ಬಳ್ಳಾರಿಯಲ್ಲಿ ದಾರುಣ ಘಟನೆ; ನೀರಿನ ಹೊಂಡಕ್ಕೆ ಬಿದ್ದು ಅಣ್ಣ-ತಮ್ಮ ಸಾವು

ಬಳ್ಳಾರಿಯಲ್ಲಿ ದಾರುಣ ಘಟನೆ; ನೀರಿನ ಹೊಂಡಕ್ಕೆ ಬಿದ್ದು ಅಣ್ಣ-ತಮ್ಮ ಸಾವು

ಬಳ್ಳಾರಿ: ಆಕಸ್ಮಿಕವಾಗಿ ನೀರಿನ ಹೊಂಡದಲ್ಲಿ ಬಿದ್ದು ಇಬ್ಬರು ಬಾಲಕರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸಿರಗುಪ್ಪ ತಾಲೂಕಿನ ಸಿರಿಗೇರಿ ಗ್ರಾಮದಲ್ಲಿ ನಡೆದಿದೆ.

blank

ಸಿರಿಗೇರಿ ಗ್ರಾಮದ ಮೌನೇಶ್(9), ರವಿ(7) ಮೃತ ಬಾಲಕರು. ಮೃತ ಬಾಲಕರು ತಿಪ್ಪೇಶ್ ಎನ್ನುವವರ ಮಕ್ಕಳು ಎನ್ನಲಾಗಿದೆ. ಸಂಬಂಧಿಕರ ಶವ ಸಂಸ್ಕಾರಕ್ಕೆ ತಪ್ಪೇಶ್ ಹೋಗಿದ್ದರು. ಮನೆಗೆ ಬರುವಷ್ಟರಲ್ಲಿ ಮಕ್ಕಳು ಶವವಾಗಿ ಮಲಗಿರೋದನ್ನ ಕಂಡು ದಿಗ್ಭ್ರಾಂತರಾಗಿದ್ದಾರೆ.

ಮನೆಯಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಸಿರಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Source: newsfirstlive.com Source link