‘ಲಂಕೆ’ ಟ್ರೇಲರ್ ಕಂಡು ಪ್ರೇಕ್ಷಕರು ಥ್ರಿಲ್ – ಸಿನಿಮಾ ನೋಡೋದೊಂದೇ ಬಾಕಿ ಎಂದ ಯೋಗಿ ಫ್ಯಾನ್ಸ್

ಲೂಸ್ ಮಾದ ಯೋಗಿ ಅಭಿನಯದ ಬಹು ನಿರೀಕ್ಷಿತ ‘ಲಂಕೆ’ ಚಿತ್ರ ಗಣೇಶ ಹಬ್ಬದಂದು ಚಿತ್ರಮಂದಿರಕ್ಕೆ ಲಗ್ಗೆ ಇಡೋದು ಕನ್ಫರ್ಮ್ ಆಗಿದೆ. ಟೀಸರ್ ಹಾಗೂ ಹಾಡುಗಳು ಈಗಾಗಲೇ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಇದೀಗ ಚಿತ್ರತಂಡ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಸಿನಿಮಾ ಮೇಲಿನ ಕುತೂಹಲ ಹಾಗೂ ನಿರೀಕ್ಷೆ ಎರಡನ್ನೂ ದುಪ್ಪಟ್ಟು ಮಾಡಿದೆ.

‘ಲಂಕೆ’ ಚಿತ್ರದ ಮಾಸ್ ಟ್ರೇಲರ್ ಬಿಡುಗಡೆಯಾಗಿದೆ. ಕಿಕ್ಕೇರಿಸೋ ಟ್ರೇಲರ್ ಕಂಡು ಲೂಸ್ ಮಾದ ಅಭಿಮಾನಿ ಬಳಗ ಫಿದಾ ಆಗಿದ್ದಾರೆ. ಯೋಗಿ ಸ್ಟೈಲು, ಮ್ಯಾನರಿಸಂ, ಆಕ್ಷನ್ ಸೀನ್ ನೆಕ್ಸ್ಟ್ ಲೆವೆಲ್ ನಲ್ಲಿದ್ದು, ಬಾಕ್ಸ್ ಆಫೀಸ್ ನಲ್ಲಿ ಲಂಕೆ ಕಮಾಲ್ ಮಾಡೋದು ಪಕ್ಕಾ ಎನ್ನುವ ಮಾತುಗಳು ಕೇಳಿ ಬರೋಕೆ ಶುರುವಾಗಿದೆ. ಸ್ಟಾರ್ ಕಲಾವಿದರ ದಂಡು, ಪವರ್ ಫುಲ್ ಆಕ್ಷನ್ ಸೀನ್ ಗಳ ಅಬ್ಬರ ಕಂಡು ಸಿನಿರಸಿಕರು ಬೆರಗಾಗಿದ್ದಾರೆ. ಮಾಸ್ ಸಿನಿಮಾ ಪ್ರಿಯರಿಗೆ ರಸದೌತಣ ನೀಡೋದ್ರಲ್ಲಿ ಡೌಟೇ ಇಲ್ಲ ಎನ್ನುವಂತಿದೆ ಟ್ರೇಲರ್. ಇದನ್ನೂ ಓದಿ: ಸುಂದರ್ ರಾಜ್, ಸರ್ಜಾ ಫ್ಯಾಮಿಲಿ ಸದಾ ಒಂದಾಗಿರುತ್ತದೆ: ಧ್ರುವ ಸರ್ಜಾ

ಮಾಸ್ ಆಕ್ಷನ್ ಡ್ರಾಮಾ ಸಬ್ಜೆಕ್ಟ್ ಒಳಗೊಂಡ ಚಿತ್ರಕ್ಕೆ ನಿರ್ದೇಶಕ ರಾಮ್ ಪ್ರಸಾದ್ ಸೂತ್ರಧಾರ. ಲಂಕೆ ಔಟ್ ಅಂಡ್ ಔಟ್ ಕಮರ್ಶಿಯಲ್ ಪ್ಯಾಕೇಜ್ ಸಿನಿಮಾ, ಹಾಗಂತ ಇಲ್ಲಿ ಬರೀ ಆಕ್ಷನ್ ಸೀನ್, ಪವರ್ ಫುಲ್ ಡೈಲಾಗ್ ಮಾತ್ರವಿರದೆ ಫ್ಯಾಮಿಲಿ ಎಲಿಮೆಂಟ್. ಲವ್, ಸೆಂಟಿಮೆಂಟ್ ಎಲ್ಲವೂ ಇದೆ. ದಿ ಗ್ರೇಟ್ ಎಂಟಟೈನರ್ಸ್ ಬ್ಯಾನರ್ ನಲ್ಲಿ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡಲಾಗಿದ್ದು, ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡುತ್ತೆ ಎನ್ನೋದು ಚಿತ್ರತಂಡದ ಅನಿಸಿಕೆ. ‘ಲಂಕೆ’ ಅಡ್ಡದಲ್ಲಿ ಕೃಷಿ ತಾಪಂಡ, ಕಾವ್ಯಾ ಶೆಟ್ಟಿ, ಎಸ್ಟರ್ ನರೋನ್ಹಾ ನಾಯಕಿಯರಾಗಿ ಮಿಂಚಿದ್ದಾರೆ. ಇದನ್ನೂ ಓದಿ:ಸ್ವರ್ಗದ ಬಾಗಿಲನ್ನು ತೆಗೆದುಕೊಟ್ಟ ಯುವರಾಜನೇ ರಾಯನ್: ಮೇಘನಾ ರಾಜ್

blank

ಕಾವ್ಯಾ ಶೆಟ್ಟಿ ಇದೇ ಮೊದಲ ಬಾರಿಗೆ ನೆಗೆಟಿವ್ ರೋಲ್ ನಲ್ಲಿ ಬಣ್ಣಹಚ್ಚಿರೋದು ಚಿತ್ರದ ವಿಶೇಷ ಸಂಗತಿ. ಉಳಿದಂತೆ ಸಂಚಾರಿ ವಿಜಯ್, ಸುಚೇಂದ್ರ ಪ್ರಸಾದ್, ಶೋಬ್ ರಾಜ್, ಶರತ್ ಲೋಹಿತಾಶ್ವ, ಗಾಯಿತ್ರಿ ಜೈರಾಮ್, ಡ್ಯಾನಿ ಕುಟ್ಟಪ್ಪ ಚಿತ್ರದ ತಾರಾಂಗಣದಲ್ಲಿದ್ದಾರೆ. ಕಾರ್ತಿಕ್ ಶರ್ಮಾ ಸಂಗೀತ ನಿರ್ದೇಶನ, ರಮೇಶ್ ಬಾಬು ಛಾಯಾಗ್ರಾಹಣ ಚಿತ್ರಕ್ಕಿದೆ. ರವಿವರ್ಮ, ಪಳನಿರಾಜ್, ಅಶೋಕ್ ಚಿತ್ರಕ್ಕೆ ಒಂದಕ್ಕಿಂತ ಒಂದು ಅಧ್ಬುತ ಸಾಹಸ ದೃಶ್ಯಗಳನ್ನು ನಿರ್ದೇಶನ ಮಾಡಿದ್ದಾರೆ. ಪಟೇಲ್ ಶ್ರೀನಿವಾಸ್, ಸುರೇಖಾ ರಾಮ್ ಪ್ರಸಾದ್ ಚಿತ್ರಕ್ಕೆ ಬಂಡವಾಳ ಹಾಕಿದ್ದು, ಸೆಪ್ಟೆಂಬರ್ 10ಕ್ಕೆ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಇದನ್ನೂ ಓದಿ: ಚಿರು, ಮೇಘನಾ ಪುತ್ರ ಈಗ ‘ರಾಯನ್ ರಾಜ್ ಸರ್ಜಾ’

Source: publictv.in Source link