ಬೋರ್​ವೆಲ್​ ಕೊರೆಯುವ ಲಾರಿ ಡಿಕ್ಕಿ ಹೊಡೆದು ಕರ್ತವ್ಯ ನಿರತ ಪೊಲೀಸ್​ ಪೇದೆ ಸಾವು

ಬೋರ್​ವೆಲ್​ ಕೊರೆಯುವ ಲಾರಿ ಡಿಕ್ಕಿ ಹೊಡೆದು ಕರ್ತವ್ಯ ನಿರತ ಪೊಲೀಸ್​ ಪೇದೆ ಸಾವು

ಧಾರವಾಡ: ಚುನಾವಣಾ ಕರ್ತವ್ಯದ ವೇಳೆ ರಸ್ತೆ ಅಪಘಾತ ಸಂಭವಿಸಿ ಪೊಲೀಸ್ ಪೇದೆ ಸಾವನ್ನಪ್ಪಿರೋ ಘಟನೆ, ಜಿಲ್ಲೆಯ ಹೊರವಲಯದ ಕೆಎಂಎಫ್​ ಬಳಿ ನಡೆದಿದೆ.

blank

ನಿಂಗಪ್ಪ ಭೂಷಣ್ಣವರ  ಸಾವನ್ನಪ್ಪಿದ ಪೇದೆ. ನಗರದಿಂದ ನವಲೂರ ಗ್ರಾಮಕ್ಕೆ ಪೊಲೀಸರಿಗೆ ಊಟ ತೆಗೆದುಕೊಂಡು ಪೇದೆ ಹೋಗುತ್ತಿದ್ದರು. ಈ ವೇಳೆ ಹಿಂದಿನಿಂದ ಬಂದ ಬೋರವೆಲ್​ ಕೊರೆಯುವ ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ, ಸ್ಥಳದಲ್ಲೇ. ಪೇದೆ ಸಾವನ್ನಪ್ಪಿದ್ದಾರೆ.

Source: newsfirstlive.com Source link