ಅಕ್ಟೋಬರ್​​ 7ಕ್ಕೆ ಮೈಸೂರು ದಸರಾ ಉದ್ಘಾಟನೆ; 15ಕ್ಕೆ ಜಂಬೂ ಸವಾರಿ

ಅಕ್ಟೋಬರ್​​ 7ಕ್ಕೆ ಮೈಸೂರು ದಸರಾ ಉದ್ಘಾಟನೆ; 15ಕ್ಕೆ ಜಂಬೂ ಸವಾರಿ

ಮೈಸೂರು: ಇಂದು ನಾಡಹಬ್ಬ ಮೈಸೂರು ದಸರಾ ಆಚರಣೆ 2021 ಸಂಬಂಧ ಸಿಎಂ ಬಸವರಾಜ್​​ ಬೊಮ್ಮಾಯಿ ನೇತೃತ್ವದಲ್ಲಿ ಪೂರ್ವಸಭೆ ನಡೆಸಲಾಯ್ತು. ವಿಧಾನಸೌಧದಲ್ಲಿ ನಡೆದ ಈ ಸಭೆಯಲ್ಲಿ ಮೈಸೂರು ದಸರಾ ಆಚರಣೆ ಕುರಿತು ಚರ್ಚೆ ನಡೆಸಲಾಯಿತು. ಬಳಿಕ ಸುದ್ದಿಗಾರರೊಂದಿಗೆ ಮಾತಾಡಿದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್​​.ಟಿ ಸೋಮಶೇಖರ್​​​, ರಾಜ್ಯದಲ್ಲಿ ಕೊರೋನಾ ತೀವ್ರವಾಗಿ ಹರಡುತ್ತಿದೆ. ಹೀಗಾಗಿ ಈ ವರ್ಷವೂ ಸರಳವಾಗಿ ದಸರಾ ಆಚರಣೆಗೆ ತೀರ್ಮಾನಿಸಿದ್ದೇವೆ ಎಂದರು.

ಅಕ್ಟೋಬರ್ 7ನೇ ತಾರೀಕಿನಂದು ಮೈಸೂರು ದಸರಾ ಉದ್ಘಾಟನೆಯಾಗಲಿದೆ. ಅಕ್ಟೋಬರ್ 15ರಂದು ದಸರಾ ಜಂಬೂ ಸವಾರಿ ಮಾಡಲಿದ್ದೇವೆ. ದಸರಾ ಆಚರಣೆಗೆ ಸರ್ಕಾರದಿಂದ ₹ 6 ಕೋಟಿ ರಿಲೀಸ್ ಮಾಡಲಾಗಿದೆ ಎಂದರು ಸೋಮಶೇಖರ್​​.

ಮತ್ತೊಮ್ಮೆ ಸಭೆ ನಡೆಸಿ ಗಣ್ಯರ ಆಹ್ವಾನ ಕುರಿತು ಚರ್ಚೆ ನಡೆಸಲಿದ್ದೇವೆ. ದೀಪಾಲಂಕಾರದ ಹೊಣೆ ಇಂಧನ ಸಚಿವರು ಒಪ್ಪಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 9 ದಿನದ ಕಾರ್ಯಕ್ರಮಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಹಿಂದಿನ ವರ್ಷದ RTE ಬಾಕಿ ಹಣ ಬಿಡುಗಡೆಗೆ ರುಪ್ಸಾ ಒತ್ತಾಯ

Source: newsfirstlive.com Source link