ಮದುವೆಗೆ ಹಿರಿಯ ಮಗಳು ಒಪ್ಪದ್ದಕ್ಕೆ ಕಿರಿಯ ಮಗಳನ್ನೇ ಕಿಡ್ನಾಪ್‍ಗೈದ್ರು

ಮಂಡ್ಯ: ಮದುವೆಗೆ ಹಿರಿಯ ಮಗಳು ಒಪ್ಪಲಿಲ್ಲ ಎಂದು ಕಿರಿಯ ಮಗಳನ್ನು ಅಪಹರಿಸಲಾಗಿದೆ ಎಂದು ಪೊಲೀಸರಿಗೆ ಪೋಷಕರು ದೂರು ನೀಡಿದ್ದಾರೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಆಗಸ್ಟ್ 9ರಂದು ಘಟನೆ ನಡೆದಿದ್ದು, ನಾಪತ್ತೆಯಾಗಿರುವ ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿದ್ದ ವಿದ್ಯಾರ್ಥಿನಿ ರಕ್ಷಿತಾಳನ್ನು ನಾಗಮಂಗಲ ಮೂಲದ ಗಿರೀಶ್ ಎನ್ನುವವನು ಅಪಹರಣ ಮಾಡಿದ್ದಾನೆ ಎಂದು ಆಕೆಯ ಪೋಷಕರಾದ ನಂದೀಶ್ ಹಾಗೂ ಸವಿತಾ ಆರೋಪಿಸಿದ್ದಾರೆ. ಇದನ್ನೂ ಓದಿ:ಚಿಂಕೆ ಭೇಟೆಯಾಡಿದ್ದವನ ಮೇಲೆ ಶೂಟೌಟ್

ಏನಿದು ಘಟನೆ?

ಗಿರೀಶ್ ಇತ್ತೀಚೆಗೆ ತನ್ನ ಸಂಬಂಧಿಕರಾದ ನಂದೀಶ್ ಹಿರಿಮಗಳು ಚಂದನಾಳನ್ನು ವಿವಾಹವಾಗಲು ಕೇಳಿದ್ದನು. ಆದರೆ ಚಂದನ ಅಂತಿಮ ವರ್ಷದ ಬಿಎ ವ್ಯಾಸಂಗ ಮಾಡುತ್ತಿದ್ದರಿಂದ ಮದುವೆಗೆ ಒಪ್ಪಿರಲಿಲ್ಲ. ಬಳಿಕ ಮೇ 20ರಂದು ಮನೆಯಿಂದಲೇ ರಕ್ಷಿತಾ ನಾಪತ್ತೆಯಾಗಿ ವಾಪಸ್ಸಾಗಿದ್ದಳು. ಆ ಬಳಿಕ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದಿದ್ದಳು. ಇದನ್ನೂ ಓದಿ:ಸೆ.5ರಂದು ‘ಗೌರಿ ಲಂಕೇಶ್ ದಿನ’ವನ್ನಾಗಿ ಆಚರಿಸಲಿದೆ ಕೆನಡಾದ ಬರ್ನಾಬಿ ನಗರ

ಮತ್ತೆ ಆಗಸ್ಟ್ 9ರಿಂದ ಮತ್ತೊಮ್ಮೆ ಕಾಣೆಯಾಗಿದ್ದಾಳೆ. ಹಿರಿಮಗಳು ಚಂದನಾ ಮದುವೆಗೆ ಒಪ್ಪಲಿಲ್ಲವೆಂದು ಕಿರಿಮಗಳನ್ನು ಕಿಡ್ನಾಪ್ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಆದರೆ ರಕ್ಷಿತಾ ನಾಪತ್ತೆಯಾದ ಬಳಿಕ ಆಕೆಯ ಪ್ರೇಮ ಪ್ರಕರಣ ಬೆಳಕಿಗೆ ಬಂದಿದೆ. ಇದನ್ನೂ ಓದಿ:ಸುಧಾಮೂರ್ತಿ, ನಾರಾಯಣಮೂರ್ತಿಯನ್ನು ಶಾಲೆಯ ಉದ್ಘಾಟಕರಾಗಿ ಕರೆತರಬೇಕು: ಕಾರಜೋಳ

ಶ್ರೀರಂಗಪಟ್ಟಣ ಕೂಡಲಕುಪ್ಪೆ ಗ್ರಾಮದ ವೆಂಕಟೇಶ್ ಎಸ್.ಎಸ್.ಎಲ್.ಸಿ ಬಳಿಕ ರಕ್ಷಿತಾಳನ್ನು ಮದುವೆಯಾಗಲು ಕೇಳಿದ್ದರು. ಆದರೆ ಮಗಳು ಅಪ್ರಾಪ್ತಳು ಎಂಬ ಕಾರಣಕ್ಕೆ ಮದುವೆಗೆ ಪೋಷಕರು ನಿರಾಕರಿಸಿದ್ದರು.

blank

ಈ ಪರಿಣಾಮ ಗಿರೀಶ್ ವೆಂಕಟೇಶ್ ಜೊತೆ ಮದುವೆ ಮಾಡಿಸುವುದಾಗಿ ಪುಸಲಾಯಿಸಿ ರಕ್ಷಿತಾಳನ್ನು ಕರೆದುಕೊಂಡು ಹೋಗಿದ್ದಾನೆ ಎಂದು ಆಕೆಯ ಪೋಷಕರು ಆರೋಪಿಸಿದ್ದು, ಅವರು ರಕ್ಷಿತಾಳನ್ನು ವೆಂಕಟೇಶ್ ಜೊತೆ ಮದುವೆ ಮಾಡಿಸಿದ್ದಾನೋ ಅಥವಾ ತಾನೇ ಮದುವೆಯಾಗಿದ್ದಾನೋ ಗೊತ್ತಿಲ್ಲ ಎಂದು ಹೇಳುತ್ತಿದ್ದಾರೆ.

ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.

Source: publictv.in Source link