ಸರಳವಾಗಿ ಮೈಸೂರು ದಸರಾ ಆಚರಿಸಲು ನಿರ್ಧಾರ; ₹6 ಕೋಟಿ ಬಿಡುಗಡೆಗೆ ಸರ್ಕಾರ ತೀರ್ಮಾನ

ಸರಳವಾಗಿ ಮೈಸೂರು ದಸರಾ ಆಚರಿಸಲು ನಿರ್ಧಾರ; ₹6 ಕೋಟಿ ಬಿಡುಗಡೆಗೆ ಸರ್ಕಾರ ತೀರ್ಮಾನ

ಬೆಂಗಳೂರು: ಈ ಬಾರಿಯ ಮೈಸೂರು ದಸರಾಗೆ ಬರೋಬ್ಬರಿ 6 ಕೋಟಿ ಹಣ ಬಿಡುಗಡೆ ಮಾಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ.

ಮೈಸೂರು ದಸರಾ ಸಂಬಂಧ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಇಂದು ಮಹತ್ವದ ಸಭೆ ನಡೆಯಿತು. ಸಭೆ ಬಳಿಕ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ ಸಚಿವ ಎಸ್​ಟಿ ಸೋಮಶೇಖರ್.. ಕಳೆದ ಬಾರಿ 150 ಮಂದಿಗೆ ಆಹ್ವಾನ ಕೊಟ್ಟಿದ್ದೇವು. ಈ ಬಾರಿ ಸರಳ ದಸರಾ ಆಚರಣೆಗೆ ನಿರ್ಧಾರ ಮಾಡಲಾಗಿದೆ. ಮೈಸೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ನೇತೃತ್ವದಲ್ಲಿ ಸಮಿತಿ ರಚನೆಯಾಗಲಿದೆ. ಇಂಧನ ಸಚಿವರು ದೀಪಾಲಂಕಾರ ಒಪ್ಪಿಕೊಂಡಿದ್ದಾರೆ. 9 ದಿನದ ಕಾರ್ಯಕ್ರಮಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಡೆಯಲಿದೆ‌ ಅಂತಾ ತಿಳಿಸಿದರು.

 

Source: newsfirstlive.com Source link