ಹಿಂದಿನ ವರ್ಷದ RTE ಬಾಕಿ ಹಣ ಬಿಡುಗಡೆಗೆ ರುಪ್ಸಾ ಒತ್ತಾಯ

ಹಿಂದಿನ ವರ್ಷದ RTE ಬಾಕಿ ಹಣ ಬಿಡುಗಡೆಗೆ ರುಪ್ಸಾ ಒತ್ತಾಯ

ಬೆಂಗಳೂರು: ಸಂಕನೂರು ಸಮಿತಿ ಸಲ್ಲಿಸಿರುವ ವರದಿಯನ್ನ ಸರ್ಕಾರ ಜಾರಿಗೆ ತರಬೇಕು. ಜೊತೆಗೆ ಹಿಂದಿನ ವರ್ಷದ ಆರ್​ಟಿಇ ಬಾಕಿ ಹಣ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ‌ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಮನವಿ ಮಾಡಿಕೊಂಡಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಈಗಾಗಲೇ ರಾಜ್ಯದಲ್ಲಿ 9 ರಿಂದ 12ನೇ ತರಗತಿಗಳು ಪ್ರಾರಂಭವಾಗಿದೆ. ಇದರ ಜೊತೆ 6 ರಿಂದ 8ನೇ ತರಗತಿ ಪ್ರಾರಂಭ ಮಾಡಲು ಸರ್ಕಾರ ಆದೇಶ ನೀಡಿದೆ. ಈ ವೇಳೆ 1 ರಿಂದ 5ನೇ ತರಗತಿ ಶಾಲೆ ಪ್ರಾರಂಭಿಸುವಂತೆ ಪೋಷಕರಿಂದಲೂ ಒತ್ತಾಯ ಕೇಳಿ ಬಂದಿದೆ. ಸರ್ಕಾರ ಏನು ಆದೇಶ ಕೊಡುತ್ತೆ ಆ ಆದೇಶದಂತೆ ಎಲ್ಲವನ್ನೂ ಮಾಡಲಾಗುತ್ತೆ ಎಂದರು.

ಶಾಲೆಗಳ ಕಟ್ಟಡ ಸುರಕ್ಷತಾ ಹಾಗೂ ಅಗ್ನಿ ಸುರಕ್ಷತಾ ಪ್ರಮಾಣದ ಪತ್ರ ಕೊಡುವ ವಿಚಾರಕ್ಕೆ ಸಂಬಂಧ ಪಟ್ಟಂತೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಸರ್ಕಾರಕ್ಕೆ ವಿಧಾನ ಪರಿಷತ್ ಸದಸ್ಯ ಸಂಕನೂರ್ ಸಮಿತಿ ವರದಿ ಸಲ್ಲಿಸಿದೆ. ಈ ವರದಿಗೆ ರುಪ್ಸಾ ಕರ್ನಾಟಕ ಸ್ವಾಗತಿಸಿದೆ. ಕಳೆದ 60 ವರ್ಷಗಳಲ್ಲಿ ಯಾವುದೇ ಅವಘಡಗಳು ನಡೆದಿಲ್ಲ. ಕೆಲ ಅಂಶಗಳ ತಿದ್ದುಪಡಿಗಾಗಿ, ಸರ್ಕಾರದ ಗಮನಕ್ಕೆ ತರಲಾಗಿದೆ. ಆರ್.ಟಿ.ಇ, ಹಣ ಬಿಡುಗಡೆ ಹಾಗೂ ಶಾಲೆಗಳಿಗೆ ಪರ್ಮಿಷನ್ ಅರ್ಜಿಗಳನ್ನ ತಡೆ ಹಿಡಯಲಾಗಿದೆ. ಹೀಗಾಗಿ ಕೂಡಲೇ ಹಣವನ್ನ ಬಿಡುಗಡೆ ಮಾಡಬೇಕು ಅಂತಾ ಒತ್ತಾಯಿಸಿದರು.

Source: newsfirstlive.com Source link