ಜಪಾನ್​ ಪ್ರಧಾನಿ ಹುದ್ದೆಗೆ ಯೋಶಿ ಹಿದ್​ ಸುಗಾ ರಾಜೀನಾಮೆ

ಜಪಾನ್​ ಪ್ರಧಾನಿ ಹುದ್ದೆಗೆ ಯೋಶಿ ಹಿದ್​ ಸುಗಾ ರಾಜೀನಾಮೆ

ಜಪಾನ್​ನ ಪ್ರಧಾನ ಮಂತ್ರಿ ಯೋಶಿ ಹಿದ್​ ಸುಗಾ ತಾನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಯುವುದಾಗಿ ಘೋಷಿಸಿದ್ದಾರೆ. ಸುಗಾ ಪಿಎಂ ಸ್ಥಾನಕ್ಕೇರಿ ಒಂದು ವರ್ಷವಾಗಿದ್ದು, ಇವರ ಅವಧಿಯೂ ಮುಕ್ತಾಯವಾಗಿದೆ ಅಂತ ಹೇಳಲಾಗಿದೆ.

ಪಿಎಂ ಸುಗಾ ಕೊರೊನಾ ನಿರ್ವಹಣೆಯಲ್ಲಿ ಎಡವಿದ್ದಾರೆ, ಹಾಗಾಗಿ ತಮ್ಮ ಸ್ಥಾನದಿಂದ ಕೆಳಗಿಳಿಯಲ್ಲಿದ್ದಾರೆ ಎಂಬ ಮಾತು ಕೂಡ ಕೇಳಿ ಬಂದಿದೆ. ಇನ್ನು ಪ್ರಧಾನಿ ಯೋಶಿ ಹಿದ್​ ಸುಗಾ ತಾವಾಗಿಯೇ ಅಧಿಕಾರವನ್ನು ಬಿಟ್ಟುಕೊಡುತ್ತಿದ್ದಾರೆ.

ಹೀಗಾಗಿ ಎಲ್​ಡಿಪಿ ಪಕ್ಷ ಪ್ರಧಾನಿ ಹುದ್ದೆಗೆ ಹೊಸ ಅಭ್ಯರ್ಥಿಯ ಹುಡುಕಾಟದಲ್ಲಿದ್ದು, ಸೆಪ್ಟೆಂಬರ್​ 29ರವೆರೆಗೂ ಪಿಎಂ ಸ್ಥಾನದಲ್ಲಿ ಸುಗಾ ಮುಂದುವರೆಯಲಿದ್ದಾರೆ ಅಂತ ಪಕ್ಷದ ವಕ್ತಾರರು ತಿಳಿಸಿದ್ದಾರೆ.

ಇದನ್ನೂ ಓದಿ: ‘ಕಾಶ್ಮೀರದ ಮುಸ್ಲಿಮರ ಪರ ದನಿ ಎತ್ತಲಿದ್ದೇವೆ’ ಎಂದು ಭಾರತವನ್ನೇ ಕೆಣಕಿದ ತಾಲಿಬಾನ್​​…

Source: newsfirstlive.com Source link