ಡ್ರಗ್​ ಮಾರಾಟದಲ್ಲಿ ತೊಡಗಿದ್ದ ಯುವತಿ ಸೇರಿ ಇಬ್ಬರು ಡ್ರಗ್​ ಪೆಡ್ಲರ್​ಗಳ ಬಂಧನ

ಡ್ರಗ್​ ಮಾರಾಟದಲ್ಲಿ ತೊಡಗಿದ್ದ ಯುವತಿ ಸೇರಿ ಇಬ್ಬರು ಡ್ರಗ್​ ಪೆಡ್ಲರ್​ಗಳ ಬಂಧನ

ಬೆಂಗಳೂರು: ಸಿಲಿಕಾನ್​ ಸಿಟಿಯಲ್ಲಿ ಮಾದಕ ವಸ್ತುಗಳ ಹಾವಳಿ ಜೋರಾಗಿದೆ. ನಗರದಲ್ಲಿ ಅಂತಾರಾಜ್ಯ ಹೆರಾಯಿನ್ ಡ್ರಗ್ಸ್ ‌ಮಾರಾಟದಲ್ಲಿ ತೊಡಗಿದ್ದ ಮಣಿಪುರ ಮೂಲದ ಇಬ್ಬರು ಡ್ರಗ್ ಪೆಡ್ಲರ್​​ಗಳನ್ನು ಕೆಜಿ ಹಳ್ಳಿ ಪೊಲೀಸರು ಬಂಧಿಸಿದ್ದಾರೆ.

blank

ಖಾಲಿದಾ, ಸುಹೇಲ್ ಬಂಧಿತ ಆರೋಪಿಗಳು. ಬಂಧಿತರು ಬರ್ಮಾದಿಂದ ಹೆರಾಯಿನ್ ತಂದು ಮಾರಾಟ ಮಾಡ್ತಿದ್ರು ಎನ್ನಲಾಗಿದೆ. ಮಣಿಪುರದಿಂದ ರೈಲಿನಲ್ಲಿ ನಗರಕ್ಕೆ ಬಂದು ಡ್ರಗ್ಸ್ ಮಾರಾಟದಲ್ಲಿ ತೊಡಗಿದ್ದರು ಎನ್ನಲಾಗಿದೆ. ಸದ್ಯ ಬಂಧಿತರಿಂದ 16 ಲಕ್ಷ ರೂಪಾಯಿ ಮೌಲ್ಯದ 80 ಗ್ರಾಂ ಹೆರಾಯಿನ್ ವಶಪಡಿಸಿಕೊಂಡಿರುವುದಾಗಿ ನ್ಯೂಸ್​ಫಸ್ಟ್​ಗೆ ಮಾಹಿತಿ ಲಭ್ಯವಾಗಿದೆ.

Source: newsfirstlive.com Source link