ಅಚ್ಚರಿಗೆ ಕಾರಣವಾಗಿದೆ ಎರಡು ತಲೆ, ಎರಡು ಬಾಯಿಯುಳ್ಳ ಕರುವಿನ ಜನನ

ಅಚ್ಚರಿಗೆ ಕಾರಣವಾಗಿದೆ ಎರಡು ತಲೆ, ಎರಡು ಬಾಯಿಯುಳ್ಳ ಕರುವಿನ ಜನನ

ರಾಜಸ್ಥಾನದ ಧೋಲ್ಪುರನಲ್ಲಿ ಎಮ್ಮೆಯೊಂದು ಎರಡು ತಲೆಗಳಿರುವ ಕರುವಿಗೆ ಜನ್ಮ ನೀಡಿದ್ದು, ಜನಮಾನಸದಲ್ಲಿ ಅಚ್ಚರಿ ಉಂಟು ಮಾಡಿದೆ. ಧೋಲ್ಪುರ ಜಿಲ್ಲೆಯ ಪುರ ಸಿಕ್ರೌದ ಗ್ರಾಮದಲ್ಲಿ ಜಾನುವಾರುಗಳನ್ನು ಸಾಕುವವರ ಮನೆಯಲ್ಲಿ ಎರಡು ತಲೆಗಳಿರುವ ಈ ವಿಶೇಷ ಕರು ಜನಿಸಿದ್ದು, ಜನ್ಮ ತಾಳಿರುವ ಎಮ್ಮೆ ಕರುವಿಗೆ 2 ತಲೆ, ಎರಡು ಬಾಯಿ, ಎರಡು ಕುತ್ತಿಗೆ, ನಾಲ್ಕು ಕಣ್ಣು ಮತ್ತು ನಾಲ್ಕು ಕಿವಿಗಳಿವೆ. ಈ ವಿಷಯ ಗ್ರಾಮದಲ್ಲಿ ಹರಡುತ್ತಿದ್ದಂತೆ ವಿಶೇಷ ಕರುಗಳನ್ನು ಕಾಣಲು ಜನರು ತಂಡೋಪತಂಡವಾಗಿ ಆಗಮಿಸುತ್ತಿದ್ದು, ಕರುಗಳು ಈ ರೀತಿ ಜನಿಸಲು ಕಾರಣವೇನು ಎಂಬುದನ್ನು ತಿಳಿಯಲು ಕೌತುಕರಾಗಿದ್ದಾರೆ.

ಎಮ್ಮೆ ಈ ವಿಶೇಷ ಕರುಗಳಿಗೆ ಜನ್ಮ ನೀಡುತ್ತಿದ್ದಂತೆ ಮನೆಯವರೆಲ್ಲರಿಗೆ ಆಶ್ಚರ್ಯ ಉಂಟಾಗಿದೆ. ಕರು ಜನಿಸುತ್ತಿದ್ದಂತೆ ಮನೆಯ ಸದಸ್ಯರು ಅದಕ್ಕೆ ಪ್ಲಾಸ್ಟಿಕ್​ ಬಾಟಲಿಯಿಂದ ಹಾಲು ಕುಡಿಸಿ, ಆರೈಕೆ ಮಾಡುತ್ತಿದ್ದಾರೆ. ಸದ್ಯ ಎಮ್ಮೆ ಕರು ಆರೋಗ್ಯವಾಗಿದ್ದು, ಕರು ಎರಡೂ ಬಾಯಿಂದ ಹಾಲು ಕುಡಿಯುತ್ತಿದೆ ಎನ್ನಲಾಗಿದೆ.

ಇದನ್ನೂ ಓದಿ: ಭಯಂಕರ ವಿಷದ ಹಾವಿನಲ್ಲಿ ಪತ್ತೆಯಾಯ್ತು ಸಂಜೀವಿನಿ.. ಕೊರೊನಾ ವೈರಸ್​ಗೆ ಮದ್ದಾಯ್ತು ಡೇಂಜರಸ್ ಪಾಯ್ಸನ್

ಅಪರೂಪದ ಎರಡು ತಲೆಯ ಕರು ಜನಿಸುತ್ತಿರುವುದು ಇದೇ ಮೊದಲೆನಲ್ಲ. ಕೆಲ ದಿನಗಳ ಹಿಂದೆ ಉತ್ತರ ಪ್ರದೇಶದ ಚಂದ್ರೌಲಿ ಜಿಲ್ಲೆಯಲ್ಲಿ ಎರಡು ತಲೆಯ ಕರು ಜನಿಸಿತು, ಅಲ್ಲಿನ ಸ್ಥಳೀಯರು ಇದನ್ನು ಪವಾಡ ಎಂದಿದ್ದರು. ತಜ್ಞರ ಪ್ರಕಾರ, ಎರಡು ತಲೆಗಳ ಬೆಳವಣಿಗೆಗೆ ಪೌರಾಣಿಕ ನಂಬಿಕೆಗಳಿಗೆ ಯಾವುದೇ ಸಂಬಂಧವಿಲ್ಲ ಮತ್ತು ಇದು ಕೇವಲ ಜೀವಶಾಸ್ತ್ರದ ಒಂದು ಭಾಗವಾಗಿದೆ ಎಂದು ತಜ್ಞರು ಹೇಳಿದ್ದಾರೆ.

ಇನ್ನು ಈ ಘಟನೆ ಕುರಿತು ಪಶುವೈದ್ಯ ಗುಡ್ಡೆ ಸಿಂಗ್​ ಮಾತನಾಡಿ, ಎಮ್ಮೆಯು ಯಾವುದೇ ಪಶು ವೈದ್ಯರ ಸಹಾಯವಿಲ್ಲದೇ ಎರಡು ತಲೆಗಳಿರುವ ಕರುವಿಗೆ ಜನ್ಮ ನೀಡಿದೆ. ಸದ್ಯ ಎಮ್ಮೆಯ ಜೊತೆ ಕರುಗಳು ಆರೋಗ್ಯವಾಗಿದ್ದು, ಸಾಮಾನ್ಯ ಕರುಗಳ ರೀತಿಯಲ್ಲಿ ನೋಡಿಕೊಳ್ಳಲಾಗುತ್ತಿದೆ ಎಂದರು.

ಉತ್ತರ ಪ್ರದೇಶದ ಮುಖ್ಯ ಪಶುವೈದ್ಯಾಧಿಕಾರಿ ಡಾ. ಸತ್ಯ ಪ್ರಕಾಶ್ ಪಾಂಡೆ ತಿಳಿಸಿದಂತೆ, ಇದು ದೇವರ ಪವಾಡವಲ್ಲ. ಪ್ರಾಣಿಯ ಗರ್ಭದಲ್ಲಿ ಭ್ರೂಣದ ಬೆಳವಣಿಗೆಯ ಸಮಯದಲ್ಲಿ ಜೀವಕೋಶಗಳು ಅನೇಕ ಭಾಗಗಳಾಗಿ ವಿಂಗಡನೆಯಾಗುತ್ತವೆ . ಈ ಪ್ರಕ್ರಿಯೆಯಲ್ಲಿ ಕೆಲವೊಮ್ಮೆ ಜೀವಕೋಶಗಳು ವಿಭಜಿಸಿ ಹೆಚ್ಚುವರಿ ಬೆಳವಣಿಗೆಯಾಗಲು ಕಾರಣವಾಗುತ್ತವೆ ಎಂದಿದ್ದಾರೆ.

ಇದನ್ನೂ ಓದಿ: 2 ವರ್ಷ ಪ್ರೇಮಿಸಿದ ನಂತರ ಪ್ರಾಯಶ್ಚಿತ್ತ.. ನನಗೆ ಮೊದಲೇ ಮದುವೆಯಾಗಿದೆ ಎಂದವಳನ್ನ ಕೊಂದ ಪ್ರಿಯಕರ

Source: newsfirstlive.com Source link