ಚಿಂದಿ ಆಯುವ ವಿಚಾರಕ್ಕೆ ನಡೆದಿತ್ತು ಮಹಿಳೆಯ ಬರ್ಬರ ಕೊಲೆ; ಮೂವರು ಅರೆಸ್ಟ್

ಚಿಂದಿ ಆಯುವ ವಿಚಾರಕ್ಕೆ ನಡೆದಿತ್ತು ಮಹಿಳೆಯ ಬರ್ಬರ ಕೊಲೆ; ಮೂವರು ಅರೆಸ್ಟ್

ಹಾಸನ: ಹೊಳೆನರಸೀಪುರದಲ್ಲಿ ನಿರ್ಗತಿಕ ಮಹಿಳೆ ಭೀಕರ ಹತ್ಯೆ ಪ್ರಕರಣ ಸಂಬಂಧ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಪಟ್ಟಣದ ಗಾಂಧಿನಗರದ ಖುತೇಜಾ ಭಾನು (47), ಸೈಯದ್ ಸಾಧಿಕ್, ಮೊಹಮ್ಮದ್ ರಫೀಕ್ ಎಂಬುವರು ಬಂಧಿತರು ಎಂದು ತಿಳಿದು ಬಂದಿದೆ.

ಚಿಂದಿ ಆಯುವ ವಿಚಾರದಲ್ಲಿ ನಿರ್ಗತಿಕ ಮಹಿಳೆ ಮೀನಾಕ್ಷಿ ಮತ್ತು ಆರೋಪಿಗಳ ನಡುವೆ ಗಲಾಟೆ ನಡೆದಿತ್ತು. ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲೇ ಚಿಂದಿ ಆಯುತ್ತೀಯ ಎಂದು ಮೀನಾಕ್ಷಿ ಜತೆ ಖುತೇಜಾ ಭಾನು ಎಂಬ ಆರೋಪಿ ಖ್ಯಾತೆ ತೆಗೆದಿದ್ದಾನೆ ಎನ್ನಲಾಗಿದೆ.

ಇನ್ನು, ಗಲಾಟೆ ಮಾಡಿಕೊಂಡ ಬಳಿಕ ಖುತೇಜಾ ಭಾನು ಮತ್ತು ಸಹಚರರು ಮೀನಾಕ್ಷಿಯನ್ನು ಮುಗಿಸಲು ಪ್ಲಾನ್​​ ಮಾಡಿದ್ದರು. ಆಗಸ್ಟ್​​ 29ನೇ ತಾರೀಕಿನಂದು ಪಟ್ಟಣದ ಗಾಂಧಿ ವೃತ್ತದ ಹಾಲಿನ ಡೈರಿ ಸಮೀಪ ಮಲಗಿದ್ದ ಮೀನಾಕ್ಷಿ(54) ತಲೆ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಹತ್ಯೆ ಮಾಡಿದ್ದರು.

ಮತ್ತೋರ್ವ ಆರೋಪಿಗಾಗಿ ಹುಡುಕಾಟ
ಮೀನಾಕ್ಷಿ ಹತ್ಯೆ ಬಳಿಕ ಆರೋಪಿಗಳು ತಲೆಮರೆಸಿಕೊಂಡಿದ್ದರು. ಈಗ ಪ್ರಕರಣ ಸಂಬಂಧ ಮೂವರನ್ನು ಬಂಧಿಸಿರುವ ಹೊಳೆನರಸೀಪುರ ನಗರ ಪೊಲೀಸರು ಮತ್ತೋರ್ವ ಆರೋಪಿ ದೊರೆಸ್ವಾಮಿಗಾಗಿ ಶೋಧಕಾರ್ಯ ಮುಂದುವರಿಸಿದ್ದಾರೆ.

Source: newsfirstlive.com Source link