ಮೈಸೂರಲ್ಲಿ ಮತ್ತೊಂದು ಅತ್ಯಾಚಾರಕ್ಕೆ ಯತ್ನದ ಆರೋಪ; ಕೇಸ್ ದಾಖಲು

ಮೈಸೂರಲ್ಲಿ ಮತ್ತೊಂದು ಅತ್ಯಾಚಾರಕ್ಕೆ ಯತ್ನದ ಆರೋಪ; ಕೇಸ್ ದಾಖಲು

ಮೈಸೂರು: ಗ್ಯಾಂಗ್​ ರೇಪ್​ ಪ್ರಕರಣ ಮಾಸುವ ಮುನ್ನವೇ ಸಾಂಸ್ಕೃತಿಕ ನಗರದಲ್ಲಿ ಮತ್ತೊಂದು ಅತ್ಯಾಚಾರಕ್ಕೆ ಯತ್ನ ನಡೆದಿರುವ ಆರೋಪ ಕೇಳಿಬಂದಿದೆ.

ಆರ್.ಎಸ್ ನಾಯ್ಡು ನಗರದಲ್ಲಿ ಕಾಲೇಜು ವಿದ್ಯಾರ್ಥಿನಿ ಒಬ್ಬರ ಮೇಲೆ ಅತ್ಯಾಚಾರ ಯತ್ನ ನಡೆದಿದೆ ಎನ್ನಲಾಗಿದೆ. ಸದ್ಯ ವಿದ್ಯಾರ್ಥಿನಿಯನ್ನ ಕೆ.ಆರ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನಾ ಸ್ಥಳಕ್ಕೆ ಎನ್.ಆರ್ ಠಾಣೆ ಪೋಲಿಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಡಿಸಿಪಿ ಪ್ರದೀಪ್ ಗುಂಟಿ ಕೂಡ ಭೇಟಿ ನೀಡಿದ್ದಾರೆ. ಮಾತ್ರವಲ್ಲ ಶ್ವಾನದಳ, ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಸಿಎಂ ಪ್ರತಿಕ್ರಿಯೆ
ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಬಸವರಾಜ್ ಬೊಮ್ಮಾಯಿ, ಎನ್. ಆರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮತ್ತೊಬ್ಬ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಯತ್ನ, ಹಲ್ಲೆ ಪ್ರಕರಣ ನಡೆದಿದೆ ಅಂತಾ ವರದಿಯಾಗಿದೆ. ಮೈಸೂರು ಪೊಲೀಸ್ ಆಯುಕ್ತರು ಇಲ್ಲೇ ಇದ್ದಾರೆ. ಅವರ ಬಳಿ ಘಟನೆಯ ಮಾಹಿತಿ ಪಡೆಯುತ್ತೇನೆ. ಸೂಕ್ತ ಕ್ರಮಕ್ಕೆ ಸೂಚನೆ ಕೊಡುತ್ತೇನೆ ಅಂತಾ ತಿಳಿಸಿದ್ದಾರೆ.

Source: newsfirstlive.com Source link