‘ಕಾಶ್ಮೀರದ ಮುಸ್ಲಿಮರ ಪರ ದನಿ ಎತ್ತಲಿದ್ದೇವೆ’ ಎಂದು ಭಾರತವನ್ನೇ ಕೆಣಕಿದ ತಾಲಿಬಾನ್​​…

‘ಕಾಶ್ಮೀರದ ಮುಸ್ಲಿಮರ ಪರ ದನಿ ಎತ್ತಲಿದ್ದೇವೆ’ ಎಂದು ಭಾರತವನ್ನೇ ಕೆಣಕಿದ ತಾಲಿಬಾನ್​​…

ದೆಹಲಿ: ‘ಜಮ್ಮು-ಕಾಶ್ಮೀರದ ವಿಚಾರ ಪಾಕಿಸ್ತಾನ ಮತ್ತು ಭಾರತಕ್ಕೆ ಸಂಬಂಧಿಸಿದ್ದು, ನಾವು ಯಾವುದೇ ಕಾರಣಕ್ಕೂ ಮಧ್ಯಪ್ರವೇಶಿಸುವುದಿಲ್ಲ’ ಎಂದು ತಾಲಿಬಾನ್​​ ಈ ಹಿಂದೆ ಹೇಳಿತ್ತು. ಈಗ ತನ್ನ ನಿಲುವು ಬದಲಿಸಿರುವ ತಾಲಿಬಾನ್​​​​​ ಕಾಶ್ಮೀರವೂ ಸೇರಿದಂತೆ ವಿಶ್ವದ ಎಲ್ಲಾ ಮುಸ್ಲಿಮರ ಪರ ಧ್ವನಿ ಎತ್ತಲು ನಮಗೆ ಹಕ್ಕಿದೆ ಎಂದು ಉದ್ದೇಶಪೂರ್ವಕ ಹೇಳಿಕೆ ನೀಡುವ ಮೂಲಕ ಭಾರತವನ್ನು ಕೆಣಕಿದೆ. ಇದರಿಂದ ತಾಲಿಬಾನಿಗಳು ಅಫ್ಘಾನಿಸ್ತಾನ ನೆಲವನ್ನು ಭಾರತ ವಿರೋಧಿ ಚಟುವಟಿಕೆ ಬಳಸುವ ಎಲ್ಲಾ ಅನುಮಾನಗಳು ದಟ್ಟವಾಗಿವೆ.

ಬಿಬಿಸಿ ಜತೆ ಈ ಸಂಬಂಧ ಮಾತಾಡಿರುವ ತಾಲಿಬಾನ್ ವಕ್ತಾರ ಸುಹೈಲ್ ಶಹೀನ್, ವಿಶ್ವದ ಎಲ್ಲಾ ಮುಸ್ಲಿಮರ ಪರ ಧ್ವನಿ ಎತ್ತಲು ನಮಗೆ ಹಕ್ಕಿದೆ ಎಂದಿದ್ದಾರೆ. ಕಾಶ್ಮೀರವೂ ಸೇರಿ ಯಾವುದೇ ಪ್ರದೇಶದ ಮುಸ್ಲಿಮರಿಗಾಗಿ ನಾವು ಧ್ವನಿ ಎತ್ತಬಹುದು ಎಂದು ತಿಳಿಸಿದ್ದಾರೆ.

ಮುಸ್ಲಿಮರು ಕೂಡ ನಿಮ್ಮವರೇ, ಎಲ್ಲರೂ ನಾಗರಿಕರೇ. ನಿಮ್ಮ ದೇಶಗಳಲ್ಲಿ ಕಾನೂನಿನ ಅಡಿಯಲ್ಲಿ ಬದುಕಲು ಸಮಾನ ಹಕ್ಕು ನೀಡಬೇಕು. ನಾವು ಯಾವುದೇ ದೇಶದ ವಿರುದ್ಧ ಶ್ತಸ್ತ್ರಾಸ್ತ ಪ್ರಯೋಗಿಸಬೇಕು ಎಂಬ ಉದ್ದೇಶ ಹೊಂದಿಲ್ಲ. ನಮ್ಮ ಕಾಳಜಿಯನ್ನು ಅರ್ಥ ಮಾಡಿಸುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ತಾಲಿಬಾನ್​ ಉಗ್ರ ಸಂಘಟನೆ ಅಂದಮೇಲೆ ಮಾತುಕತೆ ನಡೆಸಿದ್ಯಾಕೆ?; ಮೋದಿ ಸರ್ಕಾರಕ್ಕೆ ಓಮರ್​ ಅಬ್ದುಲ್ಲಾ ಪ್ರಶ್ನೆ

ಆಗಸ್ಟ್​ 31ನೇ ತಾರೀಕಿನಂದು ಮಂಗಳವಾರ ತಾಲಿಬಾನ್ ನಾಯಕ ಶೇರ್ ಮೊಹಮ್ಮದ್ ಸ್ಟಾನಿಕ್‌ಜೈ, ಕತಾರ್‌ನಲ್ಲಿರುವ ಭಾರತದ ರಾಯಭಾರಿ ಡಾ. ದೀಪಕ್ ಮಿತ್ತಲ್ ಅವರನ್ನು ಭೇಟಿಯಾಗಿದ್ದಾರೆ. ಭಾರತದ ರಾಯಭಾರಿ ಡಾ. ದೀಪಕ್​​ ಮಿತ್ತಲ್​​ರನ್ನು ಮೊದಲ ಬಾರಿಗೆ ಭೇಟಿಯಾಗಿರುವ ಸ್ವಾನಿಕ್​​ಜೈ, ಅಫ್ಘಾನಿಸ್ತಾನದಲ್ಲಿರುವ ಭಾರತೀಯರ ಭದ್ರತೆ ಕುರಿತು ತಾಲಿಬಾನಿಗಳ ಪ್ರತಿನಿಧಿಯಾಗಿ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

Source: newsfirstlive.com Source link