ಮೀನುಗಾರಿಗೆ ವೇಳೆ ಮುಳುಗಿದ ಬೋಟ್; ರೋಚಕ ರಕ್ಷಣಾಕಾರ್ಯದಲ್ಲಿ 6 ಮಂದಿ ಸೇಫ್

ಮೀನುಗಾರಿಗೆ ವೇಳೆ ಮುಳುಗಿದ ಬೋಟ್; ರೋಚಕ ರಕ್ಷಣಾಕಾರ್ಯದಲ್ಲಿ 6 ಮಂದಿ ಸೇಫ್

ಕಾರವಾರ: ಮೀನುಗಾರಿಕೆಗೆ ತೆರಳಿದ್ದ ಬೋಟ್ ಸಮುದ್ರದಲ್ಲಿ ಮುಳುಗಡೆಯಾದ ಘಟನೆ ಹೊನ್ನಾವರದ ಕಾಸರಕೋಡ ಟೊಂಕ ಅಳಿವೆ ಪ್ರದೇಶದಲ್ಲಿ ನಡೆದಿದೆ.

ಅದೃಷ್ಟವಶಾತ್ ಬೋಟ್​ನಲ್ಲಿದ್ದ 6 ಮೀನುಗಾರರನ್ನ ರಕ್ಷಣೆ ಮಾಡಲಾಗಿದೆ. ಕರಾವಳಿ ಕಾವಲು ಪಡೆ ಪೊಲೀಸರು ಹಾಗೂ ಸ್ಥಳೀಯರಿಂದ ಮೀನುಗಾರರನ್ನ ರಕ್ಷಣೆ ಮಾಡಲಾಗಿದೆ. ಶ್ರೀ ಕೃಷ್ಣ ಭಂಡಾರಿ ಹೆಸರಿನ ಬೋಟ್ ಮುಳುಗಡೆಯಾಗಿದೆ.

ಬೋಟ್ ಮುಳುಗಡೆ ಹಿನ್ನೆಲೆ ಲಕ್ಷಾಂತರ ರೂಪಾಯಿ ಹಾನಿಯಾಗಿದೆ. ಎಂಜಿನ್​ನಲ್ಲಿ ತಾಂತ್ರಿಕ ದೋಷ ಹಿನ್ನೆಲೆಯಲ್ಲಿ ಬೋಟ್ ಮುಳುಗಡೆಯಾಗಿದೆ ಅನ್ನೋ ಮಾಹಿತಿ ಲಭ್ಯವಾಗಿದೆ.

Source: newsfirstlive.com Source link