‘ನನ್ನ ಮೇಲೆ ಎಷ್ಟು ಕೋಪವೋ, ಅಷ್ಟೇ ಪ್ರೀತಿ’ ಸಿದ್ದಾರ್ಥ್​ ನೆನೆದು ಬಿಕ್ಕಿಬಿಕ್ಕಿ ಅತ್ತ ನಟಿ ಸಂಭಾವನ ಸೇಠ್​​​​

‘ನನ್ನ ಮೇಲೆ ಎಷ್ಟು ಕೋಪವೋ, ಅಷ್ಟೇ ಪ್ರೀತಿ’ ಸಿದ್ದಾರ್ಥ್​ ನೆನೆದು ಬಿಕ್ಕಿಬಿಕ್ಕಿ ಅತ್ತ ನಟಿ ಸಂಭಾವನ ಸೇಠ್​​​​

ಬಾಲಿವುಡ್ ಕಿರುತೆರೆ ನಟ ಮತ್ತು ಹಿಂದಿ ‘ಬಿಗ್ ಬಾಸ್ 13’ ವಿನ್ನರ್ ಸಿದ್ಧಾರ್ಥ್ ಶುಕ್ಲಾ(40) ಗುರುವಾರ ಕೊನೆಯುಸಿರೆಳೆದಿದ್ದಾರೆ. ಇಂದು ಸಿದ್ದಾರ್ಥ್​​​ ಶುಕ್ಲಾ ಅಂತಿಮ ಸಂಸ್ಕಾರ ಮುಂಬೈನಲ್ಲಿ ನಡೆಯಿತು. ಅಂತ್ಯಾ ಸಂಸ್ಕಾರಕ್ಕೂ ಮುನ್ನ ಹಲವು ಗಣ್ಯರು ಸಿದ್ದಾರ್ಥ್​​ ಶುಕ್ಲಾ ಅಂತಿಮ ದರ್ಶನಕ್ಕೆ ಆಗಮಿಸಿದ್ದರು. ಸ್ನೇಹಿತೆ ಮತ್ತು ಹಿಂದಿ ಕಿರುತೆರೆ ನಟಿ ಸಂಭಾವನ ಸೇಠ್ ಕೂಡ ಸಿದ್ದಾರ್ಥ್​​​​ ಶುಕ್ಲಾ ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಿದ್ದರು.

ಅಂತಿಮ ಸಂಸ್ಕಾರದ ಬಳಿಕ ಮಾಧ್ಯಮದವರೊಂದಿಗೆ ಮಾತಾಡಿದ ಸಂಭಾವನ ಸೇಠ್, ನಾನು ಸಿದ್ದಾರ್ಥ್​​​​ ಒಂದೇ ದಿನ ಹುಟ್ಟಿದ್ದು. ಸಿದ್ದಾರ್ಥ್​​ ನೇರ ನಡೆ ನುಡಿಯ ವ್ಯಕ್ತಿತ್ವ ಹೊಂದಿದ್ದ. ಯಾರೇ ಆಗಲೀ ಹೇಳಬೇಕಾದುದನ್ನು ನೇರವಾಗಿ ಹೇಳುತ್ತಿದ್ದ. ಹೃದಯದಲ್ಲಿ ಅಷ್ಟೇ ಪ್ರೀತಿಯನ್ನು ಇಟ್ಟಕೊಳ್ಳುತ್ತಿದ್ದ ಎಂದು ಕಣ್ಣೀರು ಹಾಕಿದರು.

ಬೇಗ ಸಿಗೋಣ, ಬೇಗ ಸಿಗೋಣ ಎನ್ನುತ್ತಿದ್ದ ಸಿದ್ದಾರ್ಥ್​​ನನ್ನು ಹೀಗೆ ನೋಡ್ತೀನಿ ಎಂದು ಅಂದುಕೊಂಡಿರಲಿಲ್ಲ. ಒಂದು ವಾರದ ಹಿಂದೆಯಷ್ಟೇ ಫೋನ್​​ ಮಾಡಿ ಮಾತಾಡಿದ್ದ. ಇವರ ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿ ಭಗವಂತ ನೀಡಲಿ. ಇದು ಸಾಯುವ ವಯಸ್ಸಲ್ಲ. ಸಣ್ಣ ವಯಸ್ಸಿಗೆ ನಮ್ಮನ್ನು ಬಿಟ್ಟು ಹೊರಟು ಹೋದ. ನನ್ನ ಬಗ್ಗೆ ಎಷ್ಟು ಕೋಪವೋ, ಅಷ್ಟೇ ಪ್ರೀತಿ ಇರುತ್ತಿತ್ತು. ತನ್ನ ಇಚ್ಛೆಯಂತೆ ಬದುಕುವ, ಎಲ್ಲವನ್ನು ನೇರವಾಗಿ ಹೇಳುವ ವ್ಯಕ್ತಿತ್ವ ಸಿದ್ದಾರ್ಥ್​​​​ದು ಎಂದು ಬಿಕ್ಕಿ ಬಿಕ್ಕಿ ಅತ್ತರು ಸಂಭಾವನ ಸೇಠ್​​​​.

ಇದನ್ನೂ ಓದಿ: ಲೆಜೆಂಡ್​ಗಳು ಹೇಳದೇ ಹೋಗಿಬಿಡ್ತಾರೆ: ಸಿದ್ದಾರ್ಥ್​ -ಸುಶಾಂತ್ ಸಾವಿನ ಬಗ್ಗೆ ಫ್ಯಾನ್ಸ್ ಹೇಳಿದ್ದಿದು..

Source: newsfirstlive.com Source link