ಜೂ. ಚಿರು ಇನ್ಮೇಲೆ ರಾಯನ್ ರಾಜ್​ ಸರ್ಜಾ.. ಹೇಗಿತ್ತು ಗೊತ್ತಾ ನಾಮಕರಣದ ಸಂಭ್ರಮ..?

ಜೂ. ಚಿರು ಇನ್ಮೇಲೆ ರಾಯನ್ ರಾಜ್​ ಸರ್ಜಾ.. ಹೇಗಿತ್ತು ಗೊತ್ತಾ ನಾಮಕರಣದ ಸಂಭ್ರಮ..?

ನೋವು ನಲಿವು.. ಇವೆರಡು ಬದುಕೆಂಬ ನಾಣ್ಯದ ಎರಡು ಮುಖಗಳು. ಸಂತೋಷ, ಸಡಗರ, ಆನಂದ, ಅಭಿಮಾನ ಆ ಸಿಹಿ ನೆನಪು, ಆ ನೆನಪಿಲ್ಲೊಂದು ನೋವು: ಈ ಎಲ್ಲವೂ ಒಂದೇ ಕ್ಷಣ, ಒಂದೇ ದಿನ, ಸರ್ಜಾ ಫ್ಯಾಮಿಲಿಯ ತನು-ಮನದಲ್ಲಿ ಮೇಳೈಸಿತ್ತು. ಈ ಎಲ್ಲಾ ರೀತಿಯ ಸಡಗರಕ್ಕೆ ಕಾರಣ ಜೂನಿಯರ್ ಚಿರಂಜೀವ. ಅಲ್ಲಲ್ಲಾ ಇವತ್ತಿನಿಂದ ರಾಯನ್ ರಾಜ್ ಸರ್ಜಾ.. ಮೇಘನಾ ರಾಜ್ ಸರ್ಜಾ ಪುತ್ರನ ಲವ್ಲಿ ನಾಮಕರಣದ ಸಂಪೂರ್ಣ ನೋಟ ಈ ಸ್ಟೋರಿಯಲ್ಲಿದೆ.

ಎಷ್ಟೋ ಸಿನಿಮಾ ಮಂದಿಯ ಬದುಕು ಸಿನಿಮಾದ ರೀತಿಯ ಇರುತ್ತೆ. ಲವ್, ಎಮೋಷನ್ , ಪ್ರಮೋಷನ್, ಟ್ವಿಸ್ಟು, ಟ್ವಿಸ್ಟ್​ಗೆ ತಕ್ಕಂಗೆ ಇಂಟರ್​​ವೆಲ್, ಹೋರಾಟ-ಹಾರಾಟ ಕೊನೆಗೆ ಬದುಕಿಗೊಂದು ಸ್ಫೂರ್ತಿ ತುಂಬುವ ಹ್ಯಾಪಿ ಎಂಡಿಂಗು. ಇವೆಲ್ಲವೂ ಇರುತ್ತವೆ. ಬಹುಭಾಷ ನಟಿ ಮೇಘನಾ ರಾಜ್ ಸರ್ಜಾ ಬಾಳು ಸಿನಿಮಾದ ರೀತಿನೇ ಇದೆ. ಮೇಘನಾ ಬಾಳಲ್ಲಿ ಈಗ ಸ್ಯಾಡ್ ಇಂಟರ್​ವೆಲ್ ಮುಗಿದು ಹ್ಯಾಪಿ ಬಿಗಿನಿಂಗ್ ಶುರುವಾಗಿದೆ. ಬದುಕಿಗೊಂದು ಭರವಸೆ ಸಿಕ್ಕಿದೆ, ಬದುಕೋ ಹಂಬಲ ಹೆಚ್ಚಾಗಿದೆ. ಮೇಘನಾ ಬಾಳಿಗೆ ಮೇಘಾ ಮಾಲೆ ಅವರ ಪುತ್ರ ಜೂನಿಯರ್ ಚಿರಂಜೀವ. ಇವತ್ತಿನಿಂದ ಮೇಘನಾ ಮಗ ರಾಯನ್ ರಾಜ್ ಸರ್ಜಾ.

blank

ಮೇಘನಾ ರಾಜ್ ಅವರ ಬೆಳ್ಳಿ ಬೆಳವಣಿಗೆಯನ್ನ ಮೇಘನಾ ರಾಜ್ ಸರ್ಜಾ ಪ್ರೀತಿ ಮದುವೆಯಾದ ರೀತಿ ಎಲ್ಲವನ್ನು ನೋಡಿದೆ ಕರುನಾಡು. ಮೇಘನಾ ನಕ್ಕಾಗ ಸಂತೋಷ ಪಟ್ಟು ಮೇಘನಾ ಅತ್ತಾಗ ದುಃಖವು ಪಟ್ಟಿದೆ ಕರುನಾಡು.. ಕಾರಣ ಮೇಘನಾ ಕರುನಾಡ ಕನ್ನಡಿಗರ ಮನೆಮಗಳ ಸ್ಥಾನವನ್ನ ಪಡೆದು ಕೊಂಡಿದ್ದಾರೆ. ಮೇಘನಾ ಬಾಳಲ್ಲಿ ಮತ್ತೊಮ್ಮೆ ಚಿರು ಅವತಾರವೇ ಬರ್ಲಿ ಎಂದು ಅಭಿಮಾನಿಗಳು ಆಶಿಸಿದ್ದಾರೆ. ಅದರಂತೆ ಮೇಘನಾ ಕುಟುಂಬ ಹಾಗೂ ಕರುನಾಡು ಇಚ್ಚೆ ಪಟ್ಟಂಗೆ ಈಗ ಮೇಘನಾ ಮಡಿಲಿನಲ್ಲಿ ಜೂನಿಯರ್ ಚಿರು ಬಂದು ಹನ್ನೊಂದು ತಿಂಗಳಾಗಿದೆ.

ಯಾವಾಗ ಜೂನಿಯರ್ ಚಿರು ನಾಮಕರಣ? ಯಾವ ಹೆಸರಿಡ್ತಿರಾ? ನಿಮ್ಮ ಹೆಸರಿನ ಮೊದಲಕ್ಷರದ ಹೆಸರಿಡ್ತಿರಾ ? ಅಥವಾ ನಿಮ್ಮಗಂಡನ ಹೆಸರಿನ ಮೊದಲಕ್ಷರದ ಹೆಸರಿಡ್ತಿರಾ? ಹಿಂಗೆ ನಾನಾ ಅಭಿಮಾನಿ ಹೃದಯಗಳು ಮೇಘನಾ ರಾಜ್​​ಗೆ ಕೇಳಿದ್ದೇ ಕೇಳಿದ್ದು. ಕೆಲ ಅಭಿಮಾನಿ ಕರುಣಾಮಯಿಗಳು ಇದೇ ಹೆಸರನ್ನೇ ಇಡಿ ಎಂದು ಸ್ವೀಟ್​​​​​ ಸಲಹೆಯನ್ನು ಕೊಟ್ಟುಬಿಟ್ಟಿದ್ದರು. ಕೆಲವರು ಗಿಫ್ಟ್​​ಗಳನ್ನ ಕೊಟ್ಟರೇ ಹಾವೇರಿ ಜಿಲ್ಲೆಯ ವನಿತೆಯರು ತೊಟ್ಟಿಲನ್ನ ಉಡುಗೊರೆಯಾಗಿ ಕೊಟ್ಟಿದ್ದರು. ಅಂತು ಇಂತು ಕರುನಾಡಿನ ಕರುಣೆಯ ಕೂಸು, ಹುಟ್ಟೋ ಮುಂಚೆಯ ಅಭಿಮಾನಿಗಳನ್ನ ಸಂಪಾದಿಸಿರೋರು ಜೂನಿಯರ್ ಚಿರು ಬಾಸು ಅವರ ನಾಮಕರಣವಾಗಿದೆ.

ಅದ್ಧೂರಿಯಾಗಿತ್ತು ರಾಯನ್ ರಾಜ್ ಸರ್ಜಾ ನಾಮಕರಣ
ಎಲ್ಲರ ಮೊಗದಲ್ಲೂ ನಗು ತಂದ ರಾಯನ್ ರಾಜ್ ಸರ್ಜಾ
ಮೇಘನಾರ ಜೀವದ ಜೀವ ಜನನವಾಗಿ 11 ತಿಂಗಳಾದ ನಂತರ ರಾಯನ್ ರಾಜ್ ಸರ್ಜಾ ಎಂದು ನಾಮಕರಣವಾಗಿದೆ. ಸಂಸ್ಕೃತದಲ್ಲಿ ರಾಯನ್ ಅಂದ್ರೆ ಯುವರಾಜ ಅಂತ ಅರ್ಥ. ಚಿರಂಜೀವಿ ಸರ್ಜಾ ರಾಜನಿದಂತೆ ಅವರ ಮಗು ಯುವರಾಜನಿದಂತೆ, ಹೀಗಾಗಿ ರಾಯನ್ ಎಂದು ಹೆಸರಿಟ್ಟಿದ್ದೇವೆ ಇನ್ಮುಂದೆ ನನ್ನ ಮಗನನ್ನ ಕನ್ನಡಿಗರು ರಾಯನ್ ರಾಜ್ ಸರ್ಜಾ ಎಂದು ಪ್ರೀತಿಯಿಂದ ಕರಿಯರಿ ಎಂದು ಮೇಘನಾ ರಾಜ್ ಸರ್ಜಾ ಕನ್ನಡಿಗರಿಗೆ ವಿನಂತಿ ಮಾಡಿಕೊಂಡರು..

ಅಂದುಕೊಂಡಂಗೆ ಸರ್ಜಾ ಕುಟುಂಬ ತನ್ನ ವಂಶದ ನೂತನ ಕುಡಿಯ ನಾಮಕರಣವನ್ನ ಹಬ್ಬದಂತೆ ಸಂಭ್ರಮದ ಉತ್ಸವದಂತೆ ಮಾಡಿದೆ.. ಮೊದಲು ಮೇಘನಾ ರಾಜ್ ಸರ್ಜಾ ತವರು ಕುಟುಂಬದವರು ಸೆಂಟ್ ಅಂಟೋನಿ ಚರ್ಚ್​​​​​​ ಗೆ ಹೋಗಿ ನೇಮಿಂಗ್ ಸೆರಮನಿ ಮಾಡಿದ್ರು.. ತನ್ನ ಮಗನಿಗೆ ಯುವರಾಜನ ರೀತಿ ಡ್ರೆಸ್ ಹಾಕಿಸಿ ಸಖತ್ ಸಂತೋಷದಲ್ಲಿತ್ತು ಮೇಘನಾ ಕುಟುಂಬ.. ಜೂನಿಯರ್ ಚಿರು ಹೊಸ ಜಗತ್ತನ್ನ ಬೆಟ್ಟು ಕಂಗಳದಿಂದ ನೋಡುತ್ತಿದ್ದ.. ತನ್ನ ಅಜ್ಜಿ ಪ್ರಮಿಳಾ ಜೋಶಾಯಿ ಜೊತೆ ತನ್ನ ಅಜ್ಜ ಸುಂದರ್ ರಾಜ್ ಜೊತೆ ಹೊಸ ಜಗತ್ತನ್ನ ಅಚ್ಚರಿಯಿಂದ ನೋಡಿದ ರಾಯನ್ ರಾಜ್ ಸರ್ಜಾ..

ಚರ್ಚ್​​ನಲ್ಲಿ ನೇಮಿಂಗ್ ಜೂ.ಚಿರು ಸೆರಮನಿ
ಸರ್ಜಾ ಕುಟುಂಬದಲ್ಲಿ ಅದ್ಧೂರಿ ನಾಮಕರಣ

ಮೇಘನಾ ಮದುವೆ ಚಿರು ಜೊತೆ ಹಿಂದೂ ಮತ್ತು ಕ್ರೈಸ್ತ ಸಂಪ್ರದಾಯದಂತೆ ಅದ್ದೂರಿಯಾಗಿ ಆಗಿತ್ತು. ಹಂಗೆ ತನ್ನ ಮಗನ ನಾಮಕರಣವನ್ನ ಎರಡೆರಡು ಸಂಪ್ರಾದಾಯದಂತೆ ಮೇಘನಾ ಮಾಡಿಸಿದ್ರು. ಜೂನಿಯರ್ ಚಿರಂಜೀವನನ್ನ ನೋಡಲು ಇಡೀ ಸರ್ಜಾ ಕುಟುಂಬ ಉತ್ಸುಕತೆಯಿಂದ ಕಂಡು ಬಂತು. ಎಲ್ಲರಲ್ಲೂ ಸಂತೋಷ ಸಡಗರ ಸಂಭ್ರಮ. ಜೂನಿಯರ್ ಚಿರು ಬಲಗಿವಿಯಲ್ಲಿ ರಾಯನ್ ರಾಯನ್ ರಾಯನ್ ಎಂದು ಮೂರು ಸಲ ಸರ್ಜಾ ಕುಟುಂಬ ಹೇಳಿ ನಾಮಕರಣವ ಮಾಡಿದ್ರು.

ಎಲ್ಲರ ಸಂಭ್ರಮ ಸಡಗರ ಸಂತೋಷಕ್ಕೆ ಕಾರಣ ರಾಯನ್ ರಾಜ್ ಸರ್ಜಾನಾಗಿದ್ದ. ಆದ್ರೆ ಅಷ್ಟೊಂದು ಜನ , ಎಲ್ಲರನ್ನ ತನ್ನನೇ ನೋಡುತ್ತಿರೋದನ್ನ ನೋಡಿ ನಿಬ್ಬೆರಗಾದ ಜೂನಿಯರ್ ಚಿರು ಆಗಾಗ ರಗಳೆ ಮಾಡುತ್ತಾ ಕಣ್ಣೀರ ಮುತ್ತನ್ನ ಉದುರಿಸುತ್ತಿದ್ದ. ಈ ಟೈಮ್​ ಅಲ್ಲೇ ತನ್ನ ತಂದೆ ಗಾಡ್ ಫಾದರ್ ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ವಿಡಿಯೋ ಕಾಲ್ ಮಾಡಿ ಮೊಮ್ಮನನ್ನ ಕಂಡು ಸಂತೋಷ್ ಪಟ್ರು.

ಮೇಘನಾ ಮಗನ ನೇಮಿಂಗ್ ಸೆರಮನಿಗೆ ಕೇಳರದಿಂದ ಮೇಘನಾ ಸ್ನೇಹಿತೆ ನಜ್ರಿಯಾ ನಜೀಮ್ ಬಂದಿದ್ರು.. ಮೇಘನಾ ಗರ್ಭಿಣಿಯಾದಾಗಲು ಮೇಘನಾಗಾಗಿ ಕೇರಳದಿಂದ ಬಂದು ಜೊತೆಯಲ್ಲಿದ್ದರು ನಜ್ರಿಯಾ ನಜೀಮ್. ಪ್ರಜ್ವಲ್ ದೇವರಾಜ್ , ಪನ್ನಗಾಭರಣ ಸೇರಿದಂತೆ ಮೇಘನಾ ಮತ್ತು ಸರ್ಜಾ ಕುಟುಂಬ ಆತ್ಮೀಯ ಸ್ನೇಹ ಬಳಗ ರಾಯನ್ ರಾಜ್ ಸರ್ಜಾ ನೇಮಿಂಗ್ ಸೆರಮನಿಗೆ ಸಾಕ್ಷಿಯಾದ್ರು.

ಅದ್ದೂರಿ ನಾಮಕರಣವಾದ ನಂತರ ಸರ್ಜಾ ಕುಟುಂಬ ಮತ್ತು ಮೇಘನಾ ಕುಟುಂಬ ಕನ್ನಡಿಗರಿಗಾಗಿ ಕನ್ನಡಿಗರು ಇಷ್ಟು ದಿನ ತೋರಿಸಿದ ಪ್ರೀತಿ ವಿಶ್ವಾಸ ಅಭಿಮಾನದ ಬಗ್ಗೆ ಮನಬಿಚ್ಚಿ ಮಾತನಾಡಿದ್ರು..

ಒಟ್ಟಿನಲ್ಲಿ ಅಭಿಮಾನಿಗಳಿಂದ ಹಿಡಿದು ಚಿತ್ರರಂಗದವರ ತನಕ ಕಾದಿದ್ದ ಚಿರು ಮಗನ ನಾಮಕರಣ ಇಂದು ಅದ್ದೂರಿಯಾಗಿ ಮನ ಮುಟ್ಟುವ ಹಾಗೇ ಆಗಿದೆ. ಮೇಘನಾ ರಾಜ್ ಸರ್ಜಾ ತನ್ನ ಮಗನಿಗಾಗಿ ತನ್ನ ಕಲಾ ಬದುಕಿಗಾಗಿ ಬಾಳ್ವೆ ಮಾಡೋ ಗುರಿಯನ್ನ ಇಟ್ಕೊಂಡಿದ್ದಾರೆ. ಆಲ್​ ದಿ ಬೆಸ್ಟ್ ಮೇಘನಾ ಆಂಡ್ ಮೇಘನಾ ಪುತ್ರ ರಾಯನ್ ರಾಜ್ ಸರ್ಜಾ.

Source: newsfirstlive.com Source link