ಚಿನ್ನ, ಬೈಕ್ ಕಳ್ಳರ ಬಂಧನ; ₹19.40 ಲಕ್ಷ ಮೌಲ್ಯದ ಚಿನ್ನಾಭರಣ ವಶ

ಚಿನ್ನ, ಬೈಕ್ ಕಳ್ಳರ ಬಂಧನ; ₹19.40 ಲಕ್ಷ ಮೌಲ್ಯದ ಚಿನ್ನಾಭರಣ ವಶ

ಮೈಸೂರು: ನಗರದಲ್ಲಿ ನರಸಿಂಹರಾಜ ಠಾಣೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ.  ಸಾಂಸ್ಕೃತಿಕ ನಗರಿಯ ಜನರ ನಿದ್ದೆಗೆಡಿಸಿದ್ದ ಚಿನ್ನದ ಸರ ಮತ್ತು ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಇಬ್ಬರು ಖತರ್ನಾಕ್ ಖದೀಮರನ್ನು​ ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಕಳ್ಳರು ಕದ್ದ ಮಾಲನ್ನು ಖರೀದಿಸುತ್ತಿದ್ದವನನ್ನೂ ಹೆಡೆಮುರಿ ಕಟ್ಟಿದ್ದಾರೆ.

blank

ನಗರದ ಕೆ.ಆರ್.ಮೊಹಲ್ಲ ನಿವಾಸಿ ಸಲ್ಮಾನ್ ಖಾನ್ ಅಲಿಯಾಸ್ ಸಲ್ಲು (28), ಶಾಂತಿನಗರ ನಿವಾಸಿ ತಾಜುದ್ದೀನ್ ಅಲಿಯಾಸ್ ಕಾಲು (21) ಬಂಧಿತ ಆರೋಪಿಗಳು. ಕನ್ನ ಹಾಕಿದ ಮಾಲುಗಳನ್ನು ಖರೀದಿಸುತ್ತಿದ್ದ ಅಶೋಕ ರಸ್ತೆಯ ಮರಿಯಂ ಜ್ಯೂಯಲರ್ಸ್ ಮಾಲೀಕ ಮಹಮದ್ ಫರ್ವೀಜ್ (41) ಕೂಡ ಬಂಧಿಸಲಾಗಿದೆ.

ಇದನ್ನೂ ಓದಿ: ಮೃಗಾಲಯದ ಪ್ರಾಣಿಗಳಿಗೆ ಆಹಾರ ಇಲ್ಲ.. ಆದರೆ ಅಧ್ಯಕ್ಷರ ‘ಕಾರು’ಬಾರು- ಸಾರ್ವಜನಿಕರ ಆಕ್ರೋಶ ಸ್ಫೋಟ

19.40 ಲಕ್ಷ ರೂಪಾಯಿ ಮೌಲ್ಯದ ಒಟ್ಟು 388 ಗ್ರಾಂ ತೂಕದ 13 ಚಿನ್ನದ ಸರಗಳು, ಒಂದು ತಾಳಿ ಹಾಗು ಗುಂಡುಗಳು, ಒಂದೂವರೆ ಲಕ್ಷ ಮೌಲ್ಯದ ಎರಡು ದ್ವಿಚಕ್ರ ವಾಹನ ಮತ್ತು ಕೃತ್ಯಕ್ಕೆ ಬಳಸುತ್ತಿದ್ದ ಎರಡು ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆಂದು ನ್ಯೂಸ್​ಫಸ್ಟ್​ಗೆ ಮಾಹಿತಿ ಲಭ್ಯವಾಗಿದೆ.

ಖದೀಮರು ಶೋಕಿಗಾಗಿ, ಮತ್ತು ಐಷಾರಾಮಿ ಜೀವನ ನಡೆಸುವ ಉದ್ದೇಶದಿಂದ ಕಳ್ಳತನ ಮಾಡುತ್ತಿದ್ದರು ಎನ್ನಲಾಗಿದೆ. ಮೈಸೂರಿನ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದರೆಂದು ತಿಳಿದು ಬಂದಿದೆ.

ಇದನ್ನೂ ಓದಿ: ನ್ಯೂಜಿಲೆಂಡ್​​ನಲ್ಲಿ 6 ಮಂದಿಗೆ ಚಾಕುವಿನಿಂದ ಇರಿದ ISIS-K ಉಗ್ರನ ಕೊಂದ ಪೊಲೀಸರು

Source: newsfirstlive.com Source link