ವಿರಾಟ್​​​ ಹೊಸ ದಾಖಲೆ; ಅಬ್ಬಾ! ಈ ವಿಚಾರದಲ್ಲಿ ಮಾತ್ರ ಕೊಹ್ಲಿ ಇಡೀ ಏಷ್ಯಾದಲ್ಲೇ ನಂಬರ್​​​ 1

ವಿರಾಟ್​​​ ಹೊಸ ದಾಖಲೆ; ಅಬ್ಬಾ! ಈ ವಿಚಾರದಲ್ಲಿ ಮಾತ್ರ ಕೊಹ್ಲಿ ಇಡೀ ಏಷ್ಯಾದಲ್ಲೇ ನಂಬರ್​​​ 1

ಟೀಮ್​​ ಇಂಡಿಯಾದ ನಾಯಕ ವಿರಾಟ್​​ ಕೊಹ್ಲಿ. ಇವರಿಗೆ ಒಂದು ರೆಕಾರ್ಡ್​ ಬ್ರೇಕ್​​ ಮಾಡಿ ಇನ್ನೊಂದು ರೆಕಾರ್ಡ್​​ ಸೃಷ್ಟಿಸೋದು ಹೊಸತೇನಲ್ಲ. ವಿಶ್ವದ ಶ್ರೀಮಂತ ಕ್ರಿಕೆಟಿಗರ ಪೈಕಿ ವಿರಾಟ್​​ ಕೂಡ ಒಬ್ಬರು. ಸದಾ ಸೋಷಿಯಲ್​​ ಮೀಡಿಯಾದಲ್ಲಿ ಸಖತ್​​ ಆ್ಯಕ್ಟೀವ್​​ ಆಗಿರುವ ವಿರಾಟ್​​​ ಕೊಹ್ಲಿ ಈಗ ತನ್ನ ಇನ್​ಸ್ಟಾಗ್ರಾಂನಲ್ಲಿ 150 ಮಿಲಿಯನ್​​ ಫಾಲೋವರ್ಸ್​ ಹೊಂದಿದ್ದಾರೆ. ಈ ಮೂಲಕ ಏಷ್ಯಾದಲ್ಲೇ ಅತೀ ಹೆಚ್ಚು ಫಾಲೋವರ್ಸ್​ ಹೊಂದಿರೋ ಸೆಲೆಬ್ರಿಟಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

ಇನ್ನು, ವಿಶ್ವದಲ್ಲಿ ಕ್ರೀಡಾ ವಿಭಾಗದಲ್ಲಿ ಹೆಚ್ಚು ಫಾಲೋವರ್ಸ್​ ಹೊಂದಿರುವವರ ಪೈಕಿ ಕೊಹ್ಲಿ ನಾಲ್ಕನೇ ಅವರು ಎಂದು ತಿಳಿದು ಬಂದಿದೆ. ತಮ್ಮ ಇನ್​ಸ್ಟಾಗ್ರಾಂನಲ್ಲಿ ಒಂದು ಪೋಸ್ಟ್​ ಹಾಕಲು ಸುಮಾರು 5 ಕೋಟಿ ರೂಪಾಯಿ ಪಡೆಯುತ್ತಾರಂತೆ.

ಮೊದಲೇ ಸ್ಥಾನದಲ್ಲಿರುವ ಫುಟ್ಬಾಲ್​​​ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋಗೆ 337 ಮಿಲಿಯನ್, 2ನೇ ಸ್ಥಾನದಲ್ಲಿರುವ ಮೆಸ್ಸಿಗೆ 260 ಮಿಲಿಯನ್, 3ನೇ ಸ್ಥಾನದಲ್ಲಿರುವ ನೇಮರ್​​ಗೆ 160 ಮಿಲಿಯನ್ ಫಾಲೋವರ್ಸ್​ ಇದ್ದಾರೆ. ಇವರ ನಂತರದ ನಾಲ್ಕನೇ ಸ್ಥಾನದಲ್ಲಿರುವ ವಿರಾಟ್​ ಕೊಹ್ಲಿಗೆ 150 ಮಿಲಿಯನ್​​ ಫಾಲೋವರ್ಸ್​ ಇದ್ದು, ಸದ್ಯದಲ್ಲೇ ಎಲ್ಲರನ್ನು ಹಿಂದಿಕ್ಕಲಿದ್ದಾರೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.

ಇದನ್ನೂ ಓದಿ: ಅಂದು ‘ಟೀಂ​​​ ಇಂಡಿಯಾ ಪರ ಆಡ್ತೀನಿ’ ಎಂದು ಮೈದಾನಕ್ಕೆ ನುಗಿದ್ದ ಜಾರ್ವೋ; ಇಂದು ಮತ್ತೊಂದು ಕುಚೇಷ್ಟೆ..!

Source: newsfirstlive.com Source link