ಎಣ್ಣೆ ಕಿಕ್​ನಲ್ಲಿ ಅಪರಿಚಿತರೊಂದಿಗೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

ಎಣ್ಣೆ ಕಿಕ್​ನಲ್ಲಿ ಅಪರಿಚಿತರೊಂದಿಗೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

ಬೆಂಗಳೂರು : ಮದ್ಯದ ಅಮಲಿನಲ್ಲಿ ಅಪರಿಚಿತರೊಡನೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಬಸವೇಶ್ವರ ನಗರದಲ್ಲಿ ನಡೆದಿದೆ.

ಬಾಲಾಜಿ (35)ಸಾವನ್ನಪ್ಪಿದ ವ್ಯಕ್ತಿ. ಮೃತ ಬಾಲಾಜಿ ಸ್ನೇಹಿತರಾದ ಸುರೇಶ್ ಹಾಗೂ ಚಿಕ್ಕಣ್ಣ ರೊಂದಿಗೆ ಬಾರ್ ಗೆ ತೆರಳಿದ್ದಾರೆ. 9 ಗಂಟೆ ನಂತರ ಲಾಕ್ ಡೌನ್ ಹಿನ್ನೆಲೆ ಬಿಲ್ ಕೊಟ್ಟು ವಾಪಸ್ ಆಗಲು ಮುಂದಾಗಿದ್ದ ಮೂವರು, ಇದೇ ವೇಳೆ ಕ್ಯಾಶ್​ ಕೌಂಟರ್ ಬಳಿ ನಿಂತಿದ್ದ ಇಬ್ಬರು ಅಪರಿಚಿತರೊಡನೆ ಕಿರಿಕ್ ಶುರುವಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: ದ್ವೀಪ ರಾಷ್ಟ್ರದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ಘೋಷಣೆ.. ತುತ್ತು ಅನ್ನಕ್ಕೂ ಪರದಾಡ್ತಿದ್ದಾರೆ ಶ್ರೀಲಂಕನ್ನರು

ಈ ವೇಳೆ ಜಗಳ ಅತಿರೇಕಕ್ಕೆ ಹೋಗಿದ್ದು, ಮದ್ಯದ ಅಮಲಿನಲ್ಲಿದ್ದ ಮೃತ ಬಾಲಾಜಿ ಮತ್ತು ಸ್ನೇಹಿತರು ಅಪರಿಚಿತರ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹಲ್ಲೆಯ ನಂತರ ಧಾರಾಕಾರ ಮಳೆ ಸುರಿಯುತ್ತಿದ್ದರಿಂದ ಬಾರ್​ ಪಕ್ಕದಲ್ಲಿದ್ದ ಶೆಡ್​ನ ಕೆಳಗೆ ನಿಂತಿದ್ದಾರೆ. ಮಳೆ ನಿಂತ ಮೇಲೆ ಬಾಲಾಜಿಯ ಸ್ನೇಹಿತರು ತೆರಳಿದ್ದಾರೆ. ಇದೇ ಸಮಯವನ್ನು ಕಾಯುತ್ತ ಹೊಂಚು ಹಾಕಿ ನಿಂತಿದ್ದ ಹಲ್ಲೆಗೊಳಗಾದ ಅಪರಿಚಿತರು, ಸ್ನೇಹಿತರು ಹೊರಡುತ್ತಿದ್ದಂತೆ ಏಕಾಏಕಿ ಬಾಲಾಜಿಯ ಮೇಲೆ ದಾಳಿ ಮಾಡಿ ಹಲ್ಲೆಗೈದಿದ್ದಾರೆ. ಮಾರಣಾಂತಿಕವಾಗಿ  ಹಲ್ಲೆ ಮಾಡಿದ ಪರಿಣಾಮ ಬಾಲಾಜಿ ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಘಟನೆ ಸಂಬಂಧ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾಗಿ ನ್ಯೂಸ್​ಫಸ್ಟ್​ಗೆ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ಕೆಲಸದಿಂದ ಕಿತ್ತರೆಂದು ಕೆಲಸ ಮಾಡುತ್ತಿದ್ದ ಅಂಗಡಿಗೆ ಕನ್ನ ಹಾಕಿದ ಚಾಲಾಕಿ!

Source: newsfirstlive.com Source link