‘ಪಕ್ಷದ ಕಚೇರಿಗೆ ಬರಲು ಅಧ್ಯಕ್ಷರ ಆದೇಶವಿತ್ತು, ಅದರಂತೆ ಬಂದು ಅಹವಾಲು ಸ್ವೀಕರಿಸಿದ್ದೀನಿ’

‘ಪಕ್ಷದ ಕಚೇರಿಗೆ ಬರಲು ಅಧ್ಯಕ್ಷರ ಆದೇಶವಿತ್ತು, ಅದರಂತೆ ಬಂದು ಅಹವಾಲು ಸ್ವೀಕರಿಸಿದ್ದೀನಿ’

ಬೆಂಗಳೂರು: ಖಾತೆ ವಿಚಾರದಲ್ಲಿ ಮುನಿಸಿಕೊಂಡಿದ್ದ ಸಚಿವ ಆನಂದ್​ ಸಿಂಗ್ ಇಂದು ಬಿಜೆಪಿ ಕಚೇರಿಗೆ ಭೇಟಿ ನೀಡಿದ್ದರು.

ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಆನಂದ್ ಸಿಂಗ್.. ಪಕ್ಷದ ಕಚೇರಿಗೆ ಬಂದು ಅಹವಾಲು ಸ್ವೀಕರಿಸಲು ಅಧ್ಯಕ್ಷರ ಆದೇಶವಿತ್ತು. ಅದರ ಪ್ರಕಾರ ನಾನು ಪಕ್ಷದ ಕಚೇರಿಗೆ ಬಂದು ಅಹವಾಲು ಸ್ವೀಕರಿಸಿದ್ದೀನಿ. ಪ್ರವಾಸೋದ್ಯಮ ಇಲಾಖೆಯಲ್ಲಿ ಹೊಸ ಪಾಲಿಸಿ ಬರಬೇಕಿತ್ತು. ಕೋವಿಡ್​ನಿಂದ ಪಾಲಿಸಿ ತರೋಕೆ ಆಗಿಲ್ಲ. ಪಿಪಿ ಮಾಡಲ್​ನಲ್ಲಿ ಟೂರಿಸ್ಟ್ ಮಾದರಿಯಲ್ಲಿ ಐದು ಪ್ರಾಜೆಕ್ಟ್ ಮಾಡಲು ಚರ್ಚೆಯಿದೆ ಎಂದರು.

ಗ್ಲೋಬಲ್ ಇನ್ವೆಸ್ಟ್​​ಮೆಂಟ್ ಕರೆದಾಗ ರೋಪ್​​ ವೇ ಸಾಕಷ್ಟು ಪ್ರವಾಸಿ ತಾಣದಲ್ಲಿ ತರುವ ಪ್ಲಾನ್ ಇದೆ. ಪ್ರತಿಯೊಂದು ಮಾಹಿತಿ ಮೂಲಕ ಪ್ರವಾಸಿ ತಾಣದ ವಿಚಾರ ಗ್ಲೋಬಲ್ ಮೀಟ್​ನಲ್ಲಿ ಮಾಹಿತಿ ತಿಳಿಸುವುದು. ಬಂಡವಾಳ ಲ್ಯಾಂಡ್ ಬ್ಯಾಂಕ್ ಮೇಲೆ ಗ್ಲೋಬಲ್ ‌ಮೀಟ್ ಕರೆಯುತ್ತೇವೆ ಅಂತಲೂ ಹೇಳಿದ್ರು.

blank

ಸಿಎಂ ಬಸವರಾಜ ಬೊಮ್ಮಾಯಿ‌ಗೆ ಗ್ಲೋಬಲ್ ಮೀಟ್ ಕರೆಯೋ ಬಗ್ಗೆ ಸಲಹೆ ಕೇಳುತ್ತೇನೆ. ಕೋಸ್ಟಲ್ ಟೂರಿಸಂಗೆ ಹೆಚ್ಚಿನ ಒತ್ತು ಕೊಡಬೇಕು‌ ಎಂದು ತೀರ್ಮಾನ ಇದೆ. ದಾರಿ ದೀಪ‌ ಲೋಕಲ್ ವ್ಯಾಪಾರ ಮಾಡುವವರಿಗೆ ಉಪಯೋಗ, ಹೋಟೆಲ್, ವಾಹನ ಉದ್ಯಮಕ್ಕೆ‌ ಉಪಯೋಗ ಆಗಬೇಕು. ವಿಸೆಲ್‌ ಕರ್ನಾಟಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ‌ಮಾಡುತ್ತೇವೆ. ವರ್ಷಕ್ಕೆ ಸಬ್ಸಿಡಿ 15%ರಷ್ಟು ಹೋಟೆಲ್​ಗೆ ಕೊಡುತ್ತಿದ್ದೇವಿ. ಇದೀಗ ಅದನ್ನು ಸಬ್ಸಿಡಿ 25% ಕೊಡುವ ಚಿಂತನೆಯಿದೆ. ಸಚಿವ ಸಂಪುಟದಲ್ಲಿ ಇದೊಂದು ಮನವಿ ಇಟ್ಟಿದ್ದೇವೆ. ಪ್ರತಿ ಐದು ‌ವರ್ಷಕ್ಕೆ‌ 500 ಕೋಟಿ ಅನುದಾನ ಇಡಬೇಕು. ಸಬ್ಸಿಡಿ ಕೊಟ್ಟರೆ ಉದ್ಯಮ ‌ಮುಂದೆ ಬರುತ್ತೆ ಎಂದರು.

ಜಂಗಲ್​ ರೆಸಾರ್ಟ್​ ಮಾರಾಟದ ಪ್ರಶ್ನೆ!
ಜಂಗಲ್ ರೆಸಾರ್ಟ್ ಮಾರಾಟಕ್ಕೆ ಇಟ್ಟಿದ್ದಾರೆ ಎಂಬ ಪ್ರಶ್ನೆಗೆ ಸಂಬಂಧ ಪಟ್ಟಂತೆ ಪ್ರತಿಕ್ರಿಯಿಸಿದ ಅವ್ರು, ಈ ರೀತಿಯ ವಿಚಾರ ಸರಿಯಲ್ಲ. ಮಾರಾಟ ಮಾಡೋಕೆ ಇದು ನಮ್ಮ ಮನೆಯ ಆಸ್ತಿನಾ? ಹೀಗಾಗಿ ಇದಕ್ಕೆ ಉತ್ತರ ಕೋಡಲು ಆಗಲ್ಲ. ಇದು ನಮ್ಮ ಅಪ್ಪನ ಮನೆ ಆಸ್ತಿ ಅಲ್ಲ, ಖಾಸಗೀಕರಣ ಅಂದರೆ ಪ್ರವಾಸಿಗರಿಗೆ ಹೆಚ್ಚಿನ ಸೌಲಭ್ಯ ಕೊಡಬೇಕು. ಖಾಸಗಿ ಹೋಟೆಲ್ ಮಾದರಿಯಲ್ಲಿ ಸರ್ಕಾರದ ರೆಸಾರ್ಟ್​ನಲ್ಲಿ ಮಾಡಲು ಚರ್ಚೆ ‌ಮಾಡಿದ್ದೇವೆ. ಲಾಭದಲ್ಲಿ ಹಂಚಿಕೆ ಮಾಡುವುದು ಅದರಲ್ಲಿ, ಬಂದಿರುವ ಲಾಭದಲ್ಲಿ ಶೇರ್ ಮಾಡಬೇಕು ಎಂದು ಚರ್ಚೆ ಮಾಡಿದ್ದೇವೆ. ಇದರಿಂದ ನಮ್ಮ‌ ಕ್ವಾಲಿಟಿ ಹೆಚ್ಚುತ್ತದೆ. ಇದು ಖಾಸಗೀಕರಣ ಅಲ್ಲ, ಪ್ರವಾಸಿಗರಿಗೆ ಹೆಚ್ಚಾಗಿ ಸೌಲಭ್ಯ ಕೊಡಬೇಕು. ಸಾರ್ವಜನಿಕವಾಗಿ ಹಾಗೂ ವಿಧಾನಸೌಧದಲ್ಲಿ ಈ ವಿಚಾರದ ಬಗ್ಗೆ ಚರ್ಚೆ ‌ಮಾಡುತ್ತೇವೆ ಎಂದರು.

blank

ಸರ್ಕಾರದ ಬಳಿ ಹಣವಿಲ್ಲವಾ..?
ಸರ್ಕಾರದ ಬಳಿ ದುಡ್ಡು ಇಲ್ಲದೇ, ಖಾಸಗೀಕರಣ ಮಾಡುತ್ತಿದ್ದೀರಾ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸದ ಅವ್ರು, ನಮ್ಮಲ್ಲಿ ಸ್ವಚ್ಛತೆ ಮಾಡೋಕೆ ಆಗ್ತಿಲ್ಲ ಎಂಬುದಾಗ‌ ನನ್ನ ಗಮನಕ್ಕೆ ಬಂದಿದೆ. ಈ ಮೂಲಕ ಖಾಸಗೀಕರಣ ಮಾಡಿದ್ರೆ ಪ್ರವಾಸಿಗರಿಗೆ ಉತ್ತಮ ವ್ಯವಸ್ಥೆ ಸಿಗುತ್ತದೆ. ಅಶೋಕ್ ಹೋಟೆಲ್ ‌ಮಾದರಿಯಲ್ಲಿ ಹಂತ ಹಂತವಾಗಿ ಮಾರಾಟ ಮಾಡಿಲ್ಲ. ಅಶೋಕ್ ಹೋಟೆಲ್ ಕಥೆ ಬೇರೆ, ಲೀಸ್ ಕೊಟ್ಟಿರಬೇಕು ಇಲ್ಲ ನೇರವಾಗಿ ಸೇಲ್ ಆಗಿರಬಹುದು. ಲೀಸ್ ಕೋಡೋದ್ರಲ್ಲಿ ತಪ್ಪೇನಿದೆ? ನಾವು ಹಾಗೆ ಮಾಡಲ್ಲ, ಖಾಸಗೀಕರಣ ಕೊಟ್ರು, ಕೆಲವೊಂದು ರೂಲ್ಸ್ ‌ಮೇಲೆ ಕೊಡ್ತೀವಿ ಎಂದರು.

blank

 

Source: newsfirstlive.com Source link