ಗಂಡು ಮಗು ಆಗಲಿಲ್ಲ ಅಂತ ಕೈಕೊಟ್ಟ ಪ್ರೊಫೆಸರ್… ನಮಗೆ ನ್ಯಾಯ ಕೊಡಿಸಿ ಎಂದ ಮಹಿಳೆ

ಗಂಡು ಮಗು ಆಗಲಿಲ್ಲ ಅಂತ ಕೈಕೊಟ್ಟ ಪ್ರೊಫೆಸರ್… ನಮಗೆ ನ್ಯಾಯ ಕೊಡಿಸಿ ಎಂದ ಮಹಿಳೆ

ಪ್ರೀತ್ಸೆ ಪ್ರೀತ್ಸೆ ಅಂತ ದುಂಬಾಲು ಬಿದ್ದು ಮದುವೆಯಾಗಿ, ಗಂಡು ಮಕ್ಕಳು ಆಗಿಲ್ಲಾ ಅಂತ ಚಿತ್ರಹಿಂಸೆ ಕೊಟ್ಟು, ಕೈ ಕೊಟ್ಟಿರೋ ಘಟನೆ ಗದಗದಲ್ಲಿ ನಡೆದಿದೆ.

ಹೌದೂ, ಗದಗ ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆಯಲ್ಲಿ ಪ್ರೊಫೆಸರಾಗಿ ಕೆಲಸ ಮಾಡುತ್ತಿದ್ದ ಹೆಸರು ಷಣ್ಮುಖಪ್ಪ ಕಾರಭಾರಿ ಕಳೆದ 10 ವರ್ಷಗಳ ಹಿಂದೆ ಗದಗ ತಾಲೂಕಿನ ಅಡವಿ ಸೋಮಾಪುರ ತಾಂಡಾದ ಸರೋಜಾ ಎನ್ನುವ ಮಹಿಳೆಯನ್ನ ಪ್ರೀತ್ಸಿ, ಮದುವೆಯಾಗಿದ್ದ. ಅವಳ ತಂದೆ ತಾಯಿಗೆ ಈಕೆ ಒಬ್ಬಳ ಹೆಣ್ಮಗಳು ಆದ್ದರಿಂದ ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟಿದ್ದಾರೆ. ಆರೇಳು ವರ್ಷ ಸುಂದರ ಸಂಸಾರ ಮಾಡಿದ್ದಾರೆ. ಈ ವೇಳೆ ಷಣ್ಮುಖಪ್ಪ ಕಾರಭಾರಿ ಹಾಗೂ ಸರೋಜಾಗೆ ಮೂವರು ಮುದ್ದಾದ ಹಣ್ಣು ಮಕ್ಕಳು ಜನಿಸಿವೆ. ಆದರೆ ಈ ಷಣ್ಮುಖಪ್ಪ ಕಾರಭಾರಿಗೆ ಗಂಡು ಮಕ್ಕಳು ಬೇಕು ಎನ್ನುವ ಹೆಬ್ಬಯಕೆ, ಹಾಗಾಗಿ ನಿನಗೆ ಗಂಡು ಮಕ್ಕಳು ಆಗಿಲ್ಲಾ ಎಂದು ದಿನನಿತ್ಯದ ಕುಡಿದು ಬಂದು ಪತ್ನಿಗೆ, ದೈಹಿಕ ಹಾಗೂ ಮಾನಸಿಕವಾಗಿ ಹಿಂಸೆ ನೀಡಿದ್ದಾನೆ. ಪತ್ನಿ ಆತನ ಕಿರುಕುಳ ಸಹಿಸಿಕೊಂಡು ಜೀವನ ನಡೆಸುತ್ತಿದ್ದಳು. ಆದ್ರೆ, ಈಗ ಗಂಡು ಮಗುವಿಗಾಗಿ ಇನ್ನೊಂದು ಮದುವೆ ಮಾಡಿಕೊಂಡಿದ್ದಾನೆ ಎನ್ನುವ ಸತ್ಯ ಸರೋಜಾಗೆ ಗೊತ್ತಾಗಿದೆ. ಆಗಲೇ ಗಂಡನ ವಿರುದ್ಧ ಸಿಡಿದು ಕಾನೂನು ಹೋರಾಟಕ್ಕೆ ಇಳಿದಿದ್ದಾಳೆ.

blank

10 ವರ್ಷದ ಸಂಸಾರಕ್ಕೆ ಕೊನೆ

10 ವರ್ಷ ಸಂಸಾರ ಮಾಡಿದ ಗಂಡನ ವಿರುದ್ಧ ಗದಗ ಗ್ರಾಮೀಣ ಪೊಲೀಸ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾಳೆ. ಆದ್ರೆ, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹೆಣ್ಣು ಗಂಡು ಒಂದೇ ಅಂತಾ ಸಮಾಜಕ್ಕೆ ನ್ಯಾಯ ಹೇಳುವ ಷಣ್ಮುಖಪ್ಪ ಕಾರಭಾರಿ, ಈತ ಗಂಡು ಮಗುವಿಗೆ ಪತ್ನಿಯನ್ನು ಬಿಟ್ಟು ಎರಡನೇಯ ‌ಮದುವೆಯಾಗಿದ್ದಾನೆ. ಮೂರು ಹೆಣ್ಣು ಮಕ್ಕಳನ್ನು ಕಟ್ಟಿಕೊಂಡು ಸರೋಜಾ ಒಂಟಿಯಾಗಿದ್ದಾಳೆ. ನಮಗೆ ಅನ್ಯಾಯವಾಗಿದೆ, ನ್ಯಾಯ ಕೊಡಿಸಿ ಅಂತ ತಾಯಿ ಮಕ್ಕಳು ನ್ಯಾಯ ಕೇಳ್ತಾಯಿದ್ದಾರೆ. blank

Source: newsfirstlive.com Source link