಲಿಬಾನ್​ ರಾಜಕೀಯ ಮುಖ್ಯಸ್ಥನಾಗಿದ್ದಾನೆ. ಈತನ ಪೂರ್ಣ ಹೆಸರು ಮುಲ್ಲಾ ಅಬ್ದುಲ್ ಘನಿ ಬರಾದರ್​.

ತಾಲಿಬಾನ್ ಸಂಸ್ಥಾಪಕ ಮುಲ್ಲಾ ಒಮರ್​ನ ಪುತ್ರ ಮುಲ್ಲಾ ಮೊಹಮ್ಮದ್ ಯಾಕೂಬ್, ತಾಲಿಬಾನ್ ಸರ್ಕಾರದ ಪ್ರಮುಖ ಹುದ್ದೆಯನ್ನ ನಿಭಾಯಿಸಲಿದ್ದಾನೆ ಅಂತಾ ಮೂಲಗಳು ತಿಳಿಸಿವೆ. ಜೊತೆಗೆ ಸರ್ಕಾರದ ಹಿರಿಯ ಹುದ್ದೆಗಳಲ್ಲಿ ಶೇರ್ ಮೊಹಮ್ಮದ್ ಅಬ್ಬಾಸ್ ಸ್ಟಾನೆಕ್ಜಾಯ್ ಕೂಡ ಸೇರಿಕೊಳ್ಳಲಿದ್ದಾನೆ ಎನ್ನಲಾಗಿದೆ. ಈ ಎಲ್ಲಾ ಟಾಪ್ ಲೀಡರ್​​ಗಳು ಈಗಾಗಲೇ ಕಾಬೂಲ್​ಗೆ ಬಂದಿದ್ದಾರೆ. ಸರ್ಕಾರ ರಚನೆ ಸಂಬಂಧ ಘೋಷಣೆ ಮಾಡಲು ಸಕಲ ತಯಾರಿ ನಡೆಸುತ್ತಿದ್ದಾರೆ ಅಂತಾ ಸುದ್ದಿಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.

ತಾಲಿಬಾನ್ ಸಂಘಟನೆ ಆಗಸ್ಟ್​ 15 ರಿಂದ ಕಾಬೂಲ್​​ ಅನ್ನ ಸಂಪೂರ್ಣವಾಗಿ ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ. ಮಾತ್ರವಲ್ಲ ಇಡೀ ದೇಶವನ್ನೇ ತನ್ನ ತೆಕ್ಕೆಗೆ ತೆಗೆದುಕೊಂಡಿದ್ದು, ಪಂಜ್​ಶೀರ್ ಕಣಿವೆಗಾಗಿ ಹೋರಾಟ ಮಾಡ್ತಿದೆ.

ಯಾರು ಮುಲ್ಲಾ ಬರಾದರ್..?
ತಾಲಿಬಾನ್‌ ಸಹ ಸಂಸ್ಥಾಪಕ ನಾಗಿರೋ ಅಬ್ದುಲ್‌ ಘನಿ ಬರದಾರ್‌, 1968ರಲ್ಲಿ ಅಫ್ಘಾನಿಸ್ತಾನದ ಉರುಜ್ಗಾನ್ ಪ್ರಾಂತ್ಯದಲ್ಲಿ ಜನಿಸಿದ್ದಾನೆ. ಹೈಬತ್​ಉಲ್ಲಾ ಅಖುಂದ್​ಜಾದ ನಂತರದ ಪ್ರಮುಖ ನಾಯಕ ಈತ. ತಾಲಿಬಾನ್ ಶ್ರೇಣಿಯಲ್ಲಿ ಬರಾದರ್‌ 2ನೇ ಅತ್ಯಂತ ಹಿರಿಯ ನಾಯಕ. ತಾಲಿಬಾನ್​ನ ಸಾರ್ವಜನಿಕ ಮುಖವಾಗಿ ಬರಾದರ್ ಗುರುತಿಸಿಕೊಂಡಿದ್ದಾನೆ.

2010ರಲ್ಲಿ ಪಾಕ್​ನ ಕರಾಚಿಯಲ್ಲಿ ಅಬ್ದುಲ್‌ ಘನಿ ಬರಾದರ್‌ ಬಂಧನವಾಗಿತ್ತು. ಅಮೆರಿಕ, ಪಾಕಿಸ್ತಾನ ಜಂಟಿ ಕಾರ್ಯಾಚರಣೆಯಲ್ಲಿ ಅರೆಸ್ಟ್​ ಮಾಡಲಾಗಿತ್ತು. 2018ರಲ್ಲಿ ಕಾರಾಗೃಹದಿಂದ ರಿಲೀಸ್​ ಆಗಿದ್ದ ಅಬ್ದುಲ್‌ ಘನಿ ಬರದಾರ್‌, ಟ್ರಂಪ್​ ಆಡಳಿತಾವಧಿಯಲ್ಲಿ ಶಾಂತಿ ಒಪ್ಪಂದಕ್ಕೆ ತಾಲಿಬಾನ್ ಸಹಿ ಹಾಕುವಲ್ಲಿ ಪ್ರಮುಖ ಪಾತ್ರವಹಿಸಿದ್ದಾನೆ. 2020ರ ಫೆಬ್ರವರಿಯಲ್ಲಿನ ಒಪ್ಪಂದದಲ್ಲಿ ಪ್ರಮುಖ ಪಾತ್ರ ನಿರ್ವಹಣೆ ಈತನದ್ದಾಗಿದೆ.

Source: newsfirstlive.com Source link