ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚನೆಗೆ ಮುಂದಾದ ತಾಲಿಬಾನ್​​; ಹೇಗಿರಲಿದೆ ಆಡಳಿತ?

ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚನೆಗೆ ಮುಂದಾದ ತಾಲಿಬಾನ್​​; ಹೇಗಿರಲಿದೆ ಆಡಳಿತ?

ಕಾಬೂಲ್​​​: ಅಮೆರಿಕಾ ತನ್ನ ಸೇನೆಯನ್ನು ಸಂಪೂರ್ಣ ವಾಪಸ್ ಕರೆಸಿಕೊಂಡ ಬೆನ್ನಲ್ಲೇ ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ ಸರ್ಕಾರ ರಚನೆಗೆ ಮುಂದಾಗಿದೆ. ಸರ್ಕಾರ ರಚನೆಗೆ ಮುಂದಾಗಿರುವ ತಾಲಿಬಾನ್​​​ ಹಲವು ರೂಪುರೇಷೆಗಳನ್ನು ಸಿದ್ಧಪಡಿಸಿಕೊಂಡಿದೆ. ಅಫ್ಘಾನ್‍ನಲ್ಲಿ ಇರಾನ್ ಮಾದರಿ ಅಧ್ಯಕ್ಷೀಯ ಆಡಳಿತ ಜಾರಿ ಮಾಡುವ ಉದ್ದೇಶವನ್ನು ತಾಲಿಬಾನ್ ನಾಯಕರು ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ.

ತಾಲಿಬಾನ್​ನ ಸರ್ಕಾರದಲ್ಲಿ ಹೇಗಿರಲಿದೆ ಆಡಳಿತ?

 • ಸರ್ವೋಚ್ಛ ನಾಯಕ ಎಂದು ಪರಿಗಣಿಸಲಾಗುವ ವ್ಯಕ್ತಿಗೆ ಸರ್ವಶಕ್ತಿ
 • ಹೈಬತ್​​ಉಲ್ಲಾ ಅಖುಂದ್​ಜಾದ ಬಳಿಯೇ ಸರ್ವೋಚ್ಛ ಅಧಿಕಾರ
 • ಅಖುಂದ್​ಜಾದ ರಾಜಕೀಯ, ಧಾರ್ಮಿಕ ಕ್ಷೇತ್ರದ ಅತ್ಯುನ್ನತ ನಾಯಕ
 • ದೇಶದ ಅಧ್ಯಕ್ಷರಿಗಿಂತಲೂ ಸರ್ವೋಚ್ಚ ನಾಯಕನಿಗೆ ಉನ್ನತ ಸ್ಥಾನ
 • ಸೇನೆ, ಸರ್ಕಾರ, ನ್ಯಾಯಾಂಗ ಎಲ್ಲದರ ಮುಖ್ಯಸ್ಥರ ನೇಮಕ ಅಧಿಕಾರ
 • ರಾಜಕೀಯ, ಧಾರ್ಮಿಕ ವಿಚಾರದಲ್ಲಿ ಅಖುಂದ್​ಜಾದ ಮಾತೇ ಅಂತಿಮ
 • ಸೇನೆಗೆ ಸಂಬಂಧಿಸಿದ ವ್ಯವಹಾರಗಳಲ್ಲೂ ಹೈಬತ್​​ಉಲ್ಲಾ ನಿರ್ಧಾರ
 • ಅಫ್ಘಾನಿಸ್ತಾನದ ಎಲ್ಲಾ ಭಾಗಗಳನ್ನ ಪ್ರಾಂತ್ಯಗಳ ಆಧಾರದಲ್ಲಿ ಆಡಳಿತ
 • ಪ್ರಾಂತ್ಯಗಳ ಆಳ್ವಿಕೆಯನ್ನು ನೋಡಿಕೊಳ್ಳಲು ಗವರ್ನರ್‌ಗಳ ನೇಮಕ ದ
 • ಜಿಲ್ಲೆಗಳಿಗೆ ಆಡಳಿತಾಧಿಕಾರಿಗಳಾಗಿರಲಿರೋ ಜಿಲ್ಲಾ ಗವರ್ನರ್‌ಗಳು
 • ಬಹುತೇಕ ಪ್ರಾಂತ್ಯಗಳ ಗವರ್ನರ್‌ ನೇಮಕ ಈಗಾಗಲೇ ಪೂರ್ಣ
 • ಹೊಸ ಆಡಳಿತದಲ್ಲಿ ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆ ಬದಲು ಸಾಧ್ಯತೆ
 • ಇನ್ನಷ್ಟೇ ಅಂತಿಮ ಆಗಬೇಕಿರೋ ರಾಷ್ಟ್ರಧ್ವಜ ಹಾಗೂ ರಾಷ್ಟ್ರಗೀತೆ
 • ಇಸ್ಲಾಮಿಕ್​ ಎಮಿರೇಟ್ಸ್​ ಹೆಸರಿನಲ್ಲಿ ಹೊಸ ಆಡಳಿತ ವ್ಯವಸ್ಥೆ ಜಾರಿ
 • ತಾಲಿಬಾನ್​ ಸರ್ಕಾರದಲ್ಲಿ ಮಹಿಳೆಯರಿಗೆ ಅವಕಾಶ ಸಾಧ್ಯತೆ ಕಡಿಮೆ

ಇದನ್ನೂ ಓದಿ: ಪಂಜ್‌ಶೀರ್​​ನಲ್ಲಿ ‘ಚಕ್ರವ್ಯೂಹ’ -ಕಾಬೂಲ್​ ತೊರೆಯುವ ವೇಳೆ ಅಮೆರಿಕ ಸೇನೆ ಮಾಡಿದ್ದೇನು ಗೊತ್ತಾ?

Source: newsfirstlive.com Source link