ಅಚ್ಚರಿ ಬೆಳವಣಿಗೆ -ಸಿದ್ದರಾಮಯ್ಯರ ಭೇಟಿಯಾದ ಶಿಕ್ಷಣ ಸಚಿವ ಬಿಸಿ ನಾಗೇಶ್

ಅಚ್ಚರಿ ಬೆಳವಣಿಗೆ -ಸಿದ್ದರಾಮಯ್ಯರ ಭೇಟಿಯಾದ ಶಿಕ್ಷಣ ಸಚಿವ ಬಿಸಿ ನಾಗೇಶ್

ಬೆಂಗಳೂರು: ಮಹತ್ವದ ಬೆಳವಣಿಗೆ ಒಂದರಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರನ್ನ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಭೇಟಿ ಮಾಡಿದ್ದಾರೆ. ಶಿಕ್ಷಣ ಸಚಿವರ ಈ ಭೇಟಿ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಭೇಟಿ ಮಾಡಿದ ಬಿಸಿ ನಾಗೇಶ್, ಸಿದ್ದರಾಮಯ್ಯರ ಆರೋಗ್ಯ ವಿಚಾರಿಸಿದ್ದಾರೆ. ಬಳಿಕ ಕೆಲವು ಹೊತ್ತುಗಳ ಕಾಲ ಇತ್ತೀಚೆಗಿನ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಬಿ.ಸಿ.ನಾಗೇಶ್​, ಇದೊಂದು ಸೌಜನ್ಯದ ಭೇಟಿ ಅಂತಾ ತಿಳಿಸಿದ್ದಾರೆ.

Source: newsfirstlive.com Source link