ಅಂದು ‘ಟೀಂ​​​ ಇಂಡಿಯಾ ಪರ ಆಡ್ತೀನಿ’ ಎಂದು ಮೈದಾನಕ್ಕೆ ನುಗಿದ್ದ ಜಾರ್ವೋ; ಇಂದು ಮತ್ತೊಂದು ಕುಚೇಷ್ಟೆ..!

ಅಂದು ‘ಟೀಂ​​​ ಇಂಡಿಯಾ ಪರ ಆಡ್ತೀನಿ’ ಎಂದು ಮೈದಾನಕ್ಕೆ ನುಗಿದ್ದ ಜಾರ್ವೋ; ಇಂದು ಮತ್ತೊಂದು ಕುಚೇಷ್ಟೆ..!

ಲಾರ್ಡ್ಸ್​​ ಮತ್ತು ಲೀಡ್ಸ್​​​ ಟೆಸ್ಟ್​ನಲ್ಲಿ ಮೈದಾನಕ್ಕೆ ನುಗ್ಗಿ ಅವಾಂತರ ಸೃಷ್ಟಿಸಿದ್ದ ಜಾರ್ವೋ, ಇದೀಗ ಕೆನ್ನಿಂಗ್ಟನ್​ ಓವಲ್​​ ಪಂದ್ಯದಲ್ಲೂ ಮೈದಾನ ಪ್ರವೇಶಿಸಿ ಸುದ್ದಿಯಲ್ಲಿದ್ದಾರೆ. ನಾಲ್ಕನೇ ಟೆಸ್ಟ್​​​ನ ಎರಡನೇ ದಿನದಾಟದಲ್ಲಿ ಇಂಗ್ಲೆಂಡ್​ ಬ್ಯಾಟಿಂಗ್​ ನಡೆಸ್ತಿದ್ದು, ಈ ವೇಳೆ ಮೈದಾನಕ್ಕೆ ನುಗ್ಗಿದ ಜಾರ್ವೋ, ಬೌಲಿಂಗ್​ ಮಾಡೋದಕ್ಕೆ ಯತ್ನಿಸಿ ಕುಚೇಷ್ಟೆ ಮಾಡಿದ್ದಾರೆ. ಉಮೇಶ್​ ಯಾದವ್​ ಬೌಲಿಂಗ್​ ಮಾಡೋದಕ್ಕೆ ಸಿದ್ಧರಿರುತ್ತಾರೆ. ಆಗ ಎಂಟ್ರಿಕೊಟ್ಟ ಜಾರ್ವೋ, ಓಡಿ ಹೋಗಿ ಬೌಲಿಂಗ್​ ಮಾಡೋವಾಗ ಬೈರ್​​ಸ್ಟೋಗೆ ಡಿಕ್ಕಿ ಹೊಡೆಯುತ್ತಾರೆ.

ಲಾರ್ಡ್ಸ್​ ಪಂದ್ಯದಲ್ಲಿ ಟೀಮ್​ ಇಂಡಿಯಾ ಜರ್ಸಿಯಂತಿರೋ ಜರ್ಸಿ ಧರಿಸಿ, ಮೈದಾನದೊಳಗೆ ಪ್ರವೇಶಿದ್ದ. ಮೈದಾನದಿಂದ ಹೊರದಬ್ಬಲು ಪ್ರಯತ್ನಿಸಿದ್ದ ಸಿಬ್ಬಂದಿಗೆ ಬಿಸಿಸಿಐ ಲೋಗೋ ತೋರಿಸಿ, ನಾನು ಕೂಡ ಭಾರತದ ಆಟಗಾರ ಎಂದು ಸನ್ನೆ ಮಾಡಿದ್ದರು.

ಇನ್ನು ಲೀಡ್ಸ್​​ ಟೆಸ್ಟ್​ ಅಂದರೆ ಮೂರನೇ ಟೆಸ್ಟ್​ನಲ್ಲಿ 3 ವಿಕೆಟ್​ ಕಳೆದುಕೊಂಡು ಟೀಮ್​ ಇಂಡಿಯಾ ಸಂಕಷ್ಟದಲ್ಲಿತ್ತು. ಈ ವೇಳೆ ನಾಯಕ ವಿರಾಟ್​ ಕೊಹ್ಲಿ ಕಣಕ್ಕಿಳಿಯಬೇಕಿತ್ತು. ಆದರೆ ಪ್ಯಾಡ್​-ಹೆಲ್ಮೆಟ್​ ಧರಿಸಿ ಬ್ಯಾಟ್​ ಹಿಡಿದು ಬ್ಯಾಟಿಂಗ್​ ಮಾಡೋದಾಗಿ ಮೈದಾನಕ್ಕೆ ನುಗ್ಗಿ ಗೊಂದಲ ಸೃಷ್ಟಿಸಿದ್ದರು. ಹೀಗಾಗಿ ಲೀಡ್ಸ್​ ಮೈದಾನದ ಆಡಳಿತಾಧಿಕಾರಿಗಳು ಜಾರ್ವೋಗೆ ಜೀವನ ಪರ್ಯಂತ ನಿಷೇಧ ಹೇರಿ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: ಟೀಮ್ ಇಂಡಿಯಾ ಪರ ಆಡೋದಾಗಿ ಅಂಗಳಕ್ಕೆ ನುಗ್ಗಿದ ಜಾರ್ವೋ ಯಾರು..?

ಈತ ಇಂಗ್ಲೆಂಡ್​ ಯೂಟ್ಯೂಡ್​ ಸ್ಟಾರ್​ ಆಗಿದ್ದು, ಆತನ ಪ್ರಚಾರಕ್ಕೆ ಹೀಗೆ ಮಾಡ್ತಿದ್ದಾರೆ ಅನ್ನೋದು ಗೊತ್ತಾಗಿದೆ. ಇದೇ ಮೊದಲಲ್ಲ ಈ ಹಿಂದೆ ಪುಟ್ಭಾಲ್​ ಟೂರ್ನಿಗಳಲ್ಲೂ ಫೀಲ್ಡ್​​ಗೆ ಎಂಟ್ರಿಕೊಟ್ಟಿದ್ದಾರೆ.

Source: newsfirstlive.com Source link