ರೋಹಿಣಿ ಸಿಂಧೂರಿ ವಿರುದ್ಧ CMಗೆ ದೂರು ನೀಡಿದ ಸಾರಾ ಮಹೇಶ್

ರೋಹಿಣಿ ಸಿಂಧೂರಿ ವಿರುದ್ಧ CMಗೆ ದೂರು ನೀಡಿದ ಸಾರಾ ಮಹೇಶ್

ಬೆಂಗಳೂರು: IAS ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಶಾಸಕ ಸಾ.ರಾ.ಮಹೇಶ್ ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ಸರ್ಕಾರದ ಮುಖ್ಯಕಾರ್ಯದರ್ಶಿ ಪಿ.ರವಿಕುಮಾರ್​ಗೆ ದೂರು ನೀಡಿದ್ದಾರೆ.

ರೋಹಿಣಿ ಸಿಂಧೂರಿ ಮೇಲೆ 14 ಲಕ್ಷ ಬ್ಯಾಗ್​​ ಖರೀದಿಯಲ್ಲಿ 6 ಕೋಟಿ ಭ್ರಷ್ಟಾಚಾರ ಆರೋಪ ಮಾಡಿರುವ ಸಾರಾ ಮಾಹೇಶ್ ಅವರು ಸಿಎಂಗೆ ದೂರು ನೀಡಲು ಪರಿಸರ ಸ್ನೇಹಿ ಬ್ಯಾಗ್ ಹಿಡಿದು ವಿಧಾನಸೌಧಕ್ಕೆ ಬಂದಿದ್ದರು.

ಪುರಸಭೆ, ನಗರಸಭೆ, ಮಹಾನಗರ ಪಾಲಿಕೆ ಅನುಮತಿ ಪಡೆಯದೆ ಬಟ್ಟೆ ಬ್ಯಾಗ್ ಖರೀದಿ ಮಾಡಿದ್ದಾರೆ. ಒಟ್ಟು 7.65 ಕೋಟಿ ರೂಪಾಯಿ ಹಣ ಬಳಕೆ ಮಾಡಿಕೊಳ್ಳಲಾಗಿದೆ. ಮೈಸೂರು ಉಪವಿಭಾಗಾಧಿಕಾರಿ ಒಬ್ಬ ಬ್ಯಾಗ್ ಸರಬರಾಜು ಗುತ್ತಿಗೆದಾರ ಆಗಿದ್ದ. ಇವರಿಂದಲೇ ಕಿಕ್‌ ಬ್ಯಾಕ್ ಪಡೆದು ಅವ್ಯವಹಾರ ಮಾಡಲಾಗಿದೆ. ಐದು ಕೆ.ಜಿ ಬ್ಯಾಗ್‌ ಒಂದಕ್ಕೆ ಸುಮಾರು 52 ರೂಪಾಯಿ ಬಿಲ್ ಮಾಡಿದ್ದಾರೆ.

ನಾವು ಖರೀದಿ ಮಾಡಿದಾಗ ಕೇವಲ 13 ರೂಪಾಯಿ ಸಿಗುತ್ತದೆ. ಆದರೆ, ಪ್ರತೀ ಬ್ಯಾಗ್​​ 52 ರೂಪಾಯಿಗೆ ಖರೀದಿ ಮಾಡಿದ್ದಾರೆ. 14,71,458 ಬ್ಯಾಗ್‌ಗಳ ಖರೀದಿ ಮಾಡಿದ್ದಾರೆ. ವಾಸ್ತವ ಬೆಲೆ‌ 1.47,14,586 ರೂಪಾಯಿ. ಆದರೆ, ಇವರು 7.65 ಕೋಟಿಯಷ್ಟು ಬಿಲ್ ಮಾಡಲು ಹೊರಟಿದ್ದಾರೆ ಸಿಎಂಗೆ ದೂರು ನೀಡಿದ್ದಾರೆ. ಮಾತ್ರವಲ್ಲ ಕೂಡಲೇ ಸಿಂಧೂರಿ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: 14 ಲಕ್ಷ ಬ್ಯಾಗ್​​ ಖರೀದಿಯಲ್ಲಿ 6 ಕೋಟಿ ಭ್ರಷ್ಟಾಚಾರ’- ರೋಹಿಣಿ ಸಿಂಧೂರಿ ವಿರುದ್ಧ ಸಾ.ರಾ ಮಹೇಶ್​ ಗಂಭೀರ ಆರೋಪ

Source: newsfirstlive.com Source link