ತಮ್ಮವ್ರಿಗೆ ಗುತ್ತಿಗೆ ನೀಡಿ, ಕಳಪೆ ಕಾಮಗಾರಿ ಬೆಂಬಲಿಸ್ತಿದ್ದಾರೆ -ಮಾಜಿ ಸ್ಪೀಕರ್ ವಿರುದ್ಧ ಗಂಭೀರ ಆರೋಪ

ತಮ್ಮವ್ರಿಗೆ ಗುತ್ತಿಗೆ ನೀಡಿ, ಕಳಪೆ ಕಾಮಗಾರಿ ಬೆಂಬಲಿಸ್ತಿದ್ದಾರೆ -ಮಾಜಿ ಸ್ಪೀಕರ್ ವಿರುದ್ಧ ಗಂಭೀರ ಆರೋಪ

ಕೋಲಾರ : ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕೊಳಚೆ ನಿರ್ಮೂಲನಾ ಮಂಡಳಿಯಿಂದ ನಿರ್ಮಿಸುತ್ತಿರುವ ಮನೆಗಳು ಕಳಪೆಯಿಂದ ಕೂಡಿವೆ ಎಂದು ಗೊತ್ತಿದ್ದರೂ, ಗುತ್ತಿಗೆದಾರರಿಗೆ ಬೆಂಬಲ ನೀಡ್ತಿದ್ದಾರೆ ಅಂತಾ ಕೋಲಾರ ನಗರಸಭೆ ಅಧ್ಯಕ್ಷೆ‌ ಲಲಿತಾ ಶ್ರೀನಿವಾಸ್‌ ಗಂಭೀರ ಆರೋಪ ಮಾಡಿದ್ದಾರೆ.

ಈ ಕುರಿತು ನಗರದಲ್ಲಿ ಸುದ್ದಿಗೋಷ್ಠಿ ಆಯೋಜಿಸಿ ಮಾತನಾಡಿದ ಅವರು, ಗುತ್ತಿಗೆದಾರರಿಗೆ ರಮೇಶ್ ಕುಮಾರ್ ಬೆಂಬಲ ನೀಡ್ತಿದ್ದು, ಮನೆಗಳು ಕಳಪೆ ಕಾಮಗಾರಿಯಿಂದ ನಿರ್ಮಾಣವಾಗುತ್ತಿರುವುದು ಗೊತ್ತಿದ್ದರೂ ಸುಮ್ಮನಿದ್ದಾರೆ ಎಂದು ಆರೋಪಿಸಿದ್ದಾರೆ. ಜೊತೆಗೆ ನಮ್ಮ ಪುರಸಭೆಯ ಸದಸ್ಯರಿಗೂ ಧಮ್ಕಿ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ:  ‘LPG ಸಿಲಿಂಡರ್​​ ಮತ್ತು ತೈಲ ಬೆಲೆ ಏರಿಕೆಗೆ ತಾಲಿಬಾನ್​​ ಕಾರಣ’- ಬಿಜೆಪಿ ಶಾಸಕ ಅರವಿಂದ್​​ ಬೆಲ್ಲದ್​​

ಈ ಹಿಂದೆ ಶ್ರೀನಿವಾಸಪುರದ 5 ಕೊಳಚೆ ಪ್ರದೇಶಗಳಲ್ಲಿ 600 ಮನೆಗಳನ್ನು ಮಂಜೂರು ಮಾಡಲಾಗಿತ್ತು. ಇದನ್ನು 31.76 ಕೋಟಿಗಳಿಗೆ ಚಂದ್ರೇಗೌಡ ಎಂಬುವವರು ಗುತ್ತಿಗೆ ಪಡೆದಿದ್ದರು. 18 ತಿಂಗಳೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕಿತ್ತು. ಆದರೆ 18 ತಿಂಗಳು ಕಳೆದರೂ ಮನೆಗಳು ನಿರ್ಮಾಣವಾಗಿಲ್ಲ. ಬಳಿಕ ರಮೇಶ್ ಕುಮಾರ್ ಅವರ ಹಿಂಬಾಲಕರಾದ ಭಾಸ್ಕರ್ ಅನ್ನೋರಿಗೆ ಮಾಜಿ ಸ್ಪೀಕರ್​ ಸಬ್ ಕಾಂಟ್ರಾಕ್ಟ್ ಕೊಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.

Source: newsfirstlive.com Source link